
ನವಲಗುಂದವ,ಮೇ.೨೯: ಮುಸ್ಲಿಂ ಬಾಂಧವರ ಪವಿತ್ರ ಹಬ್ಬಗಳಲ್ಲಿ ಒಂದಾದ ತ್ಯಾಗ, ಬಲಿದಾನ ಸ್ಮರಿಸುವ ಬಕ್ರೀದ್ ಹಬ್ಬವನ್ನು ಪಟ್ಟಣವೂ ಸೇರಿದಂತೆ ತಾಲ್ಲೂಕಿನಾದ್ಯಂತ ಗುರುವಾರ ಸಂಭ್ರಮದಿAದ ಆಚರಿಸಿ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಸಲೀಮ ಖಾಜಿ ನೇತೃತ್ವದಲ್ಲಿ ಈದ್ ನಮಾಝ್ ನಡೆಯಿತು ಪ್ರಾಥನೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಎನ್ ಎಚ್ ಕೋನರಡ್ಡಿ ಮಾತನಾಡಿದರು.
ಹಬ್ಬದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದAತೆ ಮುಂಜಾಗೃತಾ ಕ್ರಮವಾಗಿ ತಾಲ್ಲೂಕಿನಾದ್ಯಂತ ಬಹುತೇಕ ಮಸೀದಿಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ಬಾಬಾಜಾನ್ ಮುಲ್ಲಾ, ಉಸ್ಮಾನಸಾಬ ಬಬರ್ಚಿ, ಮೌಲಾಸಾಬ ವೈದ್ಯ, ಕರೀಂಸಾಬ ಹರ್ಲಾಪುರ, ಮೋದಿನಸಾಬ ಶಿರೂರ, ಸೈಪುದ್ದಿನ ಅವರಾಧಿ, ಫಕೃದ್ದೀನ ನದಾಫ್, ಸಿರಾಜುದ್ದಿನ ಧಾರವಾಡ,ರಿಯಾಜಅಹ್ಮದ ಪೀರಜಾದೆ, ನಬಿಸಾಬ ನದಾಫ್, ದಾವಲಸಾಬ ಮಸೂತಿ, ಮಾಬುಸಾಬ ಯರಗುಪ್ಪಿ, ಅಬ್ದುಲ್ ನದಾಫ್, ಅಬ್ಬಾಸಾಲಿ ದೆವರಿಡು, ಮಹ್ಮದಅಲಿ ಗದಗ, ಕಾಶೀಮಸಾಬ ಅಲ್ಲಿಬಾಯಿ, ಕತೀಬಸಾಬ ಅಲ್ಲಿಬಾಯಿ, ಅಸ್ಲಾಂ ಬೇಪಾರಿ, ರಿಯಾಜಅಹ್ಮದ ಬೇಪಾರಿ, ಅಲ್ಲಾಸಾಬ ಗೋವನಕೊಪ್ಪ, ದಾದಾಸಾಬ ನಾಶೀಪುಡಿ, ಹಸನಸಾಬ ನಾಶೀಪುಡಿ, ರಾಯೆಸಾಬ ಗುಳೇದ, ಬುಡ್ನಾಸಾಬ ಕಲ್ಲಕುಟ್ರಿ, ಹುಸೇನಸಾಬ ಶಿರಸಂಗಿ, ಅಲ್ಲಾಸಾಬ ಟಾಂಗಾದ, ಬುಡ್ನಾಸಾಬ ನರಗುಂದ, ಬಷಾಸಾಬ ಮಕಾಂದಾರ, ಹುಸೇನಸಾಬ ಶಿಗನಹಳ್ಳಿ ಸೇರಿದಂತೆ ಅಂಜುಮನ್ ಪದಾಧಿಕಾರಿಗಳು ಸದಸ್ಯರು, ಸಮಾಜದ ಬಾಂದವರು ಪ್ರಾಥನೆಯಲ್ಲಿ ಪಾಲ್ಗೊಂಡಿದ್ದರು.























