Home ಜಿಲ್ಲೆ ವಿಶಾಲ್ ಮಾರ್ಟ್ನಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳ ಮಾರಾಟ ಆರೋಪಸೂಕ್ತ ಕ್ರಮಕ್ಕೆ ವಿಜಯ ಕರ್ನಾಟಕ ಕನ್ನಡಿಗರ...

ವಿಶಾಲ್ ಮಾರ್ಟ್ನಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳ ಮಾರಾಟ ಆರೋಪಸೂಕ್ತ ಕ್ರಮಕ್ಕೆ ವಿಜಯ ಕರ್ನಾಟಕ ಕನ್ನಡಿಗರ ವೇದಿಕೆ ಆಗ್ರಹ

ಯಾದಗಿರಿ: ನಗರದ ಪ್ರತಿಷ್ಠಿತ ಮಳಿಗೆಗಳಲ್ಲಿ ಒಂದಾದ ವಿಶಾಲ್ ಮಾರ್ಟ್ನಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ, ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ವಿಜಯ ಕರ್ನಾಟಕ ಕನ್ನಡಿಗರ ವೇದಿಕೆ ಯಾದಗಿರಿ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಈ ಕುರಿತು ಮಾತನಾಡಿದ ವೇದಿಕೆಯ ಜಿಲ್ಲಾಧ್ಯಕ್ಷ ನಾಗೇಂದ್ರ ರಾಯಚೂರಕರ್, ವಿಶಾಲ್ ಮಾರ್ಟ್ನಲ್ಲಿ ಬಾಳೆಹಣ್ಣಿನ ಚಿಪ್ಸ್, ಹೆಸರುಬೇಳೆ, ಆಲೂಗಡ್ಡೆ ಚಿಪ್ಸ್ ಸೇರಿದಂತೆ ವಿವಿಧ ಆಹಾರ ಪದಾರ್ಥಗಳ ಮುದ್ರಣ ದಿನಾಂಕ ಮತ್ತು ಮಾರಾಟ ದಿನಾಂಕಗಳ ನಡುವೆ ವ್ಯತ್ಯಾಸ ಕಂಡುಬAದಿದೆ ಎಂದು ಆರೋಪಿಸಿದರು.

ಕೆಲವು ಆಹಾರ ಪದಾರ್ಥಗಳ ಅವಧಿ ಮುಗಿದಿದ್ದರೂ ಅವುಗಳನ್ನು ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ದೂರುಗಳಿದ್ದು, ಈ ಬಗ್ಗೆ ಸಮಗ್ರ ಪರಿಶೀಲನೆ ನಡೆಸಬೇಕು. ಇಂತಹ ಪದಾರ್ಥಗಳ ಸೇವನೆಯಿಂದ ಗ್ರಾಹಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇರುವುದರಿಂದ ಸಂಬAಧಿಸಿದ ಅಧಿಕಾರಿಗಳು ತಕ್ಷಣ ತಪಾಸಣೆ ನಡೆಸಿ, ತಪ್ಪಿತಸ್ಥತೆ ಕಂಡುಬAದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಕುರಿತು ಆಹಾರ ಸುರಕ್ಷತಾ ಹಾಗೂ ಆಹಾರ ಗುಣಮಟ್ಟ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದರೂ, ಸೂಕ್ತ ಕ್ರಮ ಕೈಗೊಳ್ಳಲು ವಿಳಂಬ ಮಾಡಲಾಗುತ್ತಿದೆ ಎಂದು ವೇದಿಕೆ ಆರೋಪಿಸಿದೆ. ದೂರು ನೀಡಿದ ಬಳಿಕವೂ ಸುಮಾರು ಒಂದು ವರ್ಷದಿಂದ ಕ್ರಮವಾಗಿಲ್ಲ ಎಂದು ಆರೋಪಿಸಿ, ಸಂಬAಧಿಸಿದ ಅಧಿಕಾರಿಗಳ ಕರ್ತವ್ಯಲೋಪದ ಕುರಿತು ಪರಿಶೀಲನೆ ನಡೆಸಿ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ಅವಧಿ ಮೀರಿದ ಆಹಾರ ಪದಾರ್ಥಗಳ ಮಾರಾಟದ ಕುರಿತು ಸಮಗ್ರ ತನಿಖೆ ನಡೆಸಿ, ನಿಯಮ ಉಲ್ಲಂಘನೆ ದೃಢಪಟ್ಟಲ್ಲಿ ವಿಶಾಲ್ ಮಾರ್ಟ್ ವಿರುದ್ಧವೂ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಒಂದು ವಾರದೊಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ವೇದಿಕೆಯ ಪದಾಧಿಕಾರಿಗಳು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಅಬ್ರಹಾಂ ದಾಸನಕೇರಿ, ರಮೇಶ್ ಪೂಜಾರಿ, ಶರಣು ಟಿ. ವಡಿಗೇರಾ, ವಿಶ್ವನಾಥ್ ರೆಡ್ಡಿ ಅಬ್ಬೆ ತುಮಕೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.