
ಜುಲೈ 17 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ನಾಗಾಲೋಟದಲ್ಲಿ ಓಡುತ್ತಿರುವ ಕ್ರಿಸ್ಟೋಫರ್ ನೋಲನ್ ಅವರ ಸಾಹಸಮಯ ಮಹಾಕಾವ್ಯ ದಿ ಒಡಿಸ್ಸಿ' ಈಗ ಪೈರಸಿ ಜಾಲಕ್ಕೆ ಬಲಿಯಾಗಿದೆ. ಈ ಬಹುನಿರೀಕ್ಷಿತ ಚಿತ್ರದ ಉತ್ತಮ ಗುಣಮಟ್ಟದ ಆವೃತ್ತಿಯೊಂದುಏಕ್ಸ್’ (ಹಿಂದಿನ ಟ್ವಿಟರ್) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಮೂಲಕ ಚಿತ್ರತಂಡಕ್ಕೆ ಅಚ್ಚರಿ ಮೂಡಿಸಿದೆ.
ಏಕ್ಸ್' ನಲ್ಲಿ ವೈರಲ್ ಆದ ಸಂಪೂರ್ಣ ಸಿನಿಮಾ ಜುಲೈ 25 ರಂದು ಅನಾಮಧೇಯ ಖಾತೆಯೊಂದರಿಂದ ಸಂಪೂರ್ಣ ಸಿನಿಮಾವನ್ನುಏಕ್ಸ್’ ನಲ್ಲಿ ಅಪ್‍ಲೋಡ್ ಮಾಡಲಾಗಿತ್ತು. “ಯಾರೋ ದಿ ಒಡಿಸ್ಸಿ' ಸಿನಿಮಾವನ್ನು ಪೂರ್ತಿಯಾಗಿ ಏಕ್ಸ್ ಗೆ ಅಪ್‍ಲೋಡ್ ಮಾಡಿದ್ದಾರೆ, ನಂಬಲು ಸಾಧ್ಯವಾಗುತ್ತಿಲ್ಲ!" ಎಂಬ ಪೆÇೀಸ್ಟ್ ವೈರಲ್ ಆಗುತ್ತಿದ್ದಂತೆ, ಈ ಪೈರೇಟೆಡ್ ವೀಡಿಯೊ ಕೇವಲ ಎರಡು ಗಂಟೆಗಳಲ್ಲಿ 2.1 ಮಿಲಿಯನ್‍ಗೂ ಹೆಚ್ಚು (21 ಲಕ್ಷಕ್ಕೂ ಅಧಿಕ) ವೀಕ್ಷಣೆಗಳನ್ನು ಪಡೆಯಿತು. ವಿಷಯ ತಿಳಿಯುತ್ತಿದ್ದಂತೆಯೇ ಜಾಗರೂಕರಾದ 'ಏಕ್ಸ್ ಸಂಸ್ಥೆಯು ಹಕ್ಕುಸ್ವಾಮ್ಯ ಉಲ್ಲಂಘನೆ ಕಾಯ್ದೆಯಡಿ ವೀಡಿಯೊವನ್ನು ತಕ್ಷಣವೇ ತೆಗೆದುಹಾಕಿ, ಅದನ್ನು ಪೆÇೀಸ್ಟ್ ಮಾಡಿದ್ದ ಖಾತೆಯನ್ನು ಅಮಾನತುಗೊಳಿಸಿತು. ಮೂಲ ವೀಡಿಯೊ ಡಿಲೀಟ್ ಆದರೂ, ಅದರ ಹಲವು ಪ್ರತಿಗಳು ಜಾಲತಾಣದಲ್ಲಿ ಸಕ್ರಿಯವಾಗಿದ್ದವು. ನಂತರ ಬಳಕೆದಾರರನ್ನು ದಾರಿ ತಪ್ಪಿಸಲು ಅವುಗಳ ಜಾಗದಲ್ಲಿ 1987 ರ ಪ್ರಸಿದ್ಧ ಹಿಟ್ ಹಾಡು "ನೆವರ್ ಗೊನ್ನಾ ಗಿವ್ ಯು ಅಪ್" ನಂತಹರಿಕ್‍ರೋಲ್’ ವೀಡಿಯೊಗಳನ್ನು ಸೇರಿಸಲಾಯಿತು. ಈ ಹಿಂದೆ ರಯಾನ್ ಗೊಸ್ಲಿಂಗ್ ಅಭಿನಯದ ಬಾರ್ಬಿ',ದಿ ಸೂಪರ್ ಮಾರಿಯೋ ಗ್ಯಾಲಕ್ಸಿ ಮೂವಿ’ ಹಾಗೂ ಅವತಾರ್ 3' ಚಿತ್ರಗಳು ಸಹ ಇದೇ ರೀತಿಏಕ್ಸ್’ ನಲ್ಲಿ ಸೋರಿಕೆಯಾಗಿದ್ದವು ಎಂಬುದು ಗಮನಾರ್ಹ.
ಯೂನಿವರ್ಸಲ್ ಪಿಕ್ಚರ್ಸ್ ತೀವ್ರ ಪ್ರತಿಕ್ರಿಯೆ
ಸಿನಿಮಾ ಸೋರಿಕೆಯಾದ ತಕ್ಷಣವೇ ಸಕ್ರಿಯಗೊಂಡ ನಿರ್ಮಾಣ ಸಂಸ್ಥೆ ಯೂನಿವರ್ಸಲ್ ಪಿಕ್ಚರ್ಸ್, ಅನಧಿಕೃತ ಕಂಟೆಂಟ್ ತೆಗೆದುಹಾಕಲು ತಕ್ಷಣದ ಕ್ರಮ ಕೈಗೊಂಡಿರುವುದಾಗಿ ದೃಢಪಡಿಸಿದೆ.
“ಚಿತ್ರದ ಅನಧಿಕೃತ ಪೆÇೀಸ್ಟ್ ಬಗ್ಗೆ ನಮಗೆ ಮಾಹಿತಿ ಸಿಕ್ಕ ತಕ್ಷಣವೇ ಅದನ್ನು ಡಿಲೀಟ್ ಮಾಡುವ ಪೆÇ್ರೀಟೋಕಾಲ್ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ. ನಾವು ಹಕ್ಕುಸ್ವಾಮ್ಯ ಉಲ್ಲಂಘನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತೇವೆ. ನಮ್ಮ ಬೌದ್ಧಿಕ ಆಸ್ತಿ ಹಕ್ಕುಗಳು ಹಾಗೂ ವಿಷಯವನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತೇವೆ,” ಎಂದು ಸ್ಟುಡಿಯೋ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಬಾಕ್ಸ್ ಆಫೀಸ್‍ನಲ್ಲಿ ಬ್ಲಾಕ್‍ಬಸ್ಟರ್ ಪ್ರದರ್ಶನ!
ಸೋಷಿಯಲ್ ಮೀಡಿಯಾದಲ್ಲಿ ಪೈರಸಿ ಸೋರಿಕೆಯಾಗಿದ್ದರೂ, ‘ದಿ ಒಡಿಸ್ಸಿ’ ಚಿತ್ರದ ಬಾಕ್ಸ್ ಆಫೀಸ್ ಗಳಿಕೆಗೆ ಯಾವುದೇ ರೀತಿಯ ಧಕ್ಕೆಯಾಗಿಲ್ಲ. ಸಂಪೂರ್ಣವಾಗಿ ಐಮ್ಯಾಕ್ಸ್ ಕ್ಯಾಮೆರಾಗಳಲ್ಲಿಯೇ ಚಿತ್ರೀಕರಿಸಲ್ಪಟ್ಟ ಈ ಸಿನಿಮಾ ಕ್ರಿಸ್ಟೋಫರ್ ನೋಲನ್ ಅವರ ವೃತ್ತಿಜೀವನದ ಅತಿದೊಡ್ಡ ವಾಣಿಜ್ಯ ಯಶಸ್ಸಿನತ್ತ ಮುನ್ನುಗ್ಗುತ್ತಿದೆ.
ಜಾಗತಿಕ ಗಳಿಕೆ: $270 ಮಿಲಿಯನ್ ವೆಚ್ಚದಲ್ಲಿ ನಿರ್ಮಾಣಗೊಂಡ ಈ ಚಿತ್ರವು ಬಿಡುಗಡೆಯಾದ ಕೇವಲ 10 ದಿನಗಳಲ್ಲಿ ಪ್ರಪಂಚದಾದ್ಯಂತ $640 ಮಿಲಿಯನ್ ಗಳಿಸಿದ್ದು, ಶೀಘ್ರದಲ್ಲೇ $700 ಮಿಲಿಯನ್ ಗಡಿಯನ್ನು ದಾಟುವ ನಿರೀಕ್ಷೆಯಲ್ಲಿದೆ.






























