Home ಜಿಲ್ಲೆ ಕಲಬುರಗಿ 8.34 ಲಕ್ಷ ರೂ.ಮೌಲ್ಯದ ರಸಗೊಬ್ಬರ ವಶಕ್ಕೆ

8.34 ಲಕ್ಷ ರೂ.ಮೌಲ್ಯದ ರಸಗೊಬ್ಬರ ವಶಕ್ಕೆ

ಕಲಬುರಗಿ,ಆ.24-ನಗರದ ಕಪನೂರ ಇಂಡಸ್ಟ್ರೀಯಲ್ ಏರಿಯಾದ ದಾಲ್ಮಿಲ್ ಗೋದಾಮು ಒಂದರಲ್ಲಿ ಸಬ್ಸಿಡಿ ದರದಲ್ಲಿ ರೈತರಿಗೆ ವಿತರಿಸುವ ಯೂರಿಯಾ ರಸಗೊಬ್ಬರವನ್ನು ಅಕ್ರಮವಾಗಿ ಖರೀದಿಸಿ ಸಂಗ್ರಹಿಸಿ ಇಡಲಾಗಿದೆ ಎಂಬ ಮಾಹಿತಿ ಮೇಲೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯ ಸಹಾಯಕ ಕೃಷಿ ನಿರ್ದೇಶಕಿ ಕವಿತಾ, ಕೃಷಿ ಅಧಿಕಾರಿ ಜಹಾಂಗೀರ್ ಅವರು ದಾಳಿ ನಡೆಸಿ 8,34, 794 ರೂ.ಮೌಲ್ಯದ 1196 ಚೀಲ ಯೂರಿಯಾ ರಸಗೊಬ್ಬರವನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ದಾಲ್‍ಮಿಲ್‍ನ ಶಿವಶರಣಪ್ಪ ಮತ್ತು ಇತರರ ಮೇಲೆ ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.