
ಹಿರಿಯೂರು,ಆ.೨೪-ಕರ್ನಾಟಕ ಆರ್ಯವೈಶ್ಯ ಮಹಾಸಭಾ ಹಾಗೂ ಹಿರಿಯೂರು ಆರ್ಯವೈಶ್ಯ ಮಂಡಳಿ ಇವರ ಸಹಯೋಗದಲ್ಲಿ ಹಿರಿಯೂರಿನಲ್ಲಿ ಜಿ.ಎ.ವಿ.ಎಸ್ ಸಂಕಲ್ಪ ಯಾತ್ರೆ ನಡೆಸಲಾಯಿತು. ಇಲ್ಲಿನ ಶ್ರೀ ಕನ್ಯಕಾ ಪರಮೇಶ್ವರಿ ದೇವಾಲಯದಿಂದ ಹೊರಟ ಸಂಕಲ್ಪ ಯಾತ್ರೆಯು ನಗರದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ ವಾಗ್ದೇವಿ ಶಾಲೆಯ ವರೆಗೆ ಸಾಗಿ ಬಂತು.
ಈ ಸಂದರ್ಭದಲ್ಲಿ ಮಾತನಾಡಿದ ಆರ್ಯವೈಶ್ಯ ಮಂಡಳಿ ಮುಖಂಡರು ಹಾಗೂ ವಾಗ್ದೇವಿ ವಿದ್ಯಾ ಸಂಸ್ಥೆಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಕೆ.ವಿ ಅಮರೇಶ್ ಕರ್ನಾಟಕ ಆರ್ಯವೈಶ್ಯ ಮಹಾಸಭಾ ರಾಜ್ಯಾಧ್ಯಕ್ಷರಾದ ಆರ್.ಪಿ ರವಿಶಂಕರ್ ಇವರ ನೇತೃತ್ವದಲ್ಲಿ ಅಭಿವೃದ್ಧಿಪರ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ ಕೇವಲ ಒಂದು ಸಂಘಟನೆಯಾಗಿ ಮಾತ್ರ ಉಳಿದಿಲ್ಲ ಸಂಕಷ್ಟದಲ್ಲಿರುವವರ ಕಲ್ಪವೃಕ್ಷವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.ಇಡೀ ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಕನಿಷ್ಠ ೫೦೦೦ ಉದ್ಯಮಗಳ ಸ್ಥಾಪನೆ ಆ ಮೂಲಕ ೫,೦೦,೦೦೦ ಯುವಕರಿಗೆ ಉದ್ಯೋಗ ಸೃಷ್ಟಿಸುವ ಯೋಜನೆ ಹಾಕಿಕೊಳ್ಳಲಾಗಿದೆ.
ಕಳೆದ ಎಂಟು ವರ್ಷಗಳಲ್ಲಿ ಸಮಾಜದ ಬಂಧುಗಳ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಸುಮಾರು ೪೦ ಕೋಟಿಗೂ ಹೆಚ್ಚು ವಿನಿಯೋಗಿಸುವ ಮೂಲಕ ಅಶಕ್ತರಿಗೆ, ಅಬಲರಿಗೆ ಹಾಗೂ ಅವಶ್ಯಕತೆ ಇರುವವರಿಗೆ ಕಾಮಧೇನುವಾಗಿ ಕೆಲಸ ನಿರ್ವಹಿಸುತ್ತಿದೆ ಎಂದರು. ಜಿ ಎ ವಿ ಎಸ್ ಈಗಾಗಲೇ ಇರುವ ತಮ್ಮ ವ್ಯಾಪಾರ ವ್ಯವಹಾರ ಉದ್ಯಮಗಳನ್ನು ಮತ್ತಷ್ಟು ಬೆಳೆಸಿಕೊಳ್ಳಲು ಮಾರ್ಗದರ್ಶನ ಸಲಹೆ ಸಹಕಾರ ನೀಡುತ್ತಿದೆ. ಬ್ಯಾಂಕಿಂಗ್ ಕ್ಷೇತ್ರದಿಂದ ದೊರೆಯುವ ಸೌಲಭ್ಯಗಳಿಗೆ ಉತ್ತೇಜನ ನೀಡುತ್ತಿದೆ ಸಮಯದ ಅಭಿವೃದ್ಧಿಗಾಗಿ ಕಾರ್ಯನಿರ್ಸುತ್ತಿದೆ ಎಂದರು.
ಇತ್ತೀಚಿನ ಜಾಗತಿಕ ಪ್ರಪಂಚದ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸುವ ಹಾಗೂ ಯುವಕರಲ್ಲಿ ದೇಶಭಕ್ತಿಯನ್ನು ಬಿಂಬಿಸುವ ಕೆಲಸ ನಿರ್ವಹಿಸುತ್ತಾ ಬಂದಿದೆ ಎಂದರು ಸಂಕಲ್ಪ ಯಾತ್ರೆಯಲ್ಲಿ ಆರ್ಯವೈಶ್ಯ ಸಮಾಜದ ಅಧ್ಯಕ್ಷರಾದ ಸತ್ಯನಾರಾಯಣ ಕಾರ್ಯದರ್ಶಿ ಪಿ ವಿ ನಾಗರಾಜ್ ವಾಸ್ತವಿ ಯುವಜನ ಸಂಘದ ಅಧ್ಯಕ್ಷ ವಿ ಜಗದೀಶ್ ನಗರಸಭೆ ಮಾಜಿ ಸದಸ್ಯ ರಮೇಶ್ ಬಾಬು ದೇವರಾಜ್ ಮೂರ್ತಿ, ರಾಜ್ ಕುಮಾರ್,ಸತೀಶ್ ಬಾಬು, ರಾಜೇಶ್, ನಾಗೇಶ್, ಅರುಣ್, ಪ್ರಭಾಕರ್, ಆಂಜನೇಯ, ಪ್ರತಾಪ್ ,ಪ್ರಸಾದ್, ಅನಂತ್ ಕುಮಾರ್, ಬಾಲಾಜಿ, ಲಕ್ಷ್ಮೀಶ ಸಂಧ್ಯಾ ಅಮರೇಶ್, ಗೀತಾ ರಾಧಾಕೃಷ್ಣ, ಮಧುರ, ನಾಗಸುಂದರಮ್ಮ ಸೇರಿದಂತೆ ಆರ್ಯವೈಶ ಮಂಡಳಿ, ಆರ್ಯವೈಶ್ಯ ಮಹಿಳಾ ಮಂಡಳಿ,ಆರ್ಯವೈಶ್ಯ ಯುವಜನ ಸಂಘದ ನೂರಾರು ಜನ ಕೇಸರಿ ಬಾವುಟಗಳನ್ನು ಹಿಡಿದು ಜೈ ಜೈ ವಾಸವಿ ಜೈ ಜೈ ಕನ್ನಿಕಾಂಬ ಎಂದು ಹೇಳುತ್ತಾ ಸಾಗಿದರು.































