
ಕಲಬುರಗಿ,ಮೇ.29-ನಗರದ ಕಾಕಡೆ ಚೌಕ್ ಹತ್ತಿರವಿರುವ ಇಟ್ಟಂಗಿ ಭಟ್ಟಿಯ ಖುಲ್ಲಾ ಜಾಗದ ಸಾರ್ವಜನಿಕ ಸ್ಥಳದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಬ್-ಅರ್ಬನ್ ಪೊಲೀಸ್ ಠಾಣೆ ಪಿಎಸ್‍ಐ ಶಶಿಕಲಾ, ಸಿಬ್ಬಂದಿಗಳಾದ ಪುಂಡಲೀಕ, ಜಗದೀಶ ಮತ್ತು ಶಿವಕುಮಾರ ಅವರು ದಾಳಿ ನಡೆಸಿ ಐವರನ್ನು ಬಂಧಿಸಿದ್ದಾರೆ.
ಅಹ್ಮದ್ ಅಲಿಯಾಸ್ ಸದ್ದಂ, ಅಕ್ಬರ್, ಆಸೀಮ್, ಇಮ್ರಾನ್ ಮತ್ತು ತಾಜುದ್ದೀನ್ ಷಾ ಎಂಬುವವರನ್ನು ಬಂಧಿಸಿ 4,150 ರೂ.ನಗದು ಜಪ್ತಿ ಮಾಡಿದ್ದಾರೆ. ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.























