ನಗರದ ಯಶವಂತಪುರ ಕ್ಷೇತ್ರ ವ್ಯಾಪ್ತಿಯ ನಾಗದೇವನಹಳ್ಳಿ ಕೆಂಪಾಪುರ ಕ್ರಾಸ್ ನ ಕೆಸಿಹೆಚ್‌ಎಸ್ ಲೇಔಟ್‌ನ ಸುವರ್ಣ ಭವನದಲ್ಲಿ ಸುವರ್ಣಜ್ಯೋತಿ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡರ ೫೧೭ನೇ ಜಯಂತಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಪುಷ್ಪ ದೇವರಾಜ್, ಉಪ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಕೇಶವಮೂರ್ತಿ ಸಿದ್ದಗಂಗಪ್ಪ, ಲಕ್ಷ್ಮಿ ಹಾಲಪ್ಪ, ಬಿಬಿಎಂಪಿ ಮಾಜಿ ಸದಸ್ಯ ಡಾ. ಎಸ್.ರಾಜು, ಮೆಲೋಡಿ ರಾಮು, ಹೊನ್ನೇಗೌಡ ತಿರುಪತಿ ಬಾಲಾಜಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಬ್ಯಾಗ್ ಹಾಗೂ ನೋಟ್ ಪುಸ್ತಕಗಳನ್ನು ವಿತರಣೆ ಮಾಡಲಾಯಿತು.