Home ಜಿಲ್ಲೆ ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆ

ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆ

ಧಾರವಾಡ, ಆ೨೨: ಧಾರವಾಡ ಪೊಲೀಸ್ ಅಧೀಕ್ಷಕರಾದ ಗುಂಜನ್ ಆರ್ಯ ಅವರ ಅಧ್ಯಕ್ಷತೆಯಲ್ಲಿ ಇಂದು (ಅ.೨೦) ಬೆಳಿಗ್ಗೆ ಧಾರವಾಡ ಜಿಲ್ಲಾ ಪೊಲೀಸ್ ಕಾರ್ಯಾಲಯದಲ್ಲಿ ಅಗಸ್ಟ್ ೨೬, ೨೦೨೬ ರಂದು ಜರುಗುವ ಈದ ಮಿಲಾದ ಹಬ್ಬದ ಪ್ರಯುಕ್ತ ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆ ಜರುಗಿತ್ತು.


ಸಭೆಯಲ್ಲಿ ಹಾಜರಿದ್ದ ಅಣ್ಣಿಗೇರಿ, ನವಲಗುಂದ, ಅಳ್ಳಾವರ ತಾಲೂಕಿನ ಮುಸ್ಲಿಂ ಸಮುದಾಯದ ಮುಖಂಡರು ಮಾತನಾಡಿ, ಈದ ಮಿಲಾದ ಹಬ್ಬದ ಕಾಲಕ್ಕೆ ಯಾವುದೇ ರೀತಿಯ ಡಿಜೆ ಬಳಕೆ ಮಾಡುವುದಿಲ್ಲ ಅಂತಾ ಸ್ವಯಂ ಪ್ರೇರಿತವಾಗಿ ತೀರ್ಮಾನಿಸಿರುವುದಾಗಿ ತಿಳಿಸಿದರು. ನಂತರ ಪೊಲೀಸ್ ಅಧೀಕ್ಷರು. ಧಾರವಾಡ ರವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ಶಾಂತಿ, ಸೌಹಾರ್ದತೆ ಹಾಗೂ ಸಾಮರಸ್ಯದಿಂದ ಈದ ಮಿಲಾದ ಹಬ್ಬವನ್ನು ಆಚರಿಸಲು ತಿಳಿಸಿದರು.


ಈ ಸಂದರ್ಭದಲ್ಲಿ ಜಿಲ್ಲೆಯ ಎಲ್ಲ ಮುಸ್ಲಿಂ ಮುಖಂಡರು ಹಾಗೂ ಅಂಜುಮನ್ ಸಂಸ್ಥೆಯ ಅಧ್ಯಕ್ಷರು. ಪದಾಧಿಕಾರಿಗಳು, ಎಲ್ಲ ತಾಲೂಕಿನ ಎಲ್ಲ ಧರ್ಮದ ಮುಖಂಡರುಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಪಿಐ ಡಿಎಸ್‌ಬಿ ಅವರು ಸ್ವಾಗತಿಸಿದರು.