Home ಜಿಲ್ಲೆ ಕಲಬುರಗಿ 30 ಕ್ವಿಂಟಲ್ ಪಡಿತರ ಅಕ್ಕಿ ಜಪ್ತಿ

30 ಕ್ವಿಂಟಲ್ ಪಡಿತರ ಅಕ್ಕಿ ಜಪ್ತಿ

ಕಲಬುರಗಿ,ಜೂ.18-ಪಡಿತರ ಅಕ್ಕಿ ಅಕ್ರಮ ದಾಸ್ತಾನು ಮಾಡಿ ಕಾಳ ಸಂತೆಯಲ್ಲಿ ಮಾರಾಟ ಮಾಡಲು ವಾಹನದಲ್ಲಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇಲೆ ಆಹಾರ ನಿರೀಕ್ಷಕ ಯಲ್ಲಾಲಿಂಗ ಕಡಕೋಳ್ಕರ್ ಹಾಗೂ ಚೌಕ್ ಪೊಲೀಸ್ ಠಾಣೆ ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿ ನಡೆಸಿ 1,13,190 ರೂ.ಮೌಲ್ಯದ 30 ಕ್ವಿಂಟಲ್, 30 ಕೆ.ಜಿ.ಅಕ್ಕಿ ಮತ್ತು 2 ಲಕ್ಷ ರೂ.ಮೌಲ್ಯದ ವಾಹನ ಸೇರಿ 3, 13,190 ರೂ.ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಿದ್ದಾರೆ.
ವಾಹನ ಚಾಲಕ ಚನ್ನವೀರ ನಗರದ ಸುಭಾಷ ಗುಡೂರ ವಿರುದ್ಧ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.