
ಲಕ್ಷೆ÷್ಮÃಶ್ವರ, ಅ೮: ಮುಂಗಾರು ಕೈ ಕೊಟ್ಟುದ್ದು, ರೈತರು ಈಗ ಹಿಂಗಾರಿ ಬಿತ್ತನೆಗೆ ಮತ್ತೆ ಮಳೆರಾಯ ಕಣ್ಣಾಮುಚ್ಚಾಲೆ ಆಡುತ್ತಿದ್ದು, ರೈತರು ಹಿಂಗಾರಿ ಬೆಳೆಯೂ ಕೈ ಕೊಡುತ್ತದೆಯೋ ಎಂಬ ಭೀತಿಯಲ್ಲಿದ್ದಾರೆ.
ತಾಲೂಕಿನಲ್ಲಿ ಸನ್ ೨೦೨೬-೨೭ನೇ ಸಾಲಿನಲ್ಲಿ ಕೃಷಿ ಇಲಾಖೆ ಸಹಾಯಧನದ ರೂಪದಲ್ಲಿ ಹಿಂಗಾರಿಯ ಬೆಳೆಗಳಾದ ಜೋಳ ಕಡಲೆ ಗೋಧಿ ಕುಸುಬಿ ಹುರುಳಿ ಸೇರಿದಂತೆ ಬಿತ್ತನೆ ಬೀಜಗಳನ್ನು ಇಲಾಖೆ ದಾಸ್ತಾನು ಮಾಡಿದೆ.
ತಾಲೂಕಿನಲ್ಲಿ ಪ್ರಮುಖವಾಗಿ ಕಡಲೆ ಜೋಳ ಕುಸುಬಿ ಗೋಧಿ ರೈತರ ಹಿಂಗಾರಿನ ಬೆಳೆಗಳಾಗಿವೆ.
ರೈತ ಸಂಪರ್ಕ ಕೇಂದ್ರದಲ್ಲಿ ಭಾರಿ ಪ್ರಮಾಣದ ಕಡಲೆ ದಾಸ್ತಾನು ಬಂದಿದ್ದು ಆದರೆ ರೈತರು ಕಡಲೆಬೀಜ ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇದುವರೆಗೂ ಮಳೆ ಬಾರದ್ದರಿಂದ ಬೀಜಗಳನ್ನು ಕೊಂಡು ಮಾಡುವದಾದರೂ ಏನು ಎಂಬ ಚಿಂತೆಯಲ್ಲಿ ರೈತರು ಕೈ ಚೆಲ್ಲಿ ಕುಳಿತಿದ್ದು ಇದುವರೆಗೂ ಮಳೆ ಬಾರದ್ದರಿಂದ ರೈತರು ಎಲ್ಲಿ ಹಿಂಗಾರು ಹಿನ್ನಡೆ ತರುತ್ತದೆಯೋ ಎಂಬ ಭೀತಿಯಲ್ಲಿದ್ದಾರೆ.
ಈ ಕುರಿತು ರೈತ ಮುಖಂಡ ಚೆನ್ನಪ್ಪ ಷಣ್ಮುಖ ಪ್ರತಿಕ್ರಿಯೆ ನೀಡಿ ಅಕ್ಟೋಬರ್ ಮೊದಲ ವಾರ ಮುಗಿಯುತ್ತಿದ್ದು ಇದುವರೆಗೂ ಮಳೆ ಬಂದಿಲ್ಲ ಇದು ಹಿಂಗಾರಿ ಬೆಳೆಗಳ ಮೇಲೂ ಪ್ರತಿಕೂಲ ಪರಿಣಾಮ ಬೀರಲಿದೆ. ಒಂದೊಮ್ಮೆ ಹಿಂಗಾರಿ ಬೆಳೆ ಕೈ ಕೊಟ್ಟರೆ ರೈತರು ವರ್ಷದುದ್ದಕ್ಕೂ ಪರಿತಪಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.























