Home ಕ್ರೈಂ ಸುದ್ದಿಗಳು ಮದರಖಂಡಿ ಕ್ರಾಸ್‍ನಲ್ಲಿ ಬಸ್‍ಗೆ ಕಾರು ಡಿಕ್ಕಿ; ತಪ್ಪಿದ ಅನಾಹುತ

ಮದರಖಂಡಿ ಕ್ರಾಸ್‍ನಲ್ಲಿ ಬಸ್‍ಗೆ ಕಾರು ಡಿಕ್ಕಿ; ತಪ್ಪಿದ ಅನಾಹುತ

ಜಮಖಂಡಿ, ಜು 3: ತಾಲೂಕಿನ ಮದರಖಂಡಿ ಕ್ರಾಸ್‍ನಲ್ಲಿ ಸಾರಿಗೆ ಬಸ್‍ನ ಹಿಂಭಾಗಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ಜಖಂಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಜಮಖಂಡಿ ವಿಭಾಗದ ಸಾರಿಗೆ ಬಸ್ ಜಮಖಂಡಿಯಿಂದ ವಿಜಯಪುರಕ್ಕೆ ತೆರಳಿ, ಮರಳಿ ಜಮಖಂಡಿ ಮಾರ್ಗವಾಗಿ ಗೋಕಾಕ ಕಡೆಗೆ ತೆರಳುತ್ತಿದ್ದ ವೇಳೆ ಮದರಖಂಡಿ ಕ್ರಾಸ್ ಸಮೀಪದ ರಸ್ತೆ ಹಂಪ್ಸ್ ಬಳಿ ಚಾಲಕ ಬಸ್‍ನ ವೇಗವನ್ನು ನಿಧಾನಗೊಳಿಸಿದ್ದಾನೆ. ಈ ಸಂದರ್ಭದಲ್ಲಿ ಹಿಂಬದಿಯಿಂದ ವೇಗವಾಗಿ ಬಂದ ಸ್ವಿಫ್ಟ್ ಕಾರಿನ ಚಾಲಕ ನಿಯಂತ್ರಣ ಕಳೆದುಕೊಂಡು ಬಸ್‍ಗೆ ಡಿಕ್ಕಿ ಹೊಡೆದಿದ್ದಾನೆ ಎಂದು ತಿಳಿದು ಬಂದಿದೆ.

ಅಪಘಾತದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಘಟನೆಯಲ್ಲಿ ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಸ್ಥಳೀಯರ ಸಹಕಾರದಿಂದ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ.

ಈ ಘಟನೆ ಜಮಖಂಡಿ ಗ್ರಾಮೀಣ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.