
ಕೆಂಗೇರಿ, ೬.ಜೂ:ಉಸಿರಾಡುತ್ತಿರುವ ಗಾಳಿ,ಕುಡಿಯುವ ನೀರು,ನೆಲ ಮತ್ತು ಪರಿಸರದ ಋಣ ನಮ್ಮೆಲ್ಲರ ಮೇಲಿದ್ದು,ನಾವುಗಳೂ ಪರಿಸರ ಉಳಿಸದಿದ್ದರೆ ಮುಂದೊಂದು ದಿನ ಹವಾಮಾನದ ಏರುಪೇರಿನಿಂದಾಗಿ ಇಡೀ ಭೂಮಂಡಲ ವಿನಾಶದ ಹಾದಿಯತ್ತ ಸಾಗಲಿದೆ ಎಂದು ಕೆಪಿಸಿಸಿ ವಕ್ತಾರೆ ಎಚ್.ಕುಸುಮಾ ಅವರು ಕಳವಳ ವ್ಯಕ್ತಪಡಿಸಿದರು.
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ದೀಪಾ ಕಾಂಪ್ಲೆಕ್ಸ್ ರಸ್ತೆ,ಐಟಿಐ ಬಡಾವಣೆ ಹತ್ತಿರ,ಆರ್‌ಆರ್.ನಗರ ಹಿಂದುಳಿದ ವಿಭಾಗದ ಕಾಂಗ್ರೆಸ್ ಸಮಿತಿ ವಿಶ್ವ ಪರಿಸರ ಅಂಗವಾಗಿ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ವಾಣಿಜ್ಯ ಚಟುವಟಿಕೆ,ಕಟ್ಟಡ ಮತ್ತು ನಾನಾ ಅಭಿವೃದ್ದಿ ಹೆಸರಿನಲ್ಲಿ ಮರ, ಗಿಡ,ಜಲಮೂಲ,ಅರಣ್ಯ ನಾಶ ಮಾಡುತ್ತಿರುವುದರಿಂದ ಶುದ್ದಗಾಳಿ,ನೀರು ಸಿಗದೆ ವಯಸ್ಸಿನ ಅಂತರವಿಲ್ಲದೆ ಉಸಿರಾಟ,ಹೃದಯ ರೋಗ,ಕ್ಯಾನ್ಸರ್,ಶ್ವಾಸಕೋಶ ಸೇರಿದಂತೆ ಹಲವು ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ.ಪ್ರಕೃತಿ,ಮಾನವಕುಲ ಉಳಿವಿಗಾಗಿ ಪ್ರತಿಯೊಬ್ಬರೂ ಒಂದೊಂದು ಮನೆಗೆ ಒಂದು ಮರ ಬೆಳೆಸುವ ಮೂಲಕ ನೆಲ,ಜಲ ಮೂಲ,ವಾಯು ಮೂಲ ನಾಶವಾಗದಂತೆ ಎಚ್ಚರಿಕೆವಹಿಸಲು ಇಂದಿನಿಂದಲೇ ಶಪಥ ಮಾಡಬೇಕು ಎಂದು ಮನವಿ ಮಾಡಿದರು.
ಪಾಲಿಕೆ ಮಾಜಿ ಸದಸ್ಯ ಜಿ.ಮೋಹನ್ ಕುಮಾರ್,ಹಿಂದುಳಿದ ವಿಭಾಗದ ಕಾಂಗ್ರೆಸ್ ಅಧ್ಯಕ್ಷ ಒಬಿಸಿ ನಾಗರಾಜು,ಯುವ ಕಾಂಗ್ರೆಸ್ ಮುರಳಿ ಪ್ರೇಮ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು































