
ಹುಮನಾಬಾದ್ :ತಾಲೂಕ ಪಂಚಾಯತ್ ಸಭಾಂಗಣದಲ್ಲಿ ಬೂತ್ ಮಟ್ಟದ ಅಧಿಕಾರಿಗಳು (ಬಿ.ಎಲ್.ಒ.) ಜುಲೈ 29 ರವರೆಗೆ ಮನೆ ಮನೆಗಳಿಗೆ ಭೇಟಿ ನೀಡಿ ಮತದಾರರಿಗೆ ನಮೂನೆಗಳನ್ನು ವಿತರಿಸಿ. ಮತದಾರರು ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ನಮೂನೆಗಳನ್ನು ಹಿಂತಿರುಗಿಸಿ ಸಹಕರಿಸುವಂತೆ ಮಾಹಿತಿ ನೀಡುವಂತೆ ಜೊತೆಗೆ ಮೇಲ್ವಿಚಾರಕರ ಸಭೆ ನಡೆಸಿ ಎಸ್‍ಐಆರ್ ಕುರಿತು ಚರ್ಚಿಸಿದರು. ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
ಬಳಿಕ ತಾಲೂಕಿನ ಮಾಣಿಕನಗರ ಸೇರಿದಂತೆ ಗ್ರಾಮಗಳಿಗೆ ಭೇಟಿ ನೀಡಿದರು. ಕೆಲವು ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾರರಿಗೆ ಗಣತಿ ನಮೂನೆಯನ್ನು ವಿತರಿಸಿದರು. ಅಲ್ಲದೆ ವಿವಿಧ ಮತಗಟ್ಟೆಗಳಲ್ಲಿ ಎಸ್.ಐ.ಆರ್ ಪ್ರಕ್ರಿಯೆ ಪರಿಶೀಲಿಸಿದರು.
ಮತದಾರರ ಮನೆ ಬಾಗಿಲಿಗೆ ತೆರಳಿ ಗಣತಿ ನಮೂನೆಗಳನ್ನು ಮತದಾರರಿಗೆ ನೀಡುವ ಪ್ರಕ್ರಿಯೆ ಚುರುಕುಗೊಳಿಸಿ. ಮತದಾರರ ನಮೂನೆ ಭರ್ತಿ ಮಾಡುವ ವಿಧಾನ, ಅಗತ್ಯ ದಾಖಲೆಗಳನ್ನು ಲಗತ್ತಿಸುವುದು ಹಾಗೂ ನಿಗದಿತ ಅವಧಿಯೊಳಗೆ ಅರ್ಜಿಗಳನ್ನು ಸಲ್ಲಿಸುವ ಕುರಿತು ಮಾಹಿತಿ ತಿಳಿಸುವಂತೆ ಸಭೆಯಲ್ಲಿ ಸುಚಿಸಿದರು.
ತಹಸೀಲ್ದಾರ ಜಗದೀಶ ಚೌರ್ ಸಭೆಯಲ್ಲಿ ಮಾತನಾಡಿ ಎಸ್.ಐ.ಆರ್ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಹಾಗೂ ಪಾರದರ್ಶಕತೆ ಖಚಿತಪಡಿಸಲು ಎಲ್ಲಾ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಪ್ರತಿಯೊಂದು ಮತಗಟ್ಟೆಗೆ ಬೂತ್ ಮಟ್ಟದ ಏಜೆಂಟ್ ರನ್ನು ನೇಮಕ ಮಾಡಲು ಸೂಚಿಸಿದೆ. ಅವರ ಸಹಕಾರ ಪಡೆಯುವ ಮೂಲಕ ನಮೂನೆ ಭರ್ತಿ ಮಾಡುವ ವಿಧಾನ, ಅಗತ್ಯ ದಾಖಲೆಗಳನ್ನು ಲಗತ್ತಿಸುವುದು ಹಾಗೂ ನಿಗದಿತ ಅವಧಿಯೊಳಗೆ ಅರ್ಜಿಗಳನ್ನು ಸಲ್ಲಿಸಿ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಕುರಿತು ಮಾಹಿತಿ ನೀಡಿದರು.
ಪಿ.ಡಿ ಲಕ್ಷ್ಮಿಕಾಂತರೆಡ್ಡಿ, ಚಿಟ್ಟಗುಪ್ಪ ತಹಸೀಲ್ದಾರ ಮಂಜುನಾಥ ಪಂಚಾಳ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಗುಡಾಳ, ಕಂದಾಯ ನೀರಿಕ್ಷಕ ರಾಹುಲದೇವ ಪ್ರಸಾದ, ಗ್ರಾಮ ಆಡಳಿತ ಅಧಿಕಾರಿ ಮಲ್ಲಿನಾಥ, ವಸಂತ ಗಂಗನೂರ, ಶಿರಸ್ತೆದಾರ ಮೌನೇಶ್ವರ ಸ್ವಾಮಿ, ಸೇರಿದಂತೆ ಅನೇಕರು ಸಭೆಯಲ್ಲಿದರು.
ಹುಮನಾಬಾದ ಮತಕ್ಷೇತ್ರದಲ್ಲಿ ಒಟ್ಟು ಎಷ್ಟು ಮತಗಟ್ಟೆಗಳು-255
ಎಷ್ಟು ಮತದಾರರು ಇದ್ದಾರೆ.-262818
ಮತಗಟ್ಟೆ ಎಷ್ಟು-255
ಬಿ.ಎಲ್.ಒ ಎಷ್ಟು-255


























