
ಸಂಜೆವಾಣಿ ನ್ಯೂಸ್
ಮೈಸೂರು: ಸೆ.07:- ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪಕ್ಷ ಮುಖ್ಯವಲ್ಲ. ವ್ಯಕ್ತಿಯೇ ಮುಖ್ಯ ಜನ ಜಿ.ಟಿ.ದೇವೇಗೌಡನೇ ಮುಖ್ಯ ಎಂದು ನನ್ನ ಕೈ ಹಿಡಿದು ಶಕ್ತಿ ತುಂಬಿದ್ದಿರಿ, ನಾನು ಕೊನೆ ಉಸಿರಿರುವರೆಗೂ ಚಾಮುಂಡೇಶ್ವರಿ ಕ್ಷೇತ್ರದ ಜನರ ಸೇವೆ ಮಾಡುತ್ತೇನೆ. ಮುಂದಿನ ಚುನಾವಣೆಗೆ ಜನರನ್ನ ಕರೆದು ಅವರು ಹೇಳಿದಂತೆ ಕೇಳುತ್ತೇನೆ ಎಂದು ಸಹಕಾರ ಮಹಾಮಂಡಳದ ಅಧ್ಯಕ್ಷ ಹಾಗೂ ಶಾಸಕ ಜಿ.ಟಿ.ದೇವೇಗೌಡ ಪರೋಕ್ಷವಾಗಿ ಗುಡುಗಿದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಭ್ಯರ್ಥಿ ಯಾರು ಎಂದು ನೋಡುವುದಿಲ್ಲ. ಅವರು ನನ್ನ ಮುಖ ನೋಡುತ್ತಾರೆ ಎಂದಿದ ಎಚ್ ಡಿಕೆ ಹೇಳಿಕೆ ಪರೋಕ್ಷವಾಗಿ ಉತ್ತರಿಸಿದ ಅವರು, ನಾನು ಹಿಂದೆ ಬಿಜೆಪಿ ಹೋಗಿದಾಗ ಚಾಮುಂಡೇಶ್ವರಿಯಲ್ಲಿ ಜೆಡಿಎಸ್ ಮೂರನೇ ಸ್ಥಾನಕ್ಕೆ ಬಂದಿತ್ತು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪಕ್ಷ ಮುಖ್ಯ ಅಲ್ಲ. ಅಲ್ಲಿ ಜಿ.ಟಿ ದೇವೇಗೌಡ ಮಾತ್ರ ಮುಖ್ಯ. ಜನ ನನಗಾಗಿಯೇ ಅಲ್ಲಿ ನನ್ನನ್ನು ಗೆಲ್ಲಿಸಿದ್ದಾರೆ. ನನ್ನ ವಿರುದ್ಧ ಎಂಥಂತವರು ನಿಂತರು ನನ್ನ ಕೈ ಬಿಟ್ಟಿಲ್ಲ. ಸಿಎಂ ವಿರುದ್ಧವೇ 35 ಸಾವಿರ ಮತದಿಂದ ಗೆಲ್ಲಿಸಿದ್ದರು. ಕ್ಷೇತ್ರದಲ್ಲಿ ಪಕ್ಷಕ್ಕಿಂತ ಜಿ.ಟಿ.ದೇವೇಗೌಡ ಮುಖ್ಯ ಅಂತಾ ಜನ ಸಂದೇಶ ನೀಡಿದ್ದಾರೆ. ಮೂರು ವರ್ಷದಿಂದ ನನಗೆ ಪಕ್ಷದವರಿಂದ ಜೆಡಿಎಸ್ ನಿಂದ ಅವಮಾನವಾಯಿತು. ನಾನು ಜೆಡಿಎಸ್ ಶಾಸಕ ಆದರೆ, ಜೆಡಿಎಸ್ ಯಾವ ಕಾರ್ಯಕ್ರಮಕ್ಕೂ ನನನ್ನೂ ಕರೆಯಲಿಲ್ಲ. ಯಾವ ಜೆಡಿಎಸ್ ಸಮಾವೇಶಕ್ಕೆ ಕರೆಯದೆ ನನ್ನನ್ನು ಅವಮಾನ ಮಾಡಿದರು. ಈ ಅವಮಾನಕ್ಕೆ ಉತ್ತರಕ್ಕಾಗಿ ನಮ್ಮ ಜನ ಮೆರವಣಿಗೆ ಮಾಡುತ್ತಿದ್ದಾರೆ. ಇದು ನನ್ನ ಶಕ್ತಿ ಪ್ರದರ್ಶನ ಅಲ್ಲ. ಇದು ಜನರು ನನಗೆ ಕೊಟ್ಟಿರುವ ಪ್ರೀತಿಯ ಸಂಕೇತ. ನನ್ನನ್ನು ಏಕಾಂಗಿಯಾಗಲು ಕ್ಷೇತ್ರದ ಜನರು ಬಿಡುವುದಿಲ್ಲ. ನಾನು ಸಾಯುವ ತನಕ ಏಕಾಂಗಿಯಾಗಿ ಈ ಜನರ ಸೇವೆ ಮಾಡುತ್ತೇನೆಂದರು.
ನನ್ನ ಜೊತೆಯಲ್ಲಿ 56 ವರ್ಷಗಳಿಂದ ಇದ್ದೀರಿ. ನಾನು ಕ್ಷೇತ್ರದಲ್ಲಿ 3 ವರ್ಷಗಳಿಂದ ಯಾವುದೇ ಕಾರ್ಯಕ್ರಮ ಮಾಡಿಲ್ಲ. ಕ್ಷೇತ್ರದಲ್ಲಿ ಕುಡಿಯುವ ನೀರು, ಬಸ್, ಶಾಲಾ ಕಾಲೇಜುಗಳ ವಿಷಯದಲ್ಲಿ ಶಕ್ತಿ ತುಂಬಿದ್ದೀರಿ. ಜಿ.ಟಿ.ದೇವೇಗೌಡ ಉಸಿರು ಇರುವ ತನಕ ನಿಮ್ಮ ಸೇವೆ ಮಾಡುವುದೇ ನನ್ನ ಗುರಿ. ಜಿ.ಟಿ.ದೇವೇಗೌಡ ಎಲ್ಲಿದ್ದಾರೆ ಎಂದು ಹೇಳುತ್ತಿದ್ದವರಿಗೆ ತಕ್ಕ ಉತ್ತರ ಕೊಟ್ಟಿದ್ದೀರಿ. ಇವತ್ತು ನಿಮ್ಮ ಶಕ್ತಿ ತೋರಿದ್ದೀರಿ. ಪಿಎಲ್ಡಿ ಬ್ಯಾಂಕ್ ಚುನಾವಣೆಯಲ್ಲಿ ಎಲ್ಲಾ ಶಾಸಕರು ಒಂದು ಕಡೆ ಇದ್ದಾಗಲೂ ನೀವೆಲ್ಲಾ ಜಿ.ಟಿ.ದೇವೇಗೌಡನನ್ನು ಗೆಲ್ಲಿಸಿದ್ದೀರಿ. ನಮ್ಮ ಜಿಟಿ ದೇವೇಗೌಡ ನಮ್ಮನೆ ಮಗ ಎಂದು ಹೇಳಿದ್ದೀರಿ. ಜಿ.ಟಿ.ದೇವೇಗೌಡ ಹೆಸರು ಹೇಳಿದರೆ ಎಲ್ಲಾದರೂ ಸರಿ ಒಂದು ಕಪ್ ನೀರನ್ನಾದರೂ ಕೊಡುತ್ತಾರೆಂದರು.
ಮಹಾ ಮಂಡಲದಲ್ಲಿ ಜಿ.ಟಿ.ದೇವೇಗೌಡನನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಮಹಾಮಂಡಳದಿಂದ ನನ್ನ ತೆಗೆಯಲು ಹೋರಾಟವನ್ನೇ ಮಾಡಿದ್ದರು. ಆದರೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಹಕಾರ ಸಚಿವ ಲಕ್ಷ್ಮಣ್ ಸವದಿ ಗೆಲ್ಲಿಸಿದ್ದಾರೆ ಅವರ ಹೆಸರನ್ನು ಹೇಳಬಾರದಾ?. ಚಾಮುಂಡೇಶ್ವರಿ ಕ್ಷೇತ್ರದ ಜನರು ಸ್ವಾಭಿಮಾನದ ಜನ, ನನ್ನ ಸೋಲಿಸಲು ಏನೆಲ್ಲಾ ಮಾಡಿದ್ದಾರೆ. ಕಳೆದ ಚುನಾವಣೆ ಜಿಲ್ಲಾ ಪಂಚಾಯತ ಅಧ್ಯಕ್ಷರು, ಸದಸ್ಯರು ಎಲ್ಲಾ ಹೋದರೂ ಜನರು ಜಿ.ಟಿದೇವೇಗೌಡರನ್ನು ಬಿಟ್ಟರಾ?, ಜಿ.ಟಿ.ದೇವೇಗೌಡ ಉಸಿರು ಇರುವವರೆಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಲ್ಲುತ್ತೇನೆ, ಪಕ್ಷ ಯಾವುದಾದರೂ ಇರಲಿ, ಪಕ್ಷೇತರವಾದರೂ ಸರಿ ಜಿಟಿಡಿ ಚುನಾವಣೆ=ಯಲ್ಲಿ ನಿಲ್ಲಬೇಕು, ಗೆಲ್ಲಬೇಕು. ನಮ್ಮ ತಂದೆ, ತಾಯಿ, ನಿಮ್ಮನ್ನು ದೇವರು ಎಂದು ತಿಳಿದಿದ್ದೇನೆ. ಒತ್ತಡದಲ್ಲಿ ನಿಮ್ಮನ್ನು ಬೇಟಿ ಮಾಡಲು ಆಗಲ್ಲ. ನಮ್ಮ ಮನೆಗೆ ಬನ್ನಿ. ಹೇಳಿದರು.


























