Home ಜಿಲ್ಲೆ ಬೆಂಗಳೂರು ರೋಟರಿಯಿಂದ ೯೯ ವಿವಿಧ ಸಮಾಜ ಮುಖಿ ಕಾರ್ಯಕ್ರಮ

ರೋಟರಿಯಿಂದ ೯೯ ವಿವಿಧ ಸಮಾಜ ಮುಖಿ ಕಾರ್ಯಕ್ರಮ

ಕನಕಪುರ,ಜು.೦೨:೨೦೨೫-೨೬ನೇ ಸಾಲಿನಲ್ಲಿ ರೋಟರಿ ಸಂಸ್ಥೆಯು ಕನಕಪುರಲ್ಲಿ ೯೯ ವಿವಿಧ ಸಮಾಜ ಮುಖಿ ಕಾರ್ಯಕ್ರಮ ರೂಪಿಸಿ ಕಾರ್ಯಗತಗೊಳಿಸಿದೆ ಎಂದು ರೋಟರಿ ಅಧ್ಯಕ್ಷ ಕೆ.ಬಿ.ಎಸ್. ಸಿದ್ದರಾಜು ಹೇಳಿದರು.


ತಾಲೂಕಿನ ಉಯ್ಯಂಬಳ್ಳಿ ಹೋಬಳಿಯ ಹೆಗ್ಗನೂರು ಸರ್ಕಾರಿ ಮಾದರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ವಿತರಣೆ ಮಾಡಿ ಅವರು ಮಾತನಾಡಿದರು.


ಪದವಿ ಸ್ವೀಕರ ಮಾಡುವ ಸಂದರ್ಭದಲ್ಲಿ ಹಲವಾರು ಸಾಮಾಜಿಕ ಕಾರ್ಯಕ್ರಮಗಳ ಪಟ್ಟಿಯನ್ನು ಮಾಡಿಕೊಂಡಿದ್ದು,ಅವುಗಳಲ್ಲಿ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣಾ ಕಾರ್ಯಕ್ರಮ ಕೂಡ ಒಂದಾಗಿದೆ.ಅದರ ಅಂಗವಾಗಿ ಕನಕಪುರ ತಾಲೂಕಿನ ೪೦೦೦ ವಿದ್ಯಾರ್ಥಿಗಳಿಗೆ ೨೮ ಸಾವಿರ ನೋಟ್ ಬುಕ್ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.


ರೋಟರಿ ಸಂಸ್ಥೆಯು ನಿಮ್ಮಂತಹ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಮಾಡುತ್ತಿರುವುದು ನಿಮ್ಮಗಳಿಗೆ ಪ್ರೋತ್ಸಾಹ ಮಾಡುವ ದೃಷ್ಟಿಯಿಂದಷ್ಟೇ ಆಗಿದೆ.ನಿಮ್ಮಲ್ಲಿ ಇರುವ ಪ್ರತಿಭೆಯನ್ನು ಹೊರ ಜಗತ್ತಿಗೆ ತರುವ ಸಂದರ್ಭದಕ್ಕೆ ನಮ್ಮ ಸಂಸ್ಥೆಯ ಒಂದು ಅಳಿಲು ಸೇವೆಯಾಗಿದೆ ಎಂದು ಹೇಳಿದರು.


ಇನ್ನು ಈ ಕಾರ್ಯಕ್ರಮದ ಜೊತೆಗೆ ಪ್ರಸಕ್ತ ವರ್ಷದಲ್ಲಿ ಬಡ ಗ್ರಾಮೀಣ ಮಹಿಳೆಯರ ಕುಟುಂಬಕ್ಕೆ ನೆರವಾಗಲು ಹಸುಗಳನ್ನು ವಿತರಣೆ ಮಾಡಲಾಗಿದೆ.ಉದ್ಯೋಗ ಆಧಾರಿತವಾಗಿ ಟೈಲರಿಂಗ್ ತರಬೇತಿ ನೀಡಲಾಗಿದೆ.ನಗರದ ಮಧ್ಯಭಾಗದಲ್ಲಿ ಇರುವ ಕಾಳಿಕಾಂಬ ದೇವಾಲಯದ ಕಲ್ಯಾಣಿಯನ್ನು ಸ್ವಚ್ಚಗೊಳಿಸಲಾಗಿದೆ.ಹಾಗೆಯೇ ಶಾಲಾ ಮಕ್ಕಳಿಗೆ ಕುಡಿಯಲು ಶುದ್ಧ ನೀರಿನ ಘಟಕ ನೀಡಲಾಗಿದೆ.ತದನಂತರ ಆರೋಗ್ಯ ಶಿಬಿರಗಳು ಸೇರಿದಂತೆ ಹಲವು ಹತ್ತು ಕಾರ್ಯಕ್ರಮವನ್ನು ನಮ್ಮ ಅವಧಿಯಲ್ಲಿ ಮಾಡಿರುವುದು ಸಂತೋಷದಾಯಕವಾದ ವಿಚಾರವಾಗಿದೆ ಎಂದು ತಿಳಿಸಿದರು.


ರೋಟರಿ ಟ್ರಸ್ಟ್‌ಚಿ ಅಧ್ಯಕ್ಷರಾದ ಎಂ.ಡಿ. ವಿಜಯದೇವ್ ಮಾತನಾಡಿ,ರಾಜ್ಯದಲ್ಲೇ ಹೆಗ್ಗನೂರು ಸರ್ಕಾರಿ ಮಾದರಿ ಶಾಲೆಯು,ಮಾದರಿ ಶಾಲೆಯಾಗುವುದರ ಜೊತೆ ಪ್ರಥಮ ಶಾಲೆಯಾಗಿದೆ.ಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಗ್ರಾಮೀಣ ಮಕ್ಕಳಿಗೆ ಒಳ್ಳೆಯ ವಿದ್ಯಾಬ್ಯಾಸ ಸಿಗಬೇಕೆಂಬ ಉದ್ದೇಶವಿಟ್ಟುಕೊಂಡು ಪಂಚಾಯತಿಗೊಂದು ಮಾದರಿ ಶಾಲೆ ತೆರೆಯುವ ಚಿಂತನೆ ಮಾಡಿ ರಾಜ್ಯಕ್ಕೆ ಮೊದಲನೆ ಶಾಲೆಯನ್ನು ಹೆಗ್ಗನೂರು ಗ್ರಾಮದಲ್ಲಿ ತೆರೆದು ಒಳ್ಳೆಯ ಶಿಕ್ಷಣದ ಸೌಲಭ್ಯವನ್ನು ನಿಮಗೆ ನೀಡುತಿದ್ದಾರೆ.ಈ ಶಾಲೆಯಲ್ಲಿ ಶಾಲೆ ಆರಂಭದ ದಿನಗಳಿಂದ ಕೊನೆಯವರೆಗೆ ಖಾಸಗಿ ಶಾಲಾ ಮಕ್ಕಳಂತೆ ಸರ್ಕಾರಿ ಶಾಲೆಯಲ್ಲೂ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.


ಈ ಸಂದರರ್ಭದಲ್ಲಿ ರೋಟರಿ ಮಾಜಿ ಅಧ್ಯಕ್ಷ ಭಾನುಪ್ರಕಾಶ್, ರೋಟರಿ ಒಳಗೊಂಡಂತೆ ಉಯ್ಯಂಬಳ್ಳಿ ಪಂಚಾಯತಿ ವ್ಯಾಪ್ತಿಯ ಅನೇಕ ಸಮಾಜ ಚಿಂತಕರು ಹಾಜರಿದ್ದರು.