
ಕಲಬುರಗಿ: ಗ್ರಾಮ ಪಂಚಾಯತಿಯ ವಿವಿಧ 37 ನೌಕರರಿಗೆ ಬಡ್ತಿ ನೀಡಲು ವಿಳಂಬ ಮಾಡುತ್ತಿರುದನ್ನು ವಿರೋಧಿಸಿ ಇಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ ಸಂಘ ಜಿಲ್ಲಾ ಸಮಿತಿಯಿಂದ ಜಿಪಂ ಕಚೇರಿ ಎದುರು ಅನಿರ್ದಿಷ್ಟ ಧರಣಿ ಆರಂಭಿಸಲಾಯಿತು.ನಾಗರಾಜ ಭಂಗೂರ,ಮಾರುತಿ ಸುಗ್ಗಾ,ಭೋಜರಾಜ ಮಾಲಿ ಪಾಟೀಲ,ಜೈಭೀಮ ಹೊಸಮನಿ ಸೇರಿದಂತೆ ಹಲವರು ಪಾಲ್ಗೊಂಡರು.
























