
ಉಡುಪಿ: ಕರಾವಳಿ ಜನರ ಸುದೀರ್ಘಕಾಲದ ಬೇಡಿಕೆಯಾದ ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ವಂದೇ ಭಾರತ್ ರೈಲನ್ನು ಬೆಂಗಳೂರು-ಮಂಗಳೂರು- ಉಡುಪಿ-ಕುಂದಾಪುರ ಮಾರ್ಗವಾಗಿ ಕಾರವಾರ- ಮಡಗಾಂವ್ ವರೆಗೆ ಓಡಿಸಲು ಅವಕಾಶ ನೀಡಿ ಕರಾವಳಿ ಜಿಲ್ಲೆಗಳ ಜನತೆಯನ್ನು ವಂದೇ ಭಾರತ ಮೂಲಕ ರಾಜಧಾನಿ ಬೆಂಗಳೂರಿಗೆ ಜೋಡಿಸಲು ನೆರವಾದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮತ್ತು ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಹಾಗೂ ವಿ. ಸೋಮಣ್ಣನವರಿಗೆ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೃತಜ್ಞತೆ ಸಲ್ಲಿಸಿದ್ದಾರೆ.
ಸಂಸದ ಕೋಟರವರಿಗೆ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ರವರು ಬರೆದ ಪತ್ರವನ್ನು ಉಲ್ಲೇಖಿಸಿದ ಕೋಟ, ಕರಾವಳಿ ಜನತೆಯ ಬಹುಕಾಲದ ಬೇಡಿಕೆಯನ್ನು ಈಡೇರಿಸಿದ ಅನುಭವವಾಗಿದೆ. ಇದರಿಂದ ಜನತೆಯ ಹರ್ಷದಲ್ಲಿ ತಾನು ಭಾಗಿ ಎಂದು ಉಲ್ಲೇಖಿಸಿದ್ದಾರೆ.
ಮುಂದಿನ ದಿನಗಳಲ್ಲಿ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಿ, ಕರಾವಳಿ ಜನತೆಗೆ ಅತ್ಯುತ್ತಮ ರೈಲ್ವೆ ಸೇವೆ ಒದಗಿಸುವುದು ನಮ್ಮ ಗುರಿ ಎಂದು ಹೇಳಿಕೆಯಲ್ಲಿ ತಿಳಿಸಿದ ಕೋಟ, ತನ್ನ ಸಹ ಸದಸ್ಯರಾದ ಶ್ರೀ ಬ್ರಿಜೇಶ್ ಚೌಟ ಹಾಗೂ ವಿಶ್ವೇಶ್ವರ ಹೆಗ್ಡೆ ಕಾಗೇರಿಯವರಿಗೂ ಅಭಿನಂದನೆ ಹೇಳಿದ್ದಾರೆ..
























