ಅನುದಾನಿತ ಶಾಲಾ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ನಗರದಲ್ಲಿ ಬೃಹತ್ ಮೆರವಣಿಗೆ ನಡೆಸಿ ತಹಶಿಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ವಿಎಸ್. ಹುದ್ದಾರ, ತಾಲೂಕಾಧ್ಯಕ್ಷ ಬಿ.ಕೆ.ಮಳಗಿ, ಗ್ರಾಮೀಣಾಧ್ಯಕ್ಷ ಪಿ.ಸಿ.ವಲಮಣ್ಣವರ, ರವಿ ಕೊಣ್ಣೂರ, ಶ್ರೀನಿವಾಸ್ ವಾಲಿ, ವಿ.ಎಸ್. ಪಟ್ಟಣಶೆಟ್ಟಿ ಸೇರಿದಂತೆ ಜಿಲ್ಲಾ, ತಾಲೂಕುಗಳ ಪದಾಧಿಕಾರಿಗಳು ಮತ್ತು ಮಾಧ್ಯಮಿಕ ಶಾಲೆಗಳ ನೂರಾರು ಶಿಕ್ಷಕರು ಪಾಲ್ಗೊಂಡಿದ್ದರು.