
ಸೇಡಂ, ಮೇ,29: ತಾಲೂಕಿನಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಧಾರಾಕಾರ ಮಳೆಗೆ ಲತಾ ಗಂಡ ರವೀಂದ್ರ ಕುಮಾರ್ ಕಡತಾಲ ತಾಂಡ ಸರ್ವೆ ನಂಬರ್ 61 ಮತ್ತು 62 ರಲ್ಲಿ ಎರಡು ಎಕರೆ ಶೇಂಗಾ ಬೆಳೆ ಸಂಪೂರ್ಣವಾಗಿ ನೀರು ಪಾಲಾಗಿದ್ದು, ಅಂದಾಜು 3 ರಿಂದ 4 ಲಕ್ಷ ರೂಪಾಯಿಗಳ ಭಾರಿ ನಷ್ಟ ಸಂಭವಿಸಿದೆ ಎಂದು ರೈತ ರವೀಂದ್ರ ಕುಮಾರ್ ಕಡತಾಲ ತಿಳಿಸಿದ್ದಾರೆ. ಸಂಜೆವಾಣಿ ವರದಿಗಾರರೊಂದಿಗೆ ಮಾತನಾಡಿದ ಅವರು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಬ್ರಿಜ್ ಗೆಟ್ ತೆಗೆಯದೆ ಇರುವುದರಿಂದ ನಮ್ಮ ಜಮೀನಿನಲ್ಲಿ ನೀರು ಬಂದು ಎರಡು ಎಕರೆ ಶೇಂಗಾ ಬೆಳೆ ಹಾನಿಯಾಗಿದ್ದು ಇದಕ್ಕೆ ನೇರವಾಗಿ ಇಲಾಖೆಯ ಅಧಿಕಾರಿಗಳೇ ನೇರವಾಗಿ ಕಾರಣರಾಗಿದ್ದಾರೆ ಎಂದು ರೈತ ಆಕ್ರೋಶ ವ್ಯಕ್ತಪಡಿಸಿದರು. ಸಂಬಂಧಪಟ್ಟ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ಪರಿಹಾರ ಒದಗಿಸುವಂತ ಪ್ರಯತ್ನ ಮಾಡಬೇಕಿದೆ ಎಂದು ಮನವಿ ಮಾಡಿಕೊಂಡಿದ್ದಾರೆ.
ನಮ್ಮ ಶೇಂಗಾದ ಹೊಲದಲ್ಲಿ ಸುಮಾರು 100 ಪೈಪುಗಳು ಮತ್ತು ಹೊಲದ ಸುತ್ತ ಡೈಮಂಡ್ ವೈರು ಪಿನ್ಸಿಂಗ್ ಹಾಕಿರುತ್ತೇವೆ. ಈ ಹೊಲದ ಸುತ್ತ ಇರುವ ಪಿನ್ಸಿಂಗ್ ಮತ್ತು ಸ್ಪ್ರಿಂಕ್ಲರ್ ಪೈಪುಗಳನ್ನು ಎಲ್ಲಾ ಕೊಚ್ಚಿ ಹೋಗಿದ್ದು ಸುಮಾರು ನಾಲ್ಕರಿಂದ ಐದು ಲಕ್ಷದವರೆಗೆ ನಷ್ಟವಾಗಿದೆ.
ರೈತ ರವೀಂದ್ರ ಕುಮಾರ್ ಕಡತಾಲ























