Home ಜಿಲ್ಲೆ ಸಾಹಿತ್ಯ ಸಮ್ಮೇಳನ ನಡೆಸಲು ಮೇಯರ್ ಪರಿಷತ್ತಿಗೆ ಮನವಿ

ಸಾಹಿತ್ಯ ಸಮ್ಮೇಳನ ನಡೆಸಲು ಮೇಯರ್ ಪರಿಷತ್ತಿಗೆ ಮನವಿ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ:ಜು,3- ನಗರದಲ್ಲಿ ನಡೆಯ ಬೇಕಿದ್ದ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಲವು ಕಾರಣಗಳಿಂದ ನಡೆದಿಲ್ಲ. ಈಗ ದಿನಾಂಕ ನಿರ್ಧಾರಮಾಡಿ, ಸ್ವಾಗತ ಸಮಿತಿ ರಚಿಸಿ, ಸಮ್ಮೇಳನವನ್ನು ಈ ವರ್ಷವೇ ಆಯೋಜಿಸಲು ಮನವಿ. ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತಾಧಿಕಾರಿ

ಕೆ.ಎ ದಯಾನಂದ ಅವರಿಗೆ ಮೇಯರ್ ಗಾದೆಪ್ಪ ಮನವಿ ಸಲ್ಲಿಸಿದ್ದಾರೆ.

ಅಖಿಲ ಭಾರತ 88 ನೇ ಕನ್ನಡ ಸಾಹಿತ್ಯ ಸಮ್ಮೇಳನವು ಗಡಿ ಜಿಲ್ಲೆ ಬಳ್ಳಾರಿಯಲ್ಲಿ ಆಯೋಜಿಸಲು ಮಂಡ್ಯದಲ್ಲಿ ಜರುಗಿದ 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಿರ್ಧರಿಸಲಾಗಿತ್ತು.

ಬಳ್ಳಾರಿಯಲ್ಲಿ 1958ರಲ್ಲಿ ಡಾ ವಿ.ಕೃ. ಗೋಕಾಕ ಅವರ ಅಧ್ಯಕ್ಷತೆಯಲ್ಲಿ ಸಮ್ಮೇಳನವು ನಡೆದಿತ್ತು ನಂತರ ನಡೆದಿಲ್ಲ. 58 ವರ್ಷಗಳ ನಂತರ ಈಗ ಕನ್ನಡ ಹಬ್ಬಕ್ಕೆ ಸಮಯ ಬಂದಿದೆ. ಇದಕ್ಕಾಗಿ ಜಿಲ್ಲೆಯ ಸಂಸದರು, ಶಾಸಕರು ಸಮ್ಮೇಳನ ಆಯೋಜಿಸಲು ಸಿದ್ಧರಿದ್ದಾರೆ. ಹಾಗೆಯೇ ಮಹಾನಗರ ಪಾಲಿಕೆಯಿಂದ ನಾವು ಕೂಡ ಸಮ್ಮೇಳನ ಯಶಸ್ವಿಗೊಳಿಸಲು ಕೆಲಸ ಮಾಡು ಸನ್ನದ್ದರಾಗಿದ್ದೇವೆ.

ಜಿಲ್ಲೆಯ ಎಲ್ಲಾ ಧಾರ್ಮಿಕ ಸಂಸ್ಥೆಗಳ ಪೂಜ್ಯರು, ಸಾಹಿತಿಗಳು ಹಾಗೂ ಕನ್ನಡಪರ ಮತ್ತು ವಿವಿಧ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಮತ್ತು ವಾಣಿಜ್ಯ ಸಂಘಟನೆಗಳು ಜಿಲ್ಲೆಯ ಸಮಸ್ತ ಕನ್ನಡಾಭಿಮಾನಿಗಳು ಕೂಡ ಬಹುಬೇಗ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಅದ್ದರಿಂದ ಸಮ್ಮೇಳನವನ್ನು ಆಯೋಜಿಸಲು ಶೀಘ್ರವೇ ಕ್ರಮ ಕೈಗೊಳ್ಳಬೇಕೆಂದು ಮನವಿಅಡಿದ್ದಾರೆ.