Home ಜಿಲ್ಲೆ ತುಮಕೂರು ಹರಿಪ್ರಸಾದ್‌ಗೆ ಈಡಿಗರ ಸಂಘದ ಅಭಿನಂದನೆ

ಹರಿಪ್ರಸಾದ್‌ಗೆ ಈಡಿಗರ ಸಂಘದ ಅಭಿನಂದನೆ

ತುಮಕೂರು, ಜೂ. ೬- ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ನೇಮಕವಾಗಿರುವ ಈಡಿಗ ಸಮಾಜದ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ಜಿಲ್ಲಾ ಆರ್ಯ ಈಡಿಗ ಸಂಘದ ಮುಖಂಡರು ಅಭಿನಂದಿಸಿದ್ದಾರೆ. ಇವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಕಾಂಗ್ರೆಸ್ ಹೈಕಮಾಂಡ್ ಹಾಗೂ ಸಹಕರಿಸಿದ ಪಕ್ಷದ ನಾಯಕರಿಗೆ ಧನ್ಯವಾದ ತಿಳಿಸಿದ್ದಾರೆ.


ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ. ನಾಗರಾಜಪ್ಪ ಅವರ ಅಧ್ಯಕ್ಷತೆಯಲ್ಲಿ ನಗರದ ಸಂಘದ ಕಚೇರಿಯಲ್ಲಿ ಪದಾಧಿಕಾರಿಗಳ ಸಭೆ ನಡೆದು, ಈಡಿಗ ಸಮಾಜದ ಬಿ.ಕೆ. ಹರಿಪ್ರಸಾದ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿರುವುದಕ್ಕೆ ಸಂತಸ ವ್ಯಕ್ತಪಡಿಸಿ, ಅವರಿಗೆ ಶುಭ ಕೋರಿದರು.


ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಸಂದ್ರ ಶಿವಣ್ಣ, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕರಾದ ಬಿ.ಕೆ. ಹರಿಪ್ರಸಾದ್ ಅವರಿಗೆ ಪಕ್ಷ ಸೂಕ್ತ ಸ್ಥಾನ ನೀಡಿದೆ, ಆ ಜವಾಬ್ದಾರಿಯನ್ನು ಅವರು ಸಮರ್ಥವಾಗಿ ನಿಭಾಯಿಸುವರು ಎಂಬ ವಿಶ್ವಾಸ ವ್ಯಕ್ತಪಡಿಸಿದರು.


ಎಸ್. ಬಂಗಾರಪ್ಪ ನವರು ಮುಖ್ಯಮಂತ್ರಿಯಾಗಿದ್ದಾಗ ಈಗಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸಚಿವ ಸ್ಥಾನ ನೀಡಿದ್ದರು. ಆ ಸಂದರ್ಭವನ್ನು ಸ್ಮರಿಸಿಕೊಂಡು ಡಿ.ಕೆ.ಶಿವಕುಮಾರ್ ಅವರು ಬಂಗಾರಪ್ಪ ನವರ ಪುತ್ರ ಮಧು ಬಂಗಾರಪ್ಪ ಹಾಗೂ ನಮ್ಮ ಈಡಿಗ ಸಮಾಜದ ಬೇಳೂರು ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಮನವಿ ಮಾಡಿದರು.


ಸಭೆಯಲ್ಲಿ ಸಂಘದ ಗೌರವಾಧ್ಯಕ್ಷ ಕೆ.ವಿ. ಅಜಯ್‌ಕುಮಾರ್, ಉಪಾಧ್ಯಕ್ಷರಾದ ಆರ್.ನಾರಾಯಣಸ್ವಾಮಿ, ಎಂ.ಎನ್. ನರಸಿಂಹಮೂರ್ತಿ, ಖಜಾಂಚಿ ಹೆಚ್.ಎಂ.ಕುಮಾರ್, ಜಂಟಿ ಕಾರ್ಯದರ್ಶಿಗಳಾದ ಸಿ.ನಾರಾಯಣ್, ಓ.ಎಲ್. ಪುರುಷೋತ್ತಮ್, ನಿರ್ದೇಶಕರಾದ ರವೀಂದ್ರಕುಮಾರ್, ಎಸ್. ಆಂಜನೇಯುಲು, ಟಿ.ಎನ್. ದಾಕ್ಷಾಯಿಣಿ, ಗೌರಮ್ಮ ಶಾಂತಕುಮಾರ್, ಎನ್. ಮಂಜುನಾಥ್, ಎ.ಎನ್. ಮಂಜುನಾಥ್, ಟಿ.ಎಸ್. ನಾರಾಯಣಸ್ವಾಮಿ ಮತ್ತಿತರರು ಬಿ.ಕೆ. ಹರಿಪ್ರಸಾದ್‌ಅವರನ್ನು ಅಭಿನಂದಿಸಿದರು.