
ಧಾರವಾಡ,ಆ೨೫ ಬಸವಕೇಂದ್ರದವರು ಇತ್ತಿಚಿಗೆ ವಚನಲೇಖನ ಸ್ಪರ್ಧೆಯನ್ನು ಏರ್ಪಡಿಸಿದರು. ಅದರಲ್ಲಿ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನವನ್ನು ಪಡೆದುಕೊಂಡಿದ್ದರು. ಅವುಗಳನ್ನು ಶಾಲೆಯ ಆವರಣದಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕಚೇರಿ ಅಧೀಕ್ಷಕರಾದ ಶಿವಲಿಂಗ ನೀಲಗುಂದ ಮಾತನಾಡಿ ವಚನಗಳು ಇಂದಿನ ಸಮಾಜ ಸುಧಾರಣೆಗೆ ಅತ್ಯಂತ ಅವಶ್ಯವಾಗಿವೆ. ಮಕ್ಕಳು ವಚನಗಳನ್ನು ಅಭ್ಯಸಿಸಿ ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಅವರು ಜೀವನದಲ್ಲಿ ಯಶಸ್ಸು ಕಾಣುವುದು ಖಚಿತವೆಂದರು. ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಭುವನೇಶ್ವರಿ ದಂಡಿನ ಮಾತನಾಡಿ, ಇಂದಿನ ಮಕ್ಕಳು ಶಾಲೆಯ ಪಠ್ಯ ಪುಸ್ತಕಗಳ ವಿಷಯ ಅಭ್ಯಾಸದೊಂದಿಗೆ ಪ್ರಬಂಧ ಲೇಖನ, ವಚನ ಕಂಠಪಾಠ, ಭಾಷಣ ಸ್ಪರ್ಧೆ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಅವರಿಗೆ ಆತ್ಮವಿಶ್ವಾಸ ಹೆಚ್ಚುವುದು ಎಂದರು.
ಶಿಕ್ಷಕಿಯರಾದ ಕುಮಾರಿ ಅನುಶ್ರೀ ಚವಲಗಿ, ಶ್ರೀಮತಿ.ಎಸ್.ಎನ್.ಪಾಟೀಲ, ಶ್ರೀಮತಿ ಮಂಜುಳಾ ಬಾವಿಹಾಳ, ಶ್ರೀಮತಿ. ಶಶಿಕಲಾ ಹಿರೇಮಠ, ಶ್ರೀಮತಿ ಮಂಜುಳಾ ಹನಸಿ ಭಾಗವಹಿಸಿದ್ದರು.































