Home ಜಿಲ್ಲೆ ಕಲಬುರಗಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಊಡಗಿ ಮನೆಗೆ ಎಸಿ, ತಹಶಿಲ್ದಾರ ಬೇಟಿ :ಎಸ್.ಐ.ಆರ್ ಫಾರಂ ವಿತರಣೆಗೆ ಚಾಲನೆ

ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಊಡಗಿ ಮನೆಗೆ ಎಸಿ, ತಹಶಿಲ್ದಾರ ಬೇಟಿ :ಎಸ್.ಐ.ಆರ್ ಫಾರಂ ವಿತರಣೆಗೆ ಚಾಲನೆ

ಸೇಡಂ.ಜು.3: ತಾಲೂಕಿನ ಊಡಗಿ ಗ್ರಾಮದಲ್ಲಿರುವ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ್ ಊಡಗಿ ಅವರ ಮನೆಗೆ ಸಹಾಯಕ ಆಯುಕ್ತರಾದ ಪ್ರಭರೆಡ್ಡಿ ಹಾಗೂ ತಹಶಿಲ್ದಾರ ಶ್ರೀಯಾಂಕ್ ಧನಶ್ರೀ ಆಗಮಿಸಿದರು.ಸಚಿವರ ಸಹೋದರ ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಬಸವರಾಜ ಪಾಟೀಲ ಊಡಗಿ ಅವರಿಗೆ ಎಸ್.ಐ.ಆರ್ ಪರಿಷ್ಕøತ ಫಾರಂ ನೀಡುವ ಮೂಲಕ ಅವರು ಎಸ್.ಐ.ಆರ್ ಪರಿಷ್ಕೃತ ಫಾರಂಗೆ ಚಾಲನೆ ನೀಡಿದರು. ಈ ವೇಳೆಯಲ್ಲಿ ಸತೀಶ್ ಕುಮಾರ್ ಬಾಂಜಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.