Home ಜಿಲ್ಲೆ ತುಮಕೂರು ವಿಜೃಂಭಣೆಯ ಬೆಟ್ಟದ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವ

ವಿಜೃಂಭಣೆಯ ಬೆಟ್ಟದ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವ

ಕುಣಿಗಲ್, ಜೂ. ೧- ಬೆಟ್ಟದ ರಂಗನಾಥಸ್ವಾಮಿ ದೇವರ ಮೊದಲನೆಯ ವರ್ಷದ ಜಾತ್ರಾ ಮಹೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.


ತಾಲ್ಲೂಕಿನ ಪ್ರಸಿದ್ಧ ಶ್ರೀ ಬೆಟ್ಟದ ರಂಗನಾಥ ಸ್ವಾಮಿ ದೇವರ ಮೊದಲನೆಯ ವರ್ಷದ ಜಾತ್ರಾ ಮಹೋತ್ಸವವನ್ನು ವೈಭವವಾಗಿ ಸುತ್ತಮುತ್ತಲಿನ ೩೦ ದೇವರ ವಿಗ್ರಹ ಉತ್ಸವಗಳೊಂದಿಗೆ ವಿಶೇಷವಾಗಿ ಹೂಗಳು ಹಾಗೂ ಅಲಂಕಾರಗಳೊಂದಿಗೆ ಮೆರವಣಿಗೆ ಮಾಡುವ ಮೂಲಕ ಅದ್ದೂರಿಯಾಗಿ ಆಚರಿಸಲಾಯಿತು.


ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದ ಬೆಂಗಳೂರು ಗ್ರಾಮಾಂತರ ಸಂಸತ್ ಸದಸ್ಯ ಡಾ. ಸಿಎನ್ ಮಂಜುನಾಥ್ ಮಾತನಾಡಿ, ಶ್ರೀಮಂತರು ಧಾರ್ಮಿಕ ಕಾರ್ಯಗಳಿಗೆ ಹೆಚ್ಚು ಹೆಚ್ಚು ಖರ್ಚು ಮಾಡುತ್ತಿದ್ದು ಭಗವಂತನ ಪ್ರೇರಣೆಯಿಂದ ಸುಮಾರು ೪೦ ಕೋಟಿ ರೂ. ವೆಚ್ಚದಲ್ಲಿ ರಾಮಕೃಷ್ಣ ಹಾಗೂ ಅವರ ಕುಟುಂಬ ಅಭಿವೃದ್ಧಿ ನಿರ್ಮಾಣ ಕೈಗೊಂಡಿರುವುದು ಭಗವಂತನ ಪ್ರೇರಣೆಯಾಗಿದ್ದು ಇಂತಹ ಕಾರ್ಯಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾಗುವುದರೊಂದಿಗೆ ಜನರು ಗುಡಿ ಗೋಪುರಗಳಿಗೆ ಬರುವುದರಿಂದ ಮನಸ್ಸಿಗೆ ನೆಮ್ಮದಿ, ಶಾಂತಿ ದೊರೆಯುತ್ತದೆ. ಇಲ್ಲಿನ ದೇವಸ್ಥಾನಕ್ಕೆ ಬಾಗಿಲು ಇಲ್ಲದಿರುವುದು ವಿಶೇಷವಾಗಿದೆ. ಈ ಕ್ಷೇತ್ರವು ಮುಂದಿನ ದಿನಗಳಲ್ಲಿ ಪ್ರವಾಸಿ ತಾಣವಾಗಿ ಅಭಿವೃದ್ಧಿ ಆಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.


ಅರೇ ಶಂಕರ ಮಠದ ಶ್ರೀ ಸಿದ್ದರಾಮ ಚೈತನ್ಯ ಸ್ವಾಮೀಜಿ ಮಾತನಾಡಿ, ಈ ಕ್ಷೇತ್ರವನ್ನು ಉತ್ತಮವಾಗಿ ಅಭಿವೃದ್ದಿಪಡಿಸುತ್ತಿದು ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು.


ದೇವಸ್ಥಾನದ ಜೀರ್ಣೋದ್ಧಾರಕರು ಹಾಗೂ ಸೇವಾಕರ್ತರಾದ ಶ್ರೀರಂಗ ಗ್ರೂಪ್‌ನ ರಾಮಕೃಷ್ಣ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ಕೆಲಸವನ್ನು ನಮ್ಮ ಕುಟುಂಬವು ಸ್ವಾಮಿಯ ಸೇವೆ ಎಂಡು ತಿಳಿದು ಸಂಕಲ್ಪದಿಂದ ಮಾಡುತ್ತೇವೆ ತಮ್ಮಲ್ಲೆರ ಸಹಕಾರ ಅಗತ್ಯ ಎಂದರು.


ಜಾತ್ರಾ ಮಹೋತ್ಸವದಲ್ಲಿ ಆಗಮಿಕರಾದ ವೆಂಕಟೇಶ್ ದೀಕ್ಷಿತ್, ಪೊಲೀಸ್ ವೃತ್ತ ನಿರೀಕ್ಷಕ ಮಾದ್ಯ ನಾಯಕ್, ಮುಖಂಡರಾದ ಜಗದೀಶ್ ಡಿ. ನಾಗರಾಜಯ್ಯ, ವಸಂತ್‌ಕುಮಾರ್ ಸೇರಿದಂತೆ ಅಪಾರ ಭಕ್ತರು ಭಾಗವಹಿಸಿದ್ದರು.