Home ಜಿಲ್ಲೆ ಕಲಬುರಗಿ ಪೊಲೀಸ್ ಠಾಣೆಯಲ್ಲಿ ಅನುಭವಸ್ಥ ಸಿಬ್ಬಂದಿಯಿದ್ದರೆ ಮೇಲಧಿಕಾರಿಗಳಿಗೆ ಆನೆ ಬಲ: ಪಿಎಸ್‍ಐ ಜಾಕ್ನಳ್ಳಿ

ಪೊಲೀಸ್ ಠಾಣೆಯಲ್ಲಿ ಅನುಭವಸ್ಥ ಸಿಬ್ಬಂದಿಯಿದ್ದರೆ ಮೇಲಧಿಕಾರಿಗಳಿಗೆ ಆನೆ ಬಲ: ಪಿಎಸ್‍ಐ ಜಾಕ್ನಳ್ಳಿ

ಸೇಡಂ,ಜ,02:ಪೆÇಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಕೇವಲ ಕಾನೂನಿನ ಜ್ಞಾನವಿದ್ದರೆ ಸಾಲದು, ಜನರ ನಾಡಿಮಿಡಿತ ಹಾಗೂ ಸ್ಥಳೀಯ ಪರಿಸ್ಥಿತಿಯ ಪ್ರಾಯೋಗಿಕ ಅನುಭವವೂ ಅಷ್ಟೇ ಮುಖ್ಯವಾಗಿರುತ್ತದೆ. ಶಿವಶರಣಪ್ಪ ಮಳಖೇಡಕರ್ ಎಎಸ್‍ಐ ಅವರು ಪೆÇಲೀಸ್ ಠಾಣೆಗಳಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ ಅನುಭವ ಹೊಂದಿರುವ ಹಿರಿಯ ಸಿಬ್ಬಂದಿ, ಅವರ ಅನುಭವವೇ ನಮ್ಮಗೆ ಆನೆ ಬಲ ಬಂದಂತಾಗಿತ್ತು ಎಂದು ಮಳಖೇಡ ಪೆÇಲೀಸ್ ಠಾಣೆಯ ಪಿಎಸ್ ಐ ಶಿವಶರಣಪ್ಪ ಜಾಕ್ನಳ್ಳಿ ಮುಕ್ತಕಂಠದಿಂದ ಶ್ಲಾಘಿಸಿದರು.

ತಾಲೂಕಿನ ಮಳಖೇಡ ಪೆÇಲೀಸ್ ಠಾಣೆಯಲ್ಲಿ ಸಿಬ್ಬಂದಿ ಶಿವಶರಣಪ್ಪ ಮಳಖೇಡಕರ್ ಎಎಸ್ ಐ ಅವರ ವಯೋನಿವೃತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಮ್ಮ ಇಲಾಖೆಯಲ್ಲಿ ದಿನನಿತ್ಯದ ಸವಾಲುಗಳನ್ನು ಎದುರಿಸಲು ಅನುಭವಸ್ಥ ಸಿಬ್ಬಂದಿಯ ಮಾರ್ಗದರ್ಶನ ಅತ್ಯಂತ ಅಗತ್ಯ. ಕಾನೂನು ಸುವ್ಯವಸ್ಥೆ ಕಾಪಾಡುವುದು, ಕ್ಲಿಷ್ಟಕರ ಪ್ರಕರಣಗಳನ್ನು ಭೇದಿಸುವುದು ಮತ್ತು ಸಾರ್ವಜನಿಕರೊಂದಿಗೆ ಸೌಹಾರ್ದಯುತ ಬಾಂಧವ್ಯ ಬೆಳೆಸಿಕೊಳ್ಳುವಲ್ಲಿ ಹಿರಿಯ ಪೇದೆಗಳು ಹಾಗೂ ಮುಖ್ಯ ಪೇದೆಗಳ ಒಡನಾಟ ಇಲಾಖೆಗೆ ದಿಕ್ಸೂಚಿಯಾಗಿದೆ. ಮೇಲಧಿಕಾರಿಗಳಾಗಿ ನಾವು ಬರುವ ಮುನ್ನವೇ ಸ್ಥಳೀಯ ಇತಿಹಾಸ ಮತ್ತು ಅಪರಾಧಗಳ ಹಿನ್ನೆಲೆಯನ್ನು ಅರಿತಿರುವ ಇಂತಹ ಸಿಬ್ಬಂದಿ, ತನಿಖಾ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತಾರೆ. ಶಿವಶರಣಪ್ಪ ಮಳಖೇಡಕರ್ ಎಎಸ್‍ಐ ಅವರು 32 ವರ್ಷದ ಸೇವೆಯಲ್ಲಿ ಕಪ್ಪು ಚುಕ್ಕೆ ಇಲ್ಲದೆ ನಿವೃತ್ತಿ ಹೊಂದುತ್ತಿರುವುದು ಸಂತಸದ ಸಂಗತಿ ಎಂದರು. ಈ ವೇಳೆಯಲ್ಲಿ ನಿವೃತ್ತ ಪೆÇಲೀಸ್ ಸಿಬ್ಬಂದಿ ಗೌರಿಶಂಕರ್, ಕ್ರೈಂ ಪಿಎಸ್ ಐ ಅಂಬುಬಾಯಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಪಾಟೀಲ್ ವೇದಿಕೆ ಮೇಲಿದ್ದರೂ,ಪೆÇಲೀಸ್ ಸಿಬ್ಬಂದಿಗಳಾದ ಅಲ್ಲಾಭಕ್ಷ,ಸಿದ್ದಲಿಂಗ, ಬಾಬುರಾವ್,ರಾಜಶೇಖರ, ಹಾಗೂ ಗ್ರಾಮಸ್ಥರಾದ ದೇವಾನಂದ್ ಪುರಾಣಿಕ, ಭೀಮರಾವ್ ಪಾಟೀಲ್, ರಾಜಪ್ಪ ಮಂಗಾ, ಅಂಬರೀಶ್ ಎಮ್ ಗುಡಿ, ಸೇರಿದಂತೆ ಹಲವರು ಮಾತನಾಡಿದರು.ಈ ವೇಳೆಯಲ್ಲಿ ವಿವಿಧ ಪೆÇಲೀಸ್ ಠಾಣೆಯ ಸಿಬ್ಬಂದಿಗಳು, ವಿವಿಧ ಗ್ರಾಮದಲ್ಲಿರುವ ಹಿರಿಯರು ಯುವಕರು ಇದ್ದರು.ನಿರೂಪಣೆ ಪೆÇೀಲಿಸ್ ಸಿಬ್ಬಂದಿ ಆನಂದ ಮಾಡಿದರೆ ಹಿರಿಯ ಪೆÇಲೀಸ್ ಸಿಬ್ಬಂದಿ ಮಲ್ಕಪ್ಪ ಸ್ವಾಗತಿಸಿದರು. ವಂದನಾರ್ಪಣೆ ಎಸ್ ಬಿ ಸಂಜು ಕುಮಾರ್ ಬಿರಾದರ್ ಮಾಡಿದರು.

ಪೆÇಲೀಸ್ ಇಲಾಖೆ ಎಂದರೆ ಸದಾ ಒತ್ತಡ, ಗಂಭೀರತೆ ಮತ್ತು ಕಠಿಣ ಸವಾಲುಗಳ ವಾತಾವರಣ. ಆದರೆ ಶಿವಶರಣಪ್ಪ ಮಳಖೇಡಕರ್ ಎಎಸ್‍ಐ ಅವರಲ್ಲಿ ಇಂತಹ ಕಠಿಣ ಪರಿಸ್ಥಿತಿಯಲ್ಲೂ ತಮ್ಮ ನಿಘಂಟಿನಲ್ಲಿ ಸಿಟ್ಟು ಎಂಬ ಪದಕ್ಕೇ ಜಾಗ ನೀಡದ ಅಪರೂಪದ ವ್ಯಕ್ತಿತ್ವ ಇವರದ್ದು.ಕರ್ತವ್ಯದ ಅವಧಿಯಲ್ಲಿ ಎಷ್ಟೇ ಒತ್ತಡವಿದ್ದರೂ, ಸಾರ್ವಜನಿಕರೊಂದಿಗೆ ಮತ್ತು ಸಹೋದ್ಯೋಗಿಗಳೊಂದಿಗೆ ಸದಾ ನಗುಮೊಗದಿಂದ, ಪ್ರೀತಿಯಿಂದ ವರ್ತಿಸುವ ಇವರ ಸರಳತೆ ಎಲ್ಲರಿಗೂ ಮಾದರಿಯಾಗಿದೆ.ಖಾಕಿ ಉಡುಪಿನೊಳಗಿರುವ ಈ ಶಾಂತ ಸ್ವಭಾವದ ಸರಳ ಜೀವಿ,ಕೇವಲ ಇಲಾಖೆಯ ಸಿಬ್ಬಂದಿಗೆ ಮಾತ್ರವಲ್ಲದೆ ಅವರು ಕರ್ತವ್ಯ ನಿರ್ವಹಿಸಿರುವ ಎಲ್ಲಾ ಠಾಣೆಗಳಲ್ಲಿ ಬರುವ ಸಾರ್ವಜನಿಕರ ಮನ ಗೆಲ್ಲುವಲ್ಲಿಯೂ ಯಶಸ್ವಿಯಾಗಿದ್ದಾರೆ.

ಶಿವಶರಣಪ್ಪ ಜಾಕ್ನಳ್ಳಿ ಪೆÇಲೀಸ್ ಠಾಣೆಯ ಪಿಎಸ್ ಐ ಮಳಖೇಡ

ಇಂದಿನ ದಿನಮಾನಗಳಲ್ಲಿ ಗೂಗಲ್ ನಲ್ಲಿ ಎಲ್ಲಾ ರೀತಿಯ ಸೌಲಭ್ಯಗಳು ದೊರೆಯುತ್ತವೆ ಆದರೆ ವ್ಯಕ್ತಿಯ ವ್ಯಕ್ತಿತ್ವದಲ್ಲಿ ದೊರೆಯುವಂತಹ ಅನುಭವ ಸಿಗದು ಅದಕ್ಕೆ ಉದಾಹರಣೆ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಶಿವಶರಣಪ್ಪ ಮಳಖೇಡಕರ್ ಎಎಸ್‍ಐ ಅನುಭವದ ಮಾತುಗಳು ಆಲಿಸಿದ್ದೇವೆ ಅವರ ಅನುಭವ ಜೀವನಪೂರ್ತಿ ಪಾಲಿಸುತ್ತೇನೆ.

ಸಿದ್ದಲಿಂಗ ಪೆÇಲೀಸ್ ಸಿಬ್ಬಂದಿ.

ಪೆÇೀಲಿಸರು ಎಂದರೆ ಭಯವಲ್ಲ ಭರವಸೆ ಎಂಬ ಭಾವ ಸಾರ್ವಜನಿಕರಿಗೆ ಅರಿವು ಮೂಡಿಸುವವರಲ್ಲಿ ನನ್ನ ಸ್ನೇಹಿತ ನಿವೃತ್ತಿ ಹೊಂದುತ್ತಿರುವ ಶಿವಶರಣಪ್ಪ ಮಳಖೇಡಕರ್ ಎಎಸ್‍ಐ ಅವರಿಗೆ ಸಲ್ಲುತ್ತದೆ. ಏಕೆಂದರೆ ಅವರು ನಿರ್ವಹಿಸಿರುವ ವಿವಿಧ ಪೆÇೀಲಿಸ್ ಠಾಣೆಯಲ್ಲಿ ಸಾರ್ವಜನಿಕರಿಗೆ ಮೇಲಾಧಿಕಾರಿಗಳಿಗೆ ಭರವಸೆಯ ವ್ಯಕ್ತಿಯಾಗಿ ಗುರುತಿಸಿಕೊಂಡವರು.
ಗೌರಿಶಂಕರ್ ನಿವೃತ್ತ ಪೆÇಲೀಸ್ ಸಿಬ್ಬಂದಿ