ಕಲಬುರಗಿ: ಎಸ್‍ಸಿ ಒಳಮೀಸಲಾತಿ ಜಾರಿಯಲ್ಲಿ ಬಂಜಾರ,ಕೊರಚ,ಕೊರಮ ಮತ್ತು ಭೋವಿ ಸಮುದಾಯಗಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ನ್ಯಾಯಯುತ ಮೀಸಲಾತಿ ಹಾಗೂ ನೇಮಕಾತಿ ರೋಸ್ಟರ್ ವ್ಯವಸ್ಥೆ ಜಾರಿಗೊಳಿಸುವಂತೆ ಆಗ್ರಹಿಸಿ ಬಂಜಾರ,ಕೊರಚ,ಕೊರಮ ಮತ್ತು ಭೋವಿ ಸಮುದಾಯದ ವಿದ್ಯಾರ್ಥಿಗಳ ಒಕ್ಕೂಟದಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.ಸಚಿನ್ ಚವ್ಹಾಣ್,ಕಿರಣ್ ಲಮಾಣಿ,ಸಂತೋಷ,ಪಿತಾಂಬರ ಆರ್, ಕಿರಣ ರಾಠೋಡ ಸೇರಿದಂತೆ ಹಲವರು ಪಾಲ್ಗೊಂಡರು.