
ಸಂಜೆವಾಣಿ ವಾರ್ತೆ,
ವಿಜಯಪುರ, ಅ.೧: ನಗರದ ಚಲವಾದಿ ಸಮಾಜದ ರುದ್ರ (ಸ್ಮಶಾನ) ಭೂಮಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಚಲವಾದಿ ಸಮಾಜದ ರುದ್ರಭೂಮಿ ಸೇವಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಸಮಿತಿ ಅಧ್ಯಕ್ಷ ಪ್ರದೀಪ ಚಲವಾದಿ ಮಾತನಾಡಿ, ಸ್ಮಶಾನ ಭೂಮಿಯ ಸುತ್ತ ಕಾಂಪೌAಡ್, ರಸ್ತೆ ಹಾಗೂ ಗೇಟ್ ನಿರ್ಮಿಸಿ ವಿದ್ಯುತ್ ದೀಪ ಮತ್ತು ನೀರಿನ ವ್ಯವಸ್ಥೆ ಕಲ್ಪಿಸಬೇಕು. ಎರಡು ಕೊಠಡಿಗಳನ್ನು ನಿರ್ಮಿಸಿ ಪೇಟಿಂಗ್ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸಬೇಕು ಎಂದು ಮನವಿ ಮಾಡಿದರು.
ಈ ಕುರಿತು ಕಳೆದ ಐದು ವರ್ಷಗಳಿಂದ ಮನವಿ ಸಲ್ಲಿಸುತ್ತಿದ್ದರೂ ಈವರೆಗೆ ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ. ಸಂಬAಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ತಕ್ಷಣ ಗಮನಹರಿಸಿ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಶಂಕರ ಚಲವಾದಿ, ರಮೇಶ ಬೋರಗಿ, ಯಮನಪ್ಪ ಸಿದ್ದರಡ್ಡಿ, ಚಂದ್ರು ಕಳ್ಳಿಮನಿ, ನಾಗರಾಜ ನಿಂಗದಳ್ಳಿ, ಸಂತೋಷ ಗಡೇದ, ಶಿವರಾಜ ಚಿಕ್ಕಲಕಿ, ವಿನೋದ ತಳಕೇರಿ, ಸದಾಶಿವ ಸೇರಿದಂತೆ ಹಲವರು ಉಪಸ್ಥಿತರಿದ್ದರು.






















