
ಸಂಜೆವಾಣಿ ವಾರ್ತೆ
ನಂಜನಗೂಡು. ಆ.06: ಆರ್ ಧ್ರುವನಾರಾಯಣ್ ರವರ 65ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ನಂಜನಗೂಡು ತಾಲೂಕಿನ ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡ ಶ್ರೀಕಂಠ ನೇತೃತ್ವದಲ್ಲಿ ಪಟ್ಟಣದ ಹೆಸರಾಂತ ಸರ್ಕಾರಿ ಶಾಲೆಯಾದ ದಳವಾಯಿ ಶಾಲೆಯ ಮಕ್ಕಳಿಗೆ ಶಾಸಕ ದರ್ಶನ್ ದ್ರುವ ನಾರಾಯಣ್ ಮತ್ತು ಶ್ರೀಕಂಠ ಶಾಲೆಯ ಮಕ್ಕಳಿಗೆ ಸಮವಸ್ತ್ರ ವಿತರಣೆ ಮಾಡಿದರು
ಶಾಸಕ ದರ್ಶನ್ ಧ್ರುವ ನಾರಾಯಣ ಮಾತನಾಡಿ ನಮ್ಮ ತಂದೆಯವರ ಹುಟ್ಟುಹಬ್ಬವನ್ನು ಶಾಲೆಯ ಮಕ್ಕಳಿಗೆ ಸಮವಸ್ತ್ರ ನೀಡುವ ಮೂಲಕ ಅರ್ಥಪೂರ್ಣವಾಗಿ ಆಚರಣೆ ಮಾಡುತ್ತಿದ್ದೀರಿ ನಿಮಗೆಲ್ಲಾ ಧನ್ಯವಾದಗಳು . ಎಂದರು
ತಾಲೂಕಿನ ಪ್ರಭಾವಿ ಕಾಂಗ್ರೆಸ್ ಪಕ್ಷದ ಮುಖಂಡ ಶ್ರೀಕಂಠ ಮಾತನಾಡಿ ನಾನು ಕೂಡ ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ ಪ್ರತಿವರ್ಷವೂ ಕೂಡ ಧ್ರುವನಾರಾಯಣ್ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತಾ ಬಂದಿದ್ದೇವೆ ಅವರು ಆಡಳಿತ ಅವಧಿಯಲ್ಲಿ ಶಿಕ್ಷಣಕ್ಕೆ ಹೆಚ್ಚು ಹೊತ್ತು ನೀಡುತ್ತಿದ್ದರು ಅದರಂತೆ ಶಾಸಕರಾದ ದರ್ಶನ್ ಧ್ರುವನಾರಾಯಣ್ ರವರು ಕೂಡ ಶಿಕ್ಷಣಕ್ಕೆ ಹೆಚ್ಚು ಹೊತ್ತು ನೀಡಿದ್ದಾರೆ ಇವರ ಜೊತೆ ನಾವು ಸದಾ ಇರುವುದರಿಂದ ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ ಬುಕ್ಕು ಪೆನ್ನುಗಳನ್ನು ನೀಡಬೇಕೆಂದು ನಿರ್ಧರಿಸಿ ಈ ಬಾರಿ ದಳವಾಯಿ ಶಾಲೆ ಮಕ್ಕಳಿಗೆ ನೀಡಿದ್ದೇವೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಸಹಾಯ ನೀಡುತ್ತೇನೆ ಎಂದರು ಈ
ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಮಂಜುನಾಥ್ ನಂದಕುಮಾರ್ ಶ್ರೀಕಂಠೇಶ್ವರ ದೇವಾಲಯದ ಧರ್ಮದ ಶ್ರೀ ಗೋಪಾಲಕೃಷ್ಣ ಜ್ಯೋತಿ ಹನಿ ಎಲೆಕ್ಟ್ರಿಕಲ್ ಪುರುಷೋತ್ತಮ ಪ್ರಕಾಶ್ ಎಡೆಯಲ ಸಿದ್ದು ಮುಳ್ಳೂರು ಮಹೇಶ್ ಚಂದ್ರು ಬೇಕ್ರಿ ಸೇರಿದಂತೆ ಇತರರು ಇದ್ದರು

































