ಹುಬ್ಬಳ್ಳಿ ನಗರಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಒತ್ತಾಯಿಸಿ ಕನ್ನಡ ಹೋರಾಟಗಾರರ ಸಮಿತಿಯ ಸದಸ್ಯರು ಪಾಲಿಕೆಯ ಆವರಣದಲ್ಲಿ ಎಮ್ಮೆಯೊಂದಿಗೆ ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿ ಮಹಾಪೌರರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ವಿರೇಶ ಜಿಗಳೂರ, ಈರಪ್ಪ ಎಮ್ಮಿ, ರಮೇಶ ಹಳ್ಳಿಕೇರಿ, ಮೌನೇಶ ಅಂಬಿಗೇರ, ಖಾಜಾಸಾಬ ಅಸ್ಲಾಂ, ಪ್ರಕಾಶ ನಾಯ್ಕ, ಸಂಜೀವ ದುಮಕನಾಳ, ಶೇಖರಯ್ಯ ಮಠಪತಿ ಮುಂತಾದವರು ಇದ್ದರು.