Home ಜಿಲ್ಲೆ ಪ್ರತ್ಯೇಕ ಪಾಲಿಕೆಗಾಗಿ ಪ್ರತಿಭಟನೆ

ಪ್ರತ್ಯೇಕ ಪಾಲಿಕೆಗಾಗಿ ಪ್ರತಿಭಟನೆ


ಹುಬ್ಬಳ್ಳಿ,ಮೇ.೨೯:
ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ಸಮಿತಿ ವತಿಯಿಂದ ಪಕ್ಷಾತೀತವಾಗಿ ವಿವಿಧ ಸಂಘಟನೆಗಳೊAದಿಗೆ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆಗಾಗಿ ಆಗ್ರಹಿಸಿ ನಗರದ ಪಾಲಿಕೆ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.


ಈಗಾಗಲೇ ರಾಜ್ಯಪಾಲರು ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆಗೆ ಅನುಮೋದನೆಯನ್ನು ನೀಡಿ ರಾಜ್ಯ ಸರ್ಕಾರಕ್ಕೆ ಮುಂದಿನ ಕ್ರಮಕ್ಕಾಗಿ ಕಳುಹಿಸಿದ್ದಾರೆ. ಈ ನಿಟ್ಟಿನಲ್ಲಿ ಇಂದು ನಡೆಯುವ ಪಾಲಿಕೆ ಸಭೆಯಲ್ಲಿ ಹುಧಾ ಬೃಹತ್ ಮಹಾನಗರ ಪಾಲಿಕೆ ಮಾಡುವ ವಿಷಯವನ್ನು ಕೈ ಬಿಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.


ಕಾಂಗ್ರೆಸ್ ನ ಪಾಲಿಕೆ ಸದಸ್ಯೆ ಕವಿತಾ ಕಬ್ಬೇರ್ ಮಾತನಾಡಿ, ಪ್ರತ್ಯೇಕ ಮಹಾನಗರ ಪಾಲಿಕೆ ಆದರೆ ಧಾರವಾಡ, ಹುಬ್ಬಳ್ಳಿ ಹೆಚ್ಚಿನ ಅಭಿವೃದ್ಧಿ ಆಗಲಿದೆ ಈ ಹೋರಾಟವನ್ನು ಹುಧಾ ಜನ ಒಪ್ಪಿದ್ದಾರೆ ಎಂದರು.
ಪ್ರತ್ಯೇಕ ಪಾಲಿಕೆ ಆಗುವವರೆಗೂ ಹೋರಾಟ ಮಾಡಲಾಗುವುದು ಎಂದರು.


ಈ ವೇಳೆ ಜೆಡಿಎಸ್ ಮುಖಂಡ ಗುರುರಾಜ್ ಹುಣಸಿಮರದ, ಬಿ.ಡಿ.ಪಾಟೀಲ್, ಶಿವಶಂಕರ್ ಹಂಪ್ಪಣ್ಣವರ, ಈಶ್ವರ ಶಿವಳ್ಳಿ, ಸಿ.ಎಸ್. ನೀಗನಾಳ, ಮನೋಜ್ ಕರ್ಜಗಿ ಉಪಸ್ಥಿತಿ ಇದ್ದರು.
ವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ಸಮಿತಿ ವತಿಯಿಂದ ಪಕ್ಷಾತೀತವಾಗಿ ವಿವಿಧ ಸಂಘಟನೆಗಳೊAದಿಗೆ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆಗಾಗಿ ಆಗ್ರಹಿಸಿ ನಗರದ ಪಾಲಿಕೆ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.