Home ಜಿಲ್ಲೆ ಕಲಬುರಗಿ ಸೊನ್ನ ಬ್ಯಾರೇಜ್ ನ 29 ಗೇಟ್‍ಗಳಲ್ಲಿ 22 ಗೇಟ್‍ಗಳನ್ನು ತೆರೆದು 95 ಸಾವಿರ ಕ್ಯೂಸೆಕ್ ನೀರು...

ಸೊನ್ನ ಬ್ಯಾರೇಜ್ ನ 29 ಗೇಟ್‍ಗಳಲ್ಲಿ 22 ಗೇಟ್‍ಗಳನ್ನು ತೆರೆದು 95 ಸಾವಿರ ಕ್ಯೂಸೆಕ್ ನೀರು ಹೊರಕ್ಕೆಯಲ್ಲಮ್ಮ ದೇವಸ್ಥಾನಕ್ಕೆ ಜಲ ದಿಗ್ಬಂಧನ

ಅಫಜಲಪುರ:ಆ.4:ಜಿಲ್ಲೆಯ ಜೀವನದಿ ಭೀಮೆ ತುಂಬಿ ತುಳುಕುತ್ತಿದ್ದಾಳೆ.ಕಳೆದ ವಾರವೇ ನೀರಿಲ್ಲದೆ ಸೊರಗಿದ್ದ ಭೀಮಾನದಿ ಇದೀಗ ತನ್ನೊಡಲಲ್ಲಿ ಜಲರಾಶಿಯನ್ನೆ? ಹೊತ್ತು ಹೊರಟಿದೆ.ಈ ನದಿ ಜಲಾನಯನ ಪ್ರದೇಶ ಮಹಾರಾಷ್ಟ್ರದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ.ಇದರಿಂದಾಗಿ ಸಾಕಷ್ಟು ನೀರು ಹರಿದು ಬರುತ್ತಿರುವುದರಿಂದ ಭೀಮಾ ನದಿ ತುಂಬಿ ದೇವಸ್ಥಾನಗಳಿಗೂ ಜಲ ದಿಗ್ಬಂಧನ ಕಾಡುತ್ತಿದೆ.ಮಹಾರಾಷ್ಟ್ರದ ಉಜನಿ ಮತ್ತು ವಿ?ರ ಜಲಾಶಯದಿಂದ 95 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿರುವುದರಿಂದ ಅಫಜಲಪುರ ತಾಲೂಕಿನ ಮಣ್ಣೂರ ಗ್ರಾಮದ ಹೊಳಿ ಯಲ್ಲಮ್ಮದೇವಿ ದೇಗುಲ ಬಳಿಯ ಸೇತುವೆ ಮುಳುಗಡೆಯಾಗಿದೆ.ಮುಂಜಾಗ್ರತಾ ಕ್ರಮವಾಗಿ ಸದ್ಯ ಯಲ್ಲಮ್ಮದೇವಿ ದರ್ಶನಕ್ಕೆ ನಿಬರ್ಂಧ ಹೇರಲಾಗಿದೆ.ದೇಗುಲದ ಸುತ್ತಮುತ್ತ ಎಲ್ಲಿ ನೋಡಿದರೂ ಜಲರಾಶಿಯೇ ಕಾಣಿಸುತ್ತಿದೆ.ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಅಲ್ಲಿನ ಜಲಾಶಯಗಳಿಂದ ಭೀಮಾ ನದಿಗೆ ನೀರು ಬಿಡಲಾಗುತ್ತಿದೆ.ಹೀಗಾಗಿ ಕರ್ನಾಟಕದ ಭೀಮಾ ನದಿಯಲ್ಲಿ ನೀರು ತುಂಬಿ ಹರಿಯುತ್ತಿದೆ.ಕಲಬುರಗಿ ಮಾತ್ರವಲ್ಲದೆ ಪಕ್ಕದ ವಿಜಯಪುರ ಜಿಲ್ಲೆಯ ಚಡಚಣ,ಇಂಡಿ,ಆಲಮೇಲ ಹಾಗೂ ಸಿಂದಗಿ ತಾಲೂಕಿನ ಭಾಗದಲ್ಲಿ ಕೂಡ ಪ್ರವಾಹ ಭೀತಿ ಎದುರಾಗಿದೆ.

ರಸ್ತೆ ಸಂಚಾರ ಸ್ಥಗಿತ:ಅಫಜಲಪುರ ತಾಲೂಕಿನ ಮಣ್ಣೂರ- ಭುಯ್ಯಾರ ಗ್ರಾಮದ ಮೂಲಕ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿಗೆ ಸಂಪರ್ಕಿಸುವ ಭುಯ್ಯಾರ ಸೇತುವೆ ಸಂಪೂರ್ಣ ಜಲಾವೃತವಾಗಿದೆ.ಸೇತುವೆ ಮೇಲೆ ಅಪಾರ ಪ್ರಮಾಣದ ನೀರು ಹರಿಯುತ್ತಿದೆ.ಇದರಿಂದ ಅಫಜಲಪುರ ತಾಲೂಕಿನ ಮಣ್ಣೂರ ಹಾಗೂ ಇಂಡಿ ತಾಲೂಕಿನ ಭುಯ್ಯಾರ, ನಾಗರಳ್ಳಿ, ಖೇಡಗಿ, ರೋಡಗಿ, ಇಂಡಿ, ಲಾಳಸಂಗಿ, ರೋಗಿ ಸೇರಿದಂತೆ ಹಲವಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಚಾರ ಸ್ಥಗಿತವಾಗಿದೆ.