
ಕಾಪು : ದೇಹದಲ್ಲಿ ಇರುವ ಮಲಿನ ರಕ್ತವನ್ನು ಹಿಜಮಾ (ಕಪಿಂಗ್ ತೆರಪಿ ) ಕ್ರಮದಿಂದ ಹೊರಗೆ ತೆಗೆದಾಗ , ಮನುಷ್ಯನು ಆರೋಗ್ಯಪೂರ್ಣನಾಗುತ್ತಾನೆ. ಈ ಚಿಕಿತ್ಸೆಯಲ್ಲಿ ಯಾವುದೇ ಅಡ್ಡ ಪರಿಣಾಮ ಉಂಟಾಗುದಿಲ್ಲವೆಂದು ಮತ್ತು ಇದು ಪ್ರಾಚಿನ ಚಿಕಿತ್ಸಾ ವಿಧಾನವಾಗಿದೆ ಎಂದು, ಉಡುಪಿ ಜಿಲ್ಲಾ ಆಯುಷ್ ವಿಭಾಗದ ಮೆಡಿಕಲ್ ಆಧಿಕಾರಿ , ಯುನಾನಿ ವೈದ್ಯರಾದ ಸಯ್ಯದ್ ಝಾಹಿದ್ ಹುಸೈನ್ ಹೇಳಿದರು.
ಅವರು ಯುನಾನಿ ರಾಷ್ಟ್ರೀಯ ದಿನಾಚರಣೆಯ ಅಂಗವಾಗಿ, ಜಮಾ ಆತೆ ಇಸ್ಲಾಮೀ ಹಿಂದ್ ಕಾಪು ಶಾಖೆ ಮತ್ತು ಹೆಚ್. ಆರ್. ಎಸ್ ಕಾಪು ಗ್ರೂಪ್ ವತಿಯಿಂದ ಕೊಂಬಗುಡ್ಡೆ ಇಬ್ರಾಹೀಮ್ ಮಂಝಿಲ್ ನಲ್ಲಿ ನಡೆಸಿಕೊಟ್ಟ , ಉಚಿತ ಆರೋಗ್ಯ ತಪಾಸಣ ಹಾಗೂ ಹಿಜಾಮ ಚಿಕಿತ್ಸಾ ಶಿಬಿರದಲ್ಲಿ ಮಾತಾಡುತ್ತಾ ಹೇಳಿದರು.
ಸಬಾ ಕಾರ್ಯಕ್ರಮದ ಅಧ್ಯಕ್ಷರು ಆದ ಜಮಾ ಆತೆ ಇಸ್ಲಾಮೀ ಹಿಂದ್ ಕಾಪು ಶಾಖೆಯ ಅಧ್ಯಕ್ಷರು ಅನ್ವರ್ ಅಲಿ , ಶಿಬಿರಾರ್ಥಿಗಳನ್ನು ಉದ್ದೇಶಿಸಿ , ಪ್ರತಿಯೊಬ್ಬ ಮನುಷ್ಯನು ಅರೋಗ್ಯವಂತನ್ನಾಗಿದ್ದರೆ ಆತನ ಕುಟುಂಬ ಮತ್ತು ಸಮಾಜ ಆರೋಗ್ಯವಂತ ಆಗುತ್ತದೆ.
ಈ ನಿಟ್ಟಿನಲ್ಲಿ ಮನುಷ್ಯನು ತನ್ನ ಜೀವನದಲ್ಲಿ ಸ್ವಚ್ಛತೆಯನ್ನು ಕಾಪಾಡುತ್ತಾ , ನಿಯಮಿತ ಜೀವನದೊಂದಿಗೆ ಮಿತಾಹಾರ ಸೇವನೆ ಮಾಡುತ್ತಾ , ಮಧ್ಯಪಾನ , ತಂಬಾಕು ಸೇವನೆ ಹಾಗೆಯೇ ಇನ್ನಿತರ ದುಷ್ಚಟದೊಂದಿಗೆ ದೂರ ಇರಬೇಕು.
ದಿನದಲ್ಲಿ ಸ್ವಲ್ಪ ವ್ಯಾಯಾಮ ಮಾಡುತ್ತಾ, ಜನ ಪರ ಕೆಲಸದೊಂದಿಗೆ ಸೇವೆಗಾಗಿ ಸಮಯ ವಿನಿಯೋಗಿಸಿ ತನ್ನ ಆರೋಗ್ಯವನ್ನು ಕಾಪಾಡಬೇಕು ಎಂದರು . ಕಾರ್ಯಕ್ರಮವು ಮುಹಮ್ಮದ್ ಹಾಶಿಮ್ ಸಾಹೇಬರ ಕುರ್ ಆನ್ ಪಠನದೊಂದಿಗೆ ಪ್ರಾರಂಭವಾಯಿತು.
ಕಾಪು ಶಾಖೆಯ ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್ ಸಾಹೇಬರು ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣ ಮಾಡಿದರು. ಮುಖ್ಯ ಅತಿಥಿ ಎಕ್ಕಾವನ್ ನಸೀರ್ ಅಹ್ಮದ್ ರವರು ಶುಭ ಸಂದೇಶ ನೀಡಿದರು.
ಶೇಕ್ ಮುಹಮ್ಮದ್ ಶರೀಫ್ ರವರು ಧನ್ಯವಾದ ನೀಡಿದರು.
ಹೆಚ್. ಆರ್ . ಎಸ್ ನ ಕಾಪು ಗ್ರೋಪ್ ಲೀಡರ್ ಮುಹಮ್ಮದ್ ಅಲಿ ಯವರು ಕಾರ್ಯಕ್ರಮ ನಿರೂಪಿಸಿದರು.
ಬಹು ಸಂಖ್ಯೆಯಲ್ಲಿ ಪುರುಷರು ಈ ಚಿಕಿತ್ಸೆಯ ಪ್ರಯೋಜನ ಪಡೆದರು.ಚಿಕಿತ್ಸೆಯನ್ನು ನುರಿತ ಯುನಾನಿ ವೈದ್ಯರು ಮತ್ತು ಅವರ ತಂಡ ನಡೆಸಿತು.





























