Home ಜಿಲ್ಲೆ ಮಂಗಳೂರು ಗಾಂಜಾ ವಶ-ಆರೋಪಿ ಬಂಧನ

ಗಾಂಜಾ ವಶ-ಆರೋಪಿ ಬಂಧನ

ಪುತ್ತೂರು: ಉಪ್ಪಿನಂಗಡಿ ಸಮೀಪದ ವಳಾಲಿನ ಪಡ್ಪು ಎಂಬಲ್ಲಿ ಯುವಕನೋರ್ವನನ್ನು ಬಂಧಿಸಿದ ಅಬಕಾರಿ ಇಲಾಖೆಯ ಅಧಿಕಾರಿಗಳು ಆತನಿಂದ ೬೪ ಗ್ರಾಂ ಗಾಂಜಾ ಮತ್ತು ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ಆರೋಪಿಯನ್ನು ಉಪ್ಪಿನಂಗಡಿಯ ಕಡವಿನಬಾಗಿಲು ನಿವಾಸಿ ಅಬ್ದುಲ್ ಕುಂಞ ಎಂಬವರ ಪುತ್ರ ಮೊಹಮ್ಮದ್ ಜಿಯಾದ್ ಎಂದು ಗುರುತಿಸಲಾಗಿದೆ.
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತ ಅವರ ನಿರ್ದೇಶನದಂತೆ ಜಿಲ್ಲಾ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ಪುತ್ತೂರು ವಲಯ ಅಬಕಾರಿ ನಿರೀಕ್ಷಕ ಲೋಕೇಶ್ ಸಿ ಅವರ ತಂಡ ರಾತ್ರಿ ೧೧.೩೦ಕ್ಕೆ ತಪಾಸಣೆ ಮಾಡುತ್ತಿದ್ದಾಗ ಗಾಂಜಾ ಆರೋಪಿಯನ್ನು ಬಂಧಿಸಲಾಗಿದೆ. ಆತನಿಂದ ವಶಪಡಿಸಿಕೊಂಡ ವಸ್ತುಗಳ ಮೌಲ್ಯ ರೂ.೧೭ ಸಾವಿರ ಎಂದು ಅಂದಾಜಿಸಲಾಗಿದೆ. ಕಾರ್ಯಾಚರಣೆಯಲ್ಲಿ ಅಬಕಾರಿ ಪೇದೆ ಎಲ್ಲಪ್ಪ ಹಾಗೂ ವಾಹನ ಚಾಲಕ ಶರತ್ ಕುಮಾರ್ ಭಾಗವಹಿಸಿದ್ದರು. ಆರೋಪಿಯನ್ನು ಎನ್‌ಡಿಪಿಎಸ್ ಕಾಯ್ದೆಯಡಿ ಬಂಧಿಸಿ ಪ್ರಕರಣ ದಾಖಲಿಸಲಾಗಿದ್ದು, ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.