
ಸಂಜೆವಾಣಿ ನ್ಯೂಸ್
ಮೈಸೂರು, ಸೆ.06: ತಂತ್ರಜ್ಞಾನ ಮತ್ತು ಂI ಯುಗದಲ್ಲಿ ಮಾಹಿತಿ ಉಚಿತವಾಗಿ ಸಿಗುತ್ತಿದ್ದರೂ, ಶಿಕ್ಷಕರ ಸ್ಥಾನವನ್ನು ಯಾವುದೇ ತಂತ್ರಜ್ಞಾನವೂ ಭರ್ತಿ ಮಾಡಲು ಸಾಧ್ಯವಿಲ್ಲ ಎಂದು ನಗರಾಭಿವೃದ್ಧಿ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ನಗರದ ಕರ್ನಾಟಕ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಅವರ 138ನೇ ಜನ್ಮದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ-2026 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಎಂದರೆ ಕೇವಲ ಮಾಹಿತಿ ನೀಡುವುದಲ್ಲ, ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ, ನೈತಿಕ ಮೌಲ್ಯ, ಸಂಸ್ಕಾರ ರೂಪಿಸುವುದು. ನಮ್ಮ ಸಂಸ್ಕೃತಿಯಲ್ಲಿ ಗುರುವಿಗೆ ಬ್ರಹ್ಮನಿಗೆ ಸಮಾನ ಸ್ಥಾನವಿದೆ. ಶಿಕ್ಷಣ ಕ್ಷೇತ್ರಕ್ಕೆ ಅಗತ್ಯ ಮೂಲಸೌಕರ್ಯ ಒದಗಿಸಲು ಸರ್ಕಾರ ಬದ್ಧವಾಗಿದೆ. ಶಾಲಾ ಕಟ್ಟಡ ದುರಸ್ತಿ, ಶಿಕ್ಷಕರ ಕೊರತೆ ನೀಗಿಸಲು 15,000 ಶಿಕ್ಷಕರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಶಿಕ್ಷಕರು ನಿರಂತರ ವಿದ್ಯಾರ್ಥಿಯಾಗಿರಬೇಕು: ಶಾಸಕ ತನ್ವೀರ್ ಸೇಠ್ ಕಾರ್ಯಕ್ರಮದಲ್ಲಿ ಮಾತನಾಡಿದ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್, 21ನೇ ಶತಮಾನದ ಸವಾಲುಗಳನ್ನು ಎದುರಿಸಲು ಶಿಕ್ಷಕರು ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಪ್ರತಿವರ್ಷ ತರಗತಿಗೆ ಬರುವ ಮಕ್ಕಳ ವಯಸ್ಸು ಒಂದೇ ಇದ್ದರೂ, ಅವರ ಮನಸ್ಥಿತಿ ಬದಲಾಗುತ್ತದೆ. ಪೆÇೀಷಕರಿಗಿಂತ ಹೆಚ್ಚಾಗಿ ಶಿಕ್ಷಕರು ಮಗುವಿನ ಅಗತ್ಯಗಳನ್ನು ಅರ್ಥಮಾಡಿಕೊಳ್ಳಬಲ್ಲರು. ಆದ್ದರಿಂದ ಶಿಕ್ಷಕರು ನಿರಂತರವಾಗಿ ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕು. ಕೇವಲ ಸಂಬಳ, ಭತ್ಯೆಗೆ ಸೀಮಿತವಾಗದೆ ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದರು.
ಇಚ್ಛೆಯಿಂದ ಬಂದವರು ಶಿಕ್ಷಕರಾಗಬೇಕು: ಪೆÇ್ರ.ವೆಂಕಟೇಶಮೂರ್ತಿ:ನಿವೃತ್ತ ಪ್ರಾಧ್ಯಾಪಕ ಪೆÇ್ರ. ಸಿ.ಜಿ. ವೆಂಕಟೇಶಮೂರ್ತಿ ಮಾತನಾಡಿ, ಶಿಕ್ಷಣ ಕೇವಲ ವೃತ್ತಿಯಲ್ಲ, ಪವಿತ್ರ ಹೊಣೆಗಾರಿಕೆ. ಅನೇಕರು ಆಕಸ್ಮಿಕವಾಗಿ ಶಿಕ್ಷಕರಾಗುತ್ತಾರೆ, ಸ್ವ-ಇಚ್ಛೆಯಿಂದ ಬರುವವರ ಸಂಖ್ಯೆ ಹೆಚ್ಚಬೇಕು. ಬೋಧನೆಯಲ್ಲಿ ಆಸಕ್ತಿ ಇಲ್ಲದವರು ಈ ಕ್ಷೇತ್ರದಿಂದ ಹೊರಗುಳಿಯುವುದೇ ಕೊಡುಗೆ. ಪ್ರತಿ ಮಗುವಿನ ಹಿನ್ನೆಲೆ ಅರ್ಥಮಾಡಿಕೊಂಡು ಕಲಿಸಬೇಕು. ತರಗತಿಯಲ್ಲಿನ ಮಕ್ಕಳ ಸಾಮಥ್ರ್ಯ, ಆರೋಗ್ಯ, ಕುಟುಂಬದ ವಾತಾವರಣದ ಮಾಹಿತಿ ಶಿಕ್ಷಕರಿಗೆ ಇರಬೇಕು. ವಿಶೇಷಚೇತನ ಮಕ್ಕಳಿಗೆ ರಯಾಂಪ್, ರೇಲಿಂಗ್ ಸೌಲಭ್ಯ ಕಡ್ಡಾಯ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಶಾಸಕರಾದ ಟಿ.ಎಸ್.ಶ್ರೀವತ್ಸ, ಕೆ.ಹರೀಶ್‍ಗೌಡ, ಜಿ.ಪಂ ಸಿಇಒ ಯುಕೇಶ್ ಕುಮಾರ್, ಅಪರ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ಎಂ.ರಂಗಸ್ವಾಮಿ, ಡಿಡಿಪಿಐ ಉದಯ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.


























