Home ಜಿಲ್ಲೆ ಬೇಡಿಕೆಗಳ ಈಡೇರಿಕೆಗೆ ಮನವಿ

ಬೇಡಿಕೆಗಳ ಈಡೇರಿಕೆಗೆ ಮನವಿ

ನವಲಗುಂದ,ಜು೫ : ೨೦೦೬ರ ಮೊದಲು ಮತ್ತು ನಂತರ ನೇಮಕವಾದ ಅನುದಾನಿತ ನೌಕರರಿಗೆ ಹಳೆಯ ಪಿಂಚಣಿ ಸೌಲಭ್ಯ ಮರಿಚೀಕೆಯಾಗಿ ಉಳಿದಿವೆ. ಸಂಘವು ಹಲವಾರು ಬಾರಿ ಬೇಡಿಕೆ ಈಡೇರಿಕೆಗಾಗಿ ರಾಜ್ಯಾದ್ಯಂತ ಹೋರಾಟ ಮಾಡಿದ್ದಲ್ಲದೆ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಹೋರಾಟ ಮಾಡಿ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿಕೊಂಡರು ಸರ್ಕಾರ ನೌಕರರ ಬೇಡಿಕೆ ಈಡೇರಿಸಿಲ್ಲ. ಸಂಧ್ಯಾ ಕಾಲದಲ್ಲಿ ಆರೋಗ್ಯಕರ ಜೀವನ ನಡೆಸಬೇಕಾದ ನೌಕರರ ಪರಿಸ್ಥಿತಿ ಬೀದಿ ಪಾಲಾಗಿದೆ ಕೂಡಲೇ ಅನುದಾನಿತ ನೌಕರರಿಗೂ ಹಳೆಯ ಪಿಂಚಣಿ ಸೌಲಭ್ಯ ಒಳಪಡಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಮಾದ್ಯಮಿಕ ಶಾಲಾ ನೌಕರರ ಸಂಘದ ತಾಲ್ಲೂಕು ಘಟಕದಿಂದ ತಹಶೀಲ್ದಾರ ಸುಧೀರ್ ಸಾಹುಕಾರ ಮೂಲಕ ಸಿಎಂ ಡಿ.ಕೆ.ಶಿವಕುಮಾರ ಅವರಿಗೆ ಮನವಿ ಸಲ್ಲಿಸಿದರು.

ಈಡೇರಿಸಬೇಕಾದ ಬೇಡಿಕೆಗಳು : ಒಪಿಎಸ್ ಪಿಂಚಣಿ ಜಾರಿ, ಶೀಘ್ರವಾಗಿ ಖಾಲಿ ಹುದ್ದೆ ಭರ್ತಿ, ಕಾಲ್ಪನಿಕ ವೇತನ, ಕೆಪಿಎಸ್ ಮತ್ತು ಪಿಎಂಶ್ರೀ ಶಾಲೆಯಿಂದ ೩ ಕಿಲೋಮೀಟರ್ ವ್ಯಾಪ್ತಿಯ ಹೊರಗೆ ಆರಂಭಿಸುವುದು.

ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೀಡುವ ಎಲ್ಲ ಸೌಲಭ್ಯಗಳನ್ನು ಅನುದಾನಿತ ಶಾಲೆಯ ವಿದ್ಯಾರ್ಥಿಗಳಿಗೆ ವಿಸ್ತರಣೆ, ಸರ್ಕಾರಿ ಶಾಲೆಯ ಶಿಕ್ಷಕರಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ಅನುದಾನಿತ ಶಾಲಾ ಶಿಕ್ಷಕರಿಗೂ ವಿಸ್ತರಿಸುವುದು ಇತ್ಯಾದಿಗಳು ಬೇಡಿಕೆಗಳಾಗಿವೆ.

ತಾಲ್ಲೂಕು ಅಧ್ಯಕ್ಷ ಆರ್ ಎಸ್ ಪಾಟೀಲ, ವ್ಹಿ.ಡಿ.ರಂಗಣ್ಣವರ, ಎಲ್ ಎಚ್ ಕಮ್ಮಾರ, ಎ.ಬಿ. ಕೊಪ್ಪದ, ಯು.ಎ. ಗದಗ, ಎಸ್‌ಎಫ್ ನೀರಲಗಿ, ಎಸ್. ವಾಯ್. ಉಳ್ಳಿಕಾಶಿ,ಜಿ.ಎಂ. ಮಾಕಣ್ಣವರ, ಪಿ ಕೆ ಹಿರೇಗೌಡರ ಸೇರಿ ನೂರಾರು ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.