Home ಜಿಲ್ಲೆ ಕಲಬುರಗಿ ಪರಮಾಣು ಶಕ್ತಿ ಯುದ್ಧಕಲ್ಲ, ರಾಷ್ಟ್ರದ ಅಭಿವೃದ್ಧಿಗೆ ಸದುಪಯೋಗವಾಗಲಿ

ಪರಮಾಣು ಶಕ್ತಿ ಯುದ್ಧಕಲ್ಲ, ರಾಷ್ಟ್ರದ ಅಭಿವೃದ್ಧಿಗೆ ಸದುಪಯೋಗವಾಗಲಿ

ಕಲಬುರಗಿ: ಪರಮಾಣು ಶಕ್ತಿಯನ್ನು ಬಳಸಿಕೊಂಡು ಹಿರೋಷಿಮಾ ಮತ್ತು ನಾಗಾಷಕಿಯ ಮೇಲೆ ದಾಳಿಮಾಡುವ ಮೂಲಕ ಅನೇಕ ಜನರ ಸಾವಿಗೆ ಕಾರಣವಾದದ್ದು ಮರೆಯುವಂತಿಲ್ಲ. ಇದು ಮಾನವನಿಗೆ ಒಂದು ಪಾಠವಾಗಿದೆ. ಇದೇ ಶಕ್ತಿಯನ್ನು ಬಳಸಿಕೊಂಡು ವಿದ್ಯುಚ್ಛಕ್ತಿ ಉತ್ಪಾದನೆ, ಕೈಗಾರಿಕಾ ಕೇತ್ರ ಸೇರಿದಂತೆ ಮತ್ತಿತರರ ಅಭಿವೃದ್ಧಿಗಾಗಿ ಬಳಸಿದರೆ, ನಾಶವಾಗುವುದು ತಪ್ಪುತ್ತದೆ ಮತ್ತು ರಾಷ್ಟ್ರ ಅಭಿವೃದ್ಧಿಯಾಗಲು ಸಾಧ್ಯವಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಆಳಂದ ರಸ್ತೆಯ ಜೆ.ಆರ್ ನಗರದಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಸಂಸ್ಥೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಹಿರೋಷಿಮಾ ಮತ್ತು ನಾಗಾಷಕಿ ಕರಾಳ ದಿನಾಚರಣೆ’ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಯುದ್ದದಿಂದ ಯಾವುದೇ ರಾಷ್ಟ್ರವು ಪ್ರಗತಿ ಕಾಣಲು ಸಾಧ್ಯವಿಲ್ಲ. ಬದಲಿಗೆ ಪರಸ್ಪರ ಪ್ರೀತಿ, ಸ್ನೇಹ, ಸಹಕಾರ ಮನೋಭಾವನೆಯಿಂದ ಕಾರ್ಯನಿರ್ವಹಿಸದರೆ, ದೇಶದಲ್ಲಿ ಶಾಂತಿ ನೆಲೆಸಿ, ಅಭಿವೃದ್ಧಿಯಾಗುತ್ತದೆ. ಇದನ್ನು ಪ್ರತಯೊಂದು ದೇಶವು ಅರ್ಥಮಾಡಿಕೊಂಡು ಕೆಲಸ ಮಾಡಬೇಕಾಗಿದೆ. ಪರಮಾಣು ಶಕ್ತಿಯು ಬಹುವಿಧ ಉಪಯೋಗವನ್ನು ಹೊಂದಿದ್ದು, ಅದನ್ನು ಸಂಪೂರ್ಣವಾಗಿ ಶಾಂತಿ, ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಉಪಯೋಗಿಸಬೇಕಾದದ್ದು ತುಂಬಾ ಅವಶ್ಯಕವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥ ಅಸ್ಲಾಂ ಶೇಖ್, ಪ್ರಮುಖರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ಓಂಕಾರ ವಠಾರ ಹಾಗೂ ವಿದ್ಯಾರ್ಥಿಗಳಿದ್ದರು.