
ಬೆಂಗಳೂರು, ಜೂ. ೨೫- ರಾಷ್ಟ್ರೀಯ ಲಸಿಕಾ ದಿನವಾದ ಜೂನ್ ೨೮ ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪಲ್ಸ್ ಪೊಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಜೂನ್ ೨೮ ಲಸಿಕಾ ದಿನದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ದೇಶದಲ್ಲಿ ಪೊಲಿಯೋ ಮುಕ್ತ ವಾತಾವರಣ ನಿರ್ಮಾಣವಾಗಿದೆ. ದೇಶವನ್ನು ಪೊಲೀಯೊ ಮುಕ್ತ ಎಂಬ ಚರ್ಚೆ ಇತ್ತು. ಪ್ರಸ್ತುತ್ತು ಗ್ರಾಮೀಣ ಹಾಗೂ ಗುಡ್ಡುಗಾಡು ಪ್ರದೇಶ ಸೇರಿದಂತೆ ಇತರೆಡೆ ಪಲ್ಸ್ ಪೊಲೀಯೋ ಕಾರ್ಯಕ್ರಮದ ಮೂಲಕ ದೇಶವನ್ನು ಪೊಲೀಯೋ ಮುಕ್ತ ರಾಷ್ಟ್ರ ಮಾಡಲಾಗಿದೆ ಎಂದರು
ಜೂ. ೨೮ ರಂದು ನಡೆಯಿವ ಪಲ್ಸ್ ಪೊಲೀಯೋ ಕಾರ್ಯಕ್ರಮದಲ್ಲಿ ಸುಮಾರು ೬೪ ಲಕ್ಷ ಮಕ್ಕಳಿಗೆ ಪೊಲೀಯೋ ಹನಿ ಹಾಕುವ ಗುರಿ ಇಟ್ಟುಕೊಂಡಿದ್ದೇವೆ. ಇದಕ್ಕಾಗಿ ಸುಮಾರು ೩೬ ಸಾವಿರ ಬೂತ್ಗಳನ್ನು ಸ್ಧಾಪನೆ ಮಾಡಲಾಗಿದೆ. ೯೮೮ ಸಂಚಾರಿ ತಂಡಗಳು ಪಲ್ಸ್ ಪೊಲಿಯೋ ಕಾರ್ಯಕ್ರಮದಲ್ಲಿ ಭಾಗಿಯಾಗಲಿವೆ ಎಂದರು.
ಪಲ್ಸ್ ಪೊಲಿಯೋ ಕಾರ್ಯಕ್ರಮಕ್ಕೆ ಸುಮಾರು ೧ ಲಕ್ಷ ೧೪ ಸಾವಿರ ಲಸಿಕಾ ಕಾರ್ಯಕರ್ತರು ಕೆಲಸ ಮಾಡಲಿದ್ದಾರೆ. ೭೧೯೭ ಮೇಲ್ವಿಚಾರಕರು ಇದ್ದಾರೆ. ಪಲ್ಸ್ ಪೊಲೀಯೋ ಬೂತ್ಗೆ ಆಪ್ನ್ನು ಪ್ಲೇಸ್ಟೋರ್ನಿಂದ ಡೌನ್ಲೋಡ್ ಮಾಡಿಕೊಂಡು ಸ್ಥಳವನ್ನು ನೋಡಿಕೊಂಡು ಸಮೀಪದ ಪೊಲೀಯೋ ಬೂತ್ನಲ್ಲಿ ಮಕ್ಕಳಿಗೆ ಪೊಲೀಯೋ ಹನಿ ಹಾಕಿಸಬಹುದು ಎಂದರು.
ಈ ಹಿಂದೆ ವರ್ಷಕ್ಕೆ ಎರಡು ಸಲ ಹನಿ ಹಾಕಲಾಗುತ್ತಿತ್ತು. ಈಗ ದೇಶ ಪೊಲೀಯೋ ಮುಕ್ತವಾಗಿರುವುದರಿಂದ ಒಂದೇ ಸಲ ಪಲ್ಸ್ ಪೊಲೀಯೋ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎನ್ ಹೆಚ್ ಎಂ ನಿರ್ದೇಶಕ ಅಕ್ರಂಪಾಷ, ಆರೋಗ್ಯ ಇಲಾಖೆ ಕಾರ್ಯದರ್ಶಿ ರಿತ್ವಿಕ್ ಪಾಂಡೆ, ಆಯುಕ್ತ ಗುರುದತ್ ಹೆಗ್ಗಡೆ, ನಿರ್ದೇಶಕಿರಜನಿ ಉಪಸ್ಥಿತರಿದ್ದರು.



























