ಶ್ರೀ ಸರ್ವಧರ್ಮ ಯುವಕರ ಸೇವಾ ಸಂಘದ ವತಿಯಿಂದ ಏರ್ಪಡಿಸಿದ್ದ ೧೨ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಸೀರೆ ಹಾಗೂ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ಎಸ್‌ಎಸ್‌ಡಿ, ಆರ್.ಪಿ.ಐ. ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ. ಎಂ. ವೆಂಕಟಸ್ವಾಮಿರವರು ವಿತರಣೆ ಮಾಡಿದರು. ಕಾಂಗ್ರೆಸ್ ಮುಖಂಡರಾದ ಅನಿತಾ ಶ್ರೀನಿವಾಸ್, ಮಾಜಿ ನಗರ ಸಭಾಸದಸ್ಯ ಸೋಮಶೇಖರ್, ಸಮಾಜ ಸೇವಕ ಚಂದ್ರು, ರಾಜ್ಯ ಖಜಾಂಚಿ ಡಾ. ಆರ್. ಚಂದ್ರಶೇಖರ್, ಸಮಾಜ ಸೇವಕರಾದ ಡಿ. ಕೃಷ್ಣಮೂರ್ತಿ, ರಾಜು, ಐ.ಜಿ. ಸರ್ಕಲ್ ಸಂಘದ ಸಂಸ್ಥಾಪಕ ಅಧ್ಯಕ್ಷ ಪ್ರಶಾಂತ್, ಕಾರ್ಯಾಧ್ಯಕ್ಷ ನರೇಂದ್ರ, ಮಹೇಶ್ ಉಪಸ್ಥಿತರಿದ್ದರು.