Home ಜಿಲ್ಲೆ ವಾರ್ಷಿಕ ಸಭೆ

ವಾರ್ಷಿಕ ಸಭೆ


ಗುಳೇದಗುಡ್ಡ,ಸೆ.೨೧:
ಸರಕಾರಿ ನೌಕರರಿಗೆ ಆರ್ಥಿಕವಾಗಿ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ೧೯೨೪ರಲ್ಲಿ ಸ್ಥಾಪನೆಗೊಂಡು ನೂರುವರ್ಷಗಳನ್ನು ದಾಟಿರುವ ಗುಳೇದಗುಡ್ಡ ತಾಲೂಕು ಪ್ರಥಮಿಕ ಶಾಲಾ ಶಿಕ್ಷಕರ ನೌಕರರ ಪತ್ತಿನ ಸಹಕಾರಿ ಸಂಘ ಪ್ರಗತಿಪಥದಲ್ಲಿ ಸಾಗಿದ್ದು, ಶೇರುದಾರರಿಗೆ ಅನುಕೂಲವಾಗುವಂತ ಹೊಸಹೊಸ ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಸಂಘ ಇನ್ನಷ್ಟು ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಹೇಳಿದರು.


ಅವರು ಪಟ್ಟಣದ ಸರಸ್ವತಿ ವಿದ್ಯಾಸಂಸ್ಥೆಯ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಗುಳೇದಗುಡ್ಡ ತಾಲೂಕು ಪ್ರಥಮಿಕ ಶಾಲಾ ಶಿಕ್ಷಕರ ನೌಕರರ ಪತ್ತಿನ ಸಹಕಾರಿ ಸಂಘ ೧೦೨ನೇ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದರು.


ಸಂಘದ ಅಧ್ಯಕ್ಷ ವಿ.ಪಿ. ದಾಸರ ಸಂಘದ ವಾರ್ಷಿಕ ವರದಿ ಮಂಡಿಸಿ ಮಾತನಾಡಿ, ಸಂಘದ ಸರ್ವ ಸದಸ್ಯರ ಹಾಗೂ ಆಡಳಿತ ಮಂಡಳಿಯ ಸಹಕಾರ ಹಾಗೂ ಗ್ರಾಹಕರು,ಶೇರುದಾರರ ವಿಶ್ವಾಸದಿಂದಾಗಿ ೨೦೨೫-೨೬ ನೇ ಸಾಲಿನಲ್ಲಿ ಗುಳೇದಗುಡ್ಡ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ನೌಕರರ ಪತ್ತಿನ ಸಹಕಾರ ಸಂಘ ಈಗ ನೂರು ವರ್ಷಗಳನ್ನು ಪೂರೈಸಿ ಅಭಿವೃದ್ಧಿಯ ಪಥದಲ್ಲಿ ಸಾಗಿದೆ ಎಂದರು. ಇದೇ ಸಂದರ್ಭದಲ್ಲಿ ಸಂಘದ ಕಟ್ಟಕ್ಕೆ ದಾನ ನೀಡಿದ ದಾನಿಗಳನ್ನು ಹಾಗೂ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅಧಿಕ ಅಂಕಪಡೆದ ಶೇರುದಾರರ ಮಕ್ಕಳನ್ನು, ನಿವೃತ್ತ ನೌಕರರನ್ನು ಹಾಗೂ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ವಿ.ಡಿ. ಕಲ್ಯಾಣಕರ ಅವರನ್ನು ಸನ್ಮಾನಿಸಲಾಯಿತು. ಮರಡಿಮಠದ ಶ್ರೀ ಅಭಿನವ ಕಾಡಸಿದ್ದೇಶ್ವರ ಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಿಆರ್‌ಸಿ ಸಂಗಮೇಶ ಯಲಿಗಾರ, ವೈ.ಎಸ್. ಮಜ್ಜಗಿ ಮಾತನಾಡಿದರು. ಈ ಸಂದರ್ಭದಲ್ಲಿ ತಾಲೂಕು ಶಿಕ್ಷಣ ಸಂಯೋಜಕ ಎಂ.ಸಿ. ನಲವತ್ತವಾಡ, ಮಲ್ಲಿಕಾರ್ಜುನ ಹಿರೇಮಠ, ಸಾವಿತ್ರಿಬಾಯಿ ಪುಲೆ ಸಂಘದ ತಾಲೂಕು ಅಧ್ಯಕ್ಷೆ ಜಮುನಾ ಸಿಂಗದ, ಸಂಘದ ಸದಸ್ಯರಾದ ಎಸ್.ಬಿ. ಪಟ್ಟಣಶೆಟ್ಟಿ, ಎಸ್.ವಿ. ಯಲಿಗಾರ, ವಿ.ಆರ. ಹುಳಿಪಲ್ಲೇದ, ಎಂ.ಒ. ಸುರಪುರ, ಭಾಗೀರಥಿ ಆಲೂರ, ಎಸ್.ಬಿ. ಹಡಪದ, ಎನ್.ಟಿ. ನಿಡಗುಂದಿ, ಎನ್.ಎಂ. ಚಿತ್ತರಗಿ, ಎಸ್.ಎಂ.ಪಾಟೀಲ, ಎಂ.ಎA. ಮಾಶಾಳ, ವಿ.ಎ.ಲೆಂಕೆನ್ನವರ, ಡಿ.ಬಿ. ನಾಯಕರ, ಕಾರ್ಯದರ್ಶಿ ಯಲ್ಲಪ್ಪ ತಳವಾರ, ಸಿಬ್ಬಂದಿ ಘಂಟೇಶ ಕಲಬುರ್ಗಿ,ಸಂಗಮೇಶ ರಂಜನಗಿ ಮತ್ತಿತರರು ಇದ್ದರು.