
ಚಿಕ್ಕನಾಯಕನಹಳ್ಳಿ, ಜು. ೨೭- ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬಿಡುಗಡೆಯಾಗುವ ಅನುದಾನದಲ್ಲಿ ಶೇ. ೨೫.೧ ರಷ್ಟು ಅನುದಾನದಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯದ ಅಭಿವೃದ್ದಿಗೆ ಯಾವ ಯಾವ ರೀತಿಯ ಕ್ರಮಗಳನ್ನು ಕೈಗೊಂಡಿದ್ದೀರಿ ಎಂಬುದನ್ನು ಹಾಗೂ ಫಲಾನುಭವಿಗಳ ಸ್ಪಷ್ಟ ಹಾಗೂ ನಿಖರವಾದ ಮಾಹಿತಿಯನ್ನು ನೀಡಬೇಕು ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ಸೂಚನೆ ನೀಡಿದರು.
ಪಟ್ಟಣದ ತಾಲ್ಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ನಡೆದ ವಿಶೇಷ ಎಸ್‌ಸಿ, ಎಸ್‌ಟಿ ಹಿತರಕ್ಷಣಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಾಲ್ಲೂಕಿನಲ್ಲಿರುವ ೨೭ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಸರಿಯಾದ ಮಾಹಿತಿ ನೀಡುವಂತೆ ಈ ಹಿಂದೆ ತಿಳಿಸಿದ್ದರು ಸರಿಯಾದ ಮಾಹಿತಿ ನೀಡಿಲ್ಲ ಬೇಕಾಬಿಟ್ಟಿ ಮಾಹಿತಿ ನೀಡಿದ್ದಾರೆ ಅದ್ದರಿಂದ ಸರಿಯಾದ ಸ್ಪಷ್ಟವಾದ ಮಾಹಿತಿಯನ್ನು ನೀಡುವಂತೆ ತಿಳಿಸಿದರು.
ತಾಲ್ಲೂಕಿನಲ್ಲಿ ನಿವೇಶನ ರಹಿತರಿಗೆ, ನಿವೇಶನ ಇರುವಂತಹರಿಗೆ ಮನೆ ಮಂಜೂರಾಗಿರುವ ಬಗ್ಗೆ ಗ್ರಾಮ ಸಭೆಯಲ್ಲಿ ಆಯ್ಕೆ ಮಾಡಬೇಕು ಅದರಂತೆ ಪಟ್ಟಣದಲ್ಲಿ ಈಗಾಗಲೇ ಗುರುತಿಸಿರುವ ೪೧೦ ಮನೆಗಳಲ್ಲಿ ಎಸ್‌ಸಿ ಎಸ್‌ಟಿಗೆ ಎಷ್ಟು ಮೀಸಲಾತಿ ನೀಡಬೇಕು ಎಂದು ಗುರುತಿಸಿ ಇದರೊಂದಿಗೆ ಅಂಗವಿಕಲರಿಗೆ, ವೃದ್ದರಿಗೆ, ಕಡುಬಡವರಿಗೆ ವಿಧವೆಯರಿಗೆ, ಅಂತರ್ಜಾತಿ ವಿವಾಹವಾದವರಿಗೆ ಅದ್ಯತೆ ನೀಡಿ ಎಂದು ಸೂಚನೆ ನೀಡಿದರು.
ದಲಿತ ಮುಖಂಡ ಮಲ್ಲಿಕಾರ್ಜುನ್ ಮಾತನಾಡಿ, ನಾವು ಅನೇಕ ಸಭೆಯಲ್ಲಿ ತಿಳಿಸಿದರು ಸರಿಯಾದ ಮಾಹಿತಿ ನೀಡದ ಅದಿಕಾರಿಗಳು ಬೇಜಾವಬ್ದಾರಿ ತೋರಿದ್ದಾರೆ. ಇದರೊಂದಿಗೆ ತಾಲ್ಲೂಕಿನಲ್ಲಿ ಇದುವರೆಗೆ ಸು.೨೦ಜನ ಅಂರ್ತಾಜಾತಿ ವಿವಾಹವಾಗಿದ್ದಾರೆ. ಅದರೆ ಇದುರವೆಗೆ ಅವರಿಗೆ ಸರ್ಕಾರಿದಿಂದ ಸಿಗಬೇಕಾದ ಸೌಲಭ್ಯಗಳು ಸಿಕ್ಕಿಲ್ಲ. ಇದರೊಂದಿಗೆ ಗ್ರಾ.ಪಂ.ಅಧಿಕಾರಿಗಳು ಕೇವಲ ಅಂಕಿ ಅಂಶಗಳನ್ನು ನೀಡಿದ್ದಾರೆ ವಿನಃ ಸರಿಯಾದ ಸಂಪೂರ್ಣವಾದ ಮಾಹಿತಿ ನೀಡಿಲ್ಲ ಇನ್ನಾದರು ಮುಂದಿನ ಸಭೆಯಲ್ಲಿ ಸರಿಯಾದ ಮಾಹಿತಿ ನೀಡಬೇಕು ಎಂದರು.
ಇದುವರೆಗೆ ನಿವೇಶನ ಇಲ್ಲದವರಿಗೆ ನಿವೇಶನ ನೀಡಿಲ್ಲ ಮನೆಗಳನ್ನು ನೀಡಿಲ್ಲ, ಶೆಟ್ಟಿಕೆರೆ ಗ್ರಾ.ಪಂ.ವ್ಯಾಪ್ತಿಯಲ್ಲಿ ೮.೫ ಲಕ್ಷ ರೂ. ವೆಚ್ಚದಲ್ಲಿ ಅಂಗಡಿಮಳಿಗೆಗಳನ್ನು ನಿರ್ಮಿಸಿದ್ದು ಇದರಲ್ಲಿ ನಮಗೆ ಮೀಸಲಾತಿ ನೀಡದೆ ಎಲ್ಲ ಮಳಿಗೆಗಳನ್ನು ಜನರಲ್‌ಗೆ ನೀಡಿದ್ದಾರೆ ಈ ಬಗ್ಗೆ ಕ್ರಮಕೈಗೊಳ್ಳುವಂತೆ ತಿಳಿಸಿದರು.
ರಾಜ್ಯ ಮಾದಿಗ ದಂಡೋರ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಬೇವಿನಹಳ್ಳಿ ಚನ್ನಬಸವಯ್ಯ ಮಾತನಾಡಿ, ನಮ್ಮ ಮೀಸಲಾತಿಯ ಅನುದಾನವನ್ನು ಯಾವ ಕಾರಣಕ್ಕೆ ಖರ್ಚು ಮಾಡಿದ್ದಾರೆ. ಯಾರಿಗೆ ಖರ್ಚು ಮಾಡಿದ್ದಾರೆ ಎಂಬುದರ ಬಗ್ಗೆ ಪ್ರತಿ ಗ್ರಾ.ಪಂ.ನ ನೋಟಿಸ್ ಬೋರ್ಡ್‌ನಲ್ಲಿ ಪ್ರಕಟಿಸಬೇಕು. ಅದರೆ ಇದುವರೆಗೆ ಈ ಕೆಲಸ ಮಾಡಿಲ್ಲ. ನಮ್ಮ ಎಸ್‌ಸಿ ಎಸ್‌ಟಿ ಎಂದರೆ ಅಧಿಕಾರಿಗಳಿಗೂ ಅಸಡ್ಡೆಯಾಗಿದೆ ಎಂದು ಅರೋಪಿಸಿದರು.
ತಹಶೀಲ್ದಾರ್ ಮಮತಾ ಎಂ. ಮಾತನಾಡಿ, ಪಂಚಾಯ್ತಿವಾರು ಮಾಹಿತಿ ಪಡೆಯುವಲ್ಲಿ ಸ್ವಲ್ಪ ತಪ್ಪಾಗಿದೆ ಎಂದು ಸಭೆಯಲ್ಲಿ ಎಲ್ಲರ ಕ್ಷಮೆ ಕೋರಿದ ಅವರು ಇನ್ನು ಮೂರು ದಿನದಲ್ಲಿ ಸಂಪೂರ್ಣವಾದ ಮಾಹಿತಿಯನ್ನು ನೀಡುವುದಾಗಿ ತಿಳಿಸಿದರು.
ಸಭೆಯಲ್ಲಿ ಗಣಿಬಾಧಿತ ಪ್ರದೇಶದ ವಸತಿ, ನಿವೇಶನ ನೀಡುವ ಬಗ್ಗೆ, ಇ- ಸ್ವತ್ತು ಮಾಡಿಕೊಡುವ, ಜಾಣೆಹಾರ್‌ನ ನಮ್ಮ ಜನಾಂಗದ ಜನರಿಗೆ ಕುಡಿಯುವ ನೀರನ್ನು ಒದಗಿಸುವುದು, ಸಫಾಯಿ ಕರ್ಮಚಾರಿಗಳಿಗೆ ಎಷ್ಟು ಜನ ಇರುವುದು ಫಲಾನುಭವಿಗಳಿಗೆ ಸರ್ಕಾರದ ಯಾವ ಯಾವ ಸೌಲಭ್ಯವನ್ನು ಕಲ್ಪಿಸಿಕೊಟ್ಟಿರುವ ಬಗ್ಗೆ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಮುಖಂಡರುಗಳಾದ ಜಿ.ಪಂ. ಮಾಜಿ ಅದ್ಯಕ್ಷ ರಘುನಾಥ್, ಅಶೋಕ್, ಬೆಳಗಿನಹಳ್ಳಿ ರಾಜು, ಸಾಕ್ಯಗೌತಮ್, ಸಿ.ಎಸ್.ಲಿಂಗದೇವರು, ಗಿರಿಯಪ್ಪ, ಚಿದಾನಂದಮೂರ್ತಿ, ಶ್ರೀನಿವಾಸ್, ನರಸಿಂಹಮೂರ್ತಿ, ಮಂಜನಾಥ್, ಗೋವಿಂದ ಉಪಸ್ಥಿತರಿದ್ದರು.


































