
ಚನ್ನಮ್ಮನ ಕಿತ್ತೂರ-೨೧ ಧಾರವಾಡ-ಕಿತ್ತೂರ ಮಾರ್ಗವಾಗಿ ಬೆಳಗಾವಿಗೆ ತಲುಪುವ ನೂತನ ಬ್ರಾಡ್‌ಗೇಜ ರೈಲ್ವೆ ಮಾರ್ಗ ಯೋಜನೆಗಾಗಿ ಕೃಷಿಭೂಮಿಯನ್ನು ಕಳೆದುಕೊಳ್ಳುವ ರೈತರಿಗೆ ೧ ಎಕರೆ ಭೂಮಿ ರೂ. ೧ ಕೋಟಿ ಪರಿಹಾರ ನೀಡಬೇಕೆಂದು ಶಾಸಕ ಬಾಬಾಸಾಹೇಬ ಪಾಟೀಲ ಹಾಗೂ ತಹಶೀಲ್ದಾರ ಕಲ್ಲನಗೌಡ ಪಾಟೀಲರಿಗೆ ರೈತರೆಲ್ಲರೂ ಸೇರಿ ತಾಲೂಕಿನ ಎಂಕೆಹುಬ್ಬಳ್ಳಿ ಪಟ್ಟಣದಲ್ಲಿ ನಡೆದ ಪ್ರಜಾಸೇವಾ ಕಾರ್ಯಕ್ರಮದಲ್ಲಿ ಮನವಿ ಸಲ್ಲಿಸಿದರು.
ನಂತರ ರೈತರು ಮಾತನಾಡಿ ರೈಲ್ವೆ ಮಾರ್ಗಕ್ಕೆ ನಮ್ಮ ಭೂಮಿ ಕಳೆದುಕೊಳ್ಳುತ್ತಿದ್ದೇವೆ. ಅಲ್ಲಿ ಎಲ್ಲ ಭೂಮಿ ಕೃಷಿಯದ್ದೇ ಅದಕ್ಕಾಗಿ ರೂ. ೩೫ ಲಕ್ಷ ನಿಗದಿಪಡಿಸಲಾಗಿದೆ ಎಂದು ಪತ್ರದ ಮುಖಾಂತರ ಅಧಿಕಾರಿಗಳು ತಿಳಿಸಿದ್ದಾರೆ. ಆದ್ದರಿಂದ ಧಾರವಾಡ ಹಾಗೂ ಹಿರೇಬಾಗೇವಾಡಿ ರೈತರಿಗೆ ೧ ಎಕರೆಗೆ ರೂ. ೪೫ ಲಕ್ಷ ಎಂದು ಘೋಷಿಸಲಾಗಿದೆ. ಆದರೆ ಕಿತ್ತೂರ ಭಾಗದ ರೈತರಿಗೆ ಏಕೆ ತಾರತಮ್ಯ? ಎಂದು ಶಾಸಕ ಹಾಗೂ ತಹಶೀಲ್ದಾರರನ್ನು ಪ್ರಶ್ನಿಸಿದರು. ನಮ್ಮ ಭೂಮಿ ರಾಷ್ಟಿçÃಯ ಹೆದ್ದಾರಿಗೆ ಹೊಂದಿಕೊAಡಿದ್ದು ಉತ್ತಮವಾದ ಭೂಮಿ ನಮ್ಮದು ೧ ಗುಂಟೆಗೆ ರೂ. ೮-೧೦ ಲಕ್ಷಕ್ಕೆ ಮಾರಾಟವಾಗುತ್ತಿದೆ. ಅದಕ್ಕಾಗಿ ಸರ್ಕಾರ, ಸಂಬAಧಪಟ್ಟ ಅಧಿಕಾರಿಗಳು, ಶಾಸಕರು ಜಂಟಿಯಾಗಿ ೧ ಎಕರೆಗೆ ರೂ. ೧ ಕೋಟಿ ನಿಗದಿಪಡಿಸಬೇಕು. ಇಲ್ಲದಿದ್ದರೆ ಸುಮ್ಮನಿರುವುದಿಲ್ಲ. ಬೂಮಿ ಕಳೆದುಕೊಂಡರೆ ಮಕ್ಕಳ ಗತಿಯೇನು, ನಮ್ಮ ಕುಟುಂಬ ಹೇಗೆ ನಿರ್ವಹಣೆ ಆಗುವುದು ಅದಕ್ಕಾಗಿ ನಮ್ಮ ಬೇಡಿಕೆ ಈಡೇರಿಸಿಕೊಡಬೇಕೆಂದು ಹೇಳಿದರು.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕರು ನಿಮ್ಮ ಜೊತೆ ನಾನಿದ್ದೇನೆ. ಸಂಬAಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಪರಿಹಾರ ತಾರತಮ್ಯ ಆಗದಂತೆ ನೋಡಿಕೊಳ್ಳುತ್ತ್ತೇನೆಂದರು.
ಈ ವೇಳೆ ಕಿತ್ತೂರ ಕರ್ನಾಟಕ ರೈತ ಜಾಗೃತಿ ಸಂಘದ ಅಧ್ಯಕ್ಷ ಹಾಗೂ ಪಪಂ ಸ್ಥಾಯಿ ಕಮೀಟಿ ಅಧ್ಯಕ್ಷ ಎಂ.ಎಫ್.ಜಕಾತಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಪೇಶ ದಳವಾಯಿ, ಸಾಜಿದಲಿ ಜಮಾದಾರ, ಅಬ್ದುಲ್ ರಜಾಕ್ ಗಡ್ಕರಿ, ಎಂ. ಎ ಉಸ್ತಾದ, ಸೇರಿದಂತೆ ವಿವಿಧ ಗ್ರಾಮದ ರೈತರು, ರೈತ ಸಂಘಟನೆಗಳು ಇತರರಿದ್ದರು.































