
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.09: ರಾಜ್ಯ ಸರ್ಕಾರದ ಆಡಳಿತ ವೈಫಲ್ಯದ ವಿರುದ್ದ ಬಿಜೆಪಿ ಲಿಂಗಸೂಗೂರಿನಿಂದ ಆರಂಭಿಸಿರುವ ಬಳ್ಳಾರಿ ಚಲೋ ಪಾದಯಾತ್ರೆಯ 9 ನೇ ದಿನವಾದ ಇಂದು ಬೆಳಿಗ್ಗೆ ತಾಲೂಕಿನ ಕುಡಿತಿನಿ ಗ್ರಾಮದಿಂದ ಆರಂಭಗೊಂಡು ಮಧ್ಯಾಹ್ನದ ವೇಳಿಗೆ ನಗರದ ಹೊರ ವಲಯದ ರಾಮೇಶ್ಚರಿ ನಗರಕ್ಕೆ ಬಂದು ತಲುಪಿದೆ.ಸಂಜೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಸಲಿದೆಯಂತೆ.
ಪಾದಯಾತ್ರೆಯಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ವಿಜಯೇಂದ್ರಕೈಯಲ್ಲಿ ಢಮರುಗ ಹಿಡಿದು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಅವರ ಜೊತೆ ಮುಖಂಡರಾದ
ನಳಿನ್ ಕುಮಾರ್ ಕಟೀಲ್, ಸುರೇಶ್ ಕುಮಾರ್, ಹರೀಶ್ ಪೂಂಜಾ, ಶ್ರೀರಾಮಯಲು, ಜನಾರ್ದನರೆಡ್ಡಿ
ಸೇರಿದಂತೆ ಹಲವು ಬಿಜೆಪಿ ನಾಯಕರು ಸಾಥ್ ನೀಡಿದರು.
ದಾರಿಯಲ್ಲಿ ಕಳೆದ ಮೂರು ವರ್ಷದಿಂದ ಧರಣಿ ನಡೆಸುತ್ತಿರುವ ಕುಡುತಿನಿ ಭೂಸಂತ್ರಸ್ತರನ್ನು ವಿಜಯೇಂದ್ರ ಭೇಟಿಮಾಡಿದಾಗ ಸಂತ್ರಸ್ಥರು. ಕಳೆದ ಹದಿನೈದು ವರ್ಷದ ಹಿಂದೆ ಕಡಿಮೆ ದರಕ್ಕೆ ಭೂಮಿ ಪಡೆದಿದ್ದಾರೆ. ನಮಗೆ ಈಗಿರೋ ದರ ನೀಡಬೇಕಿದೆ.
ಮಿತ್ತಲ್ ಎನ್.ಎಂ.ಡಿ.ಸಿ. ಬ್ರಹ್ಮಿಣಿ ಸೇರಿದಂತೆ ವಿವಿಧ ಕಂಪನಿ ಗಳಾಗಿ ಹತ್ತು ಸಾವಿರ ಎಕರೆ ಭೂಮಿ ನೀಡಿದೆ ಕೈಗಾರಿಕೆ ಸ್ಥಾಪನೆ ಮಾಡಿಲ್ಲ ಹೆಚ್ಚುವರಿ ಪರಿಹಾರ ಕೂಡ ಕೊಟ್ಟಿಲ್ಲ ಎಂದರು. ಈ ಬಗ್ಗೆ ಸದನದೊಳಗೆ ಹೋರಾಟ ಮಾಡೋದಾಗಿ ಭರವಸೆ ನೀಡಿದ ವಿಜಯೇಂಂದ್ರ. ಪರಿಷತ್ತಿನಲ್ಲಿ ಚರ್ಚೆ ಮಾಡೋದಾಗಿ ಸಿಟಿ ರವಿ ಭರವಸೆ ನೀಡಿದರು.
ಪಾದಯಾತ್ರೆಯಲ್ಲಿ ಪಾಲ್ಗೊಂಡ ಮಾಜಿ ಸಚಿವ ಬಿ.ಸಿ.ಪಾಟೇಲ್ ಮಾತನಾಡಿ, ಮೇಲಿಂದ ಬರ ವೀಕ್ಷಣೆ ಭಗವಂತ ಮಾತ್ರ ಮಾಡಬಹುದು ಹೆಲಿಕಾಪ್ಟರ್ ನಲ್ಲಿ ಮೇಲಿಂದ ವೀಕ್ಷಣೆ ಮಾಡಲು ಸಾದ್ಯವಿಲ್ಲ.ಡಿಕೆಶಿ ತಮ್ಮನ್ನು ತಾವು ಭಗವಂತ ಎಂದು ಕೊಂಡಿದ್ದಾರೆ ಎಂದು ವ್ಯಂಗ್ಯ ಮಾಡಿದರು.ಪಾದಯಾತ್ರೆ ಹತ್ತಿಕ್ಕಲು ಪ್ರಯತ್ನ ಮಾಡಿದ್ರು. ಇದೊಂದು ಜನಾಕ್ರೋಶ ಇದನ್ನು ಯಾರಿಂದಲೂ ತಡೆಯಲು ಅಗಲ್ಲವೆಂದರು.
ಛಲವಾದಿ ನಾರಾಯಣಸ್ವಾಮಿ ಮಾತನಾಡಿ. ಸರ್ಕಾರದ ವಿರುದ್ಧ ಜನಾಕ್ರೋಶ ಇದೆ. ನಮ್ಮ ಹೋರಾಟ ಜನಾಕ್ರೋಶವಾಗಿ ಮಾರ್ಪಾಡಾಗಿದೆ.ಇದರಿಂದ ಸರ್ಕಾರದ ಬಂಡವಾಳ, ಭ್ರಷ್ಟಾಚಾರ ಬಯಲಾಗಿದೆ.ನಾಗೇಂದ್ರ ರಾಜೀನಾಮೆ ಕೊಟ್ಟರೇ ಸಾಲದು.ಹಗರಣದ ದುಡ್ಡು ಸಂಪೂರ್ಣ ವಾಪಸ್ಸು ಬರಬೇಕು ಎಂದರು.
ಕುಡುತಿನಿಯ ದಲಿತ ಕಾಲೋನಿಯಲ್ಲಿ ದಲಿತರ ಜೊತೆಗೆ
ಮಾಜಿ ಸಚಿವ ಶ್ರೀರಾಮುಲು ಸಂವಾದ ಮಾಡಿದರು.
ವಾಲ್ಮೀಕಿ ಹಗರಣ ಏನಾಯ್ತು ಹೇಗೆ ಲೂಟಿಯಾಯ್ತು ಎನ್ನುವ ಬಗ್ಗೆ ವಿವರಣೆ ನೀಡಿದರು ನಂತರ ಮಾತನಾಡಿ ಪಾದಯಾತ್ರೆ ಬಗ್ಗೆ ಜನಜಾಗೃತಿ ಮೂಡಿದೆ.. ಸರ್ಕಾರಕ್ಕೆ ಬಿಸಿ ತಟ್ಟಿದೆ. ಹಗರಣದ ಬಗ್ಗೆ ಗೊತ್ತಿದ್ದೇ ಸಿದ್ದರಾಮಯ್ಯ ಸರ್ಕಾರ ರಾಜೀನಾಮೆ ಪಡೆಯಿತು. ಡಿಕೆಶಿ ಯಾಕೆ ನಾಗೇಂದ್ರ ಸಚಿವ ಸ್ಥಾನ ಕೊಡ್ತು ಎಂದು ಪ್ರಶ್ನೆ ಮಾಡಿ.ಏಳು ದಿನ ಅಧಿವೇಶನ ಹಾಳು ಮಾಡಿದ್ರು ನಂತರ ರಾಜೀನಾಮೆ ಪಡೆದ್ರು ಇದಕ್ಕೆ ಯಾರು ಹೊಣೆ ಎಂದರು.
ಮಾಜಿ ಸಚಿವ ಸುರೇಶ್ ಕುಮಾರ್ ಮಾತನಾಡಿ, ತುರ್ತು ಪರಿಸ್ಥಿತಿ ಹೇರಿದ ಪಕ್ಷವೇ ರಾಜ್ಯದಲ್ಲಿ ಆಳ್ವಿಕೆ ಮಾಡ್ತಿರೋ ಅವರಿಂದ ಇನ್ನೇನೆ ನಿರೀಕ್ಷೆ ಮಾಡಲು ಸಾಧ್ಯ.ಬಿಜೆಪಿಯ ಪಾದಯಾತ್ರೆಯಿಂದ ಸರ್ಕಾರ ನಡುಗಿರೋದು ಸತ್ಯ. ಹೀಗಾಗಿ ಸಮಾರೋಪ ಸಮಾರಂಭ ಮಾಡಲು ಮುನ್ಸಿಪಲ್ ಗ್ರೌಂಡ್ ನೀಡಲು ಕಿರಿಕಿರಿ ಮಾಡಿದ್ರು.
ತುರ್ತು ಪರಿಸ್ಥಿತಿ ಹೇರಿದ್ದ ಪಕ್ಷವಿದು ಇವರಲ್ಲಿ ಅಸಹನೆ ಇರೋದು ಸಹಜ ಎಂದರು.
ಸತೀಶ್ ಜಾರಕಿಹೊಳಿ ಮನೆ ಮೇಲೆ ಇಡಿ ದಾಳಿ ವಿಚಾರದ ಬಗ್ಗೆ ಉತ್ತರಿಸಿ ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ವ್ಯಂಗ್ಯವಾಡಿದರು.


























