
ಕಲಬುರಗಿ: ಸಿದ್ದರಾಮಯ್ಯ ಅವರನ್ನು 2028 ರವರೆಗೆ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಮುಂದುವರೆಸುವಂತೆ ಆಗ್ರಹಿಸಿ ಇಂದು ಕರ್ನಾಟಕ ಪ್ರದೇಶ ಕುರುಬರ ಸಂಘ ಜಿಲ್ಲಾ ಶಾಖೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧ್ಯಕ್ಷ ಗುರುನಾಥ ಪೂಜಾರಿ,ರೇವಣಸಿದ್ದಪ್ಪ ಸಾತನೂರ,ಲಕ್ಷ್ಮಣ ಪೂಜಾರಿ,ಅಮೋಘಸಿದ್ಧ ,ಕುಪೇಂದ್ರ ಬರಗಾಲಿ,ಶಿವಲಿಂಗ ಬಾಸ್ಗಿ ಸಾವಳಗಿ ಸೇರಿದಂತೆ ಹಲವರು ಪಾಲ್ಗೊಂಡರು.























