
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜು,3- ನಗರದ ತಾಳೂರು ರಸ್ತೆಯ ಪ್ರತಿಷತ ಖಾಸಗೀ ಕಾಲೇಜಿನ ಸಸ್ಯಶಾಸ್ತ್ರದ ಉಪನ್ಯಾಸಕ ರವಿಕಿರಣ್ (45) ವಿದ್ಯಾರ್ಥಿನಿಯನ್ನು ಲೈಂಗಿಕವಾಗಿ ಬಳಸಿಕೊಂಡ ಬಗ್ಗೆ ನಗರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮೂಲತಃ ಆಂದ್ರಪ್ರದೇಶ ಈತ ಕಳೆದ ಒಂದು ವರ್ಷದಿಂದ ವಿದ್ಯಾರ್ಥಿನಿಯ ಜೊತೆ ಸ್ನೇಹ ಬೆಳಸಿಕೊಂಡು ತಾಳೂರುರಸ್ತೆಯ ಖಾಸಗಿ ಲೇಔಟ್ ನ ನಿರ್ಜನ ಪ್ರದೇಶಕ್ಕೆ ಪದೇ ಪದೇ ಕರೆದುಕೊಂಡು ಹೋಗಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆಂದು ದೂರುನೀಡಿದ್ದಾಳೆ ಸಂತ್ರಸ್ಥೆ.
ವಿವಾಹಿತನಾಗಿರುವ ಈತನು ನಿನ್ನನ್ನು ಪ್ರೀತಿಸುತ್ತಿದ್ದೇನೆ. ನಿನ್ನನ್ನೇ ಮದುವೆಯಾಗುತ್ತೇನೆಂದು ನಂಬಿಸಿ ಬಲವಂತವಾಗಿ ಲೈಂಗಿಕವಾಗಿ ಬಳಸಿಕೊಂಡಿದ್ದಾನಂತೆ.
ದೂರು ಕೊಡುವ ಮುನ್ನ ಪ್ರಕರಣ ಬಗೆಹರಿಸಿಕೊಳ್ಳಲು ಸೆಟಲ್ ಮೆಂಟಿಗೆ 30 ಲಕ್ಷದ ಬೇಡಿಕೆ ಇಟ್ಟ ಬಗ್ಗೆ ವಾಟ್ಸ್ ಪ್ನಲ್ಲಿ ಚಾಟಿಂಗ್ ನಡೆದಿದೆಂದು ಹೇಳಲಾಗುತ್ತಿದೆ. ನ್ಯಾಯಾಲಯದಲ್ಲಿ ಈ ಬಗ್ಗೆ ವಿಚಾರಣೆ ವೇಳೆ ಹೊರಬರುವ ಸಾಧ್ಯತೆ ಇದೆ.


























