Home ಜಿಲ್ಲೆ ಮಂಗಳೂರು ಮಣಿಪಾಲ ಆಸ್ಪತ್ರೆಯಿಂದ ರೋಗಿ ಜಿಗಿದ ಪ್ರಕರಣ: ರೋಗಿಯ ಸ್ಥಿತಿ ಸ್ಥಿರ- ವೈದ್ಯರ ಮಾಹಿತಿ

ಮಣಿಪಾಲ ಆಸ್ಪತ್ರೆಯಿಂದ ರೋಗಿ ಜಿಗಿದ ಪ್ರಕರಣ: ರೋಗಿಯ ಸ್ಥಿತಿ ಸ್ಥಿರ- ವೈದ್ಯರ ಮಾಹಿತಿ

ಮಣಿಪಾಲ-ಕಸ್ತೂರ್ಬಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದ ವ್ಯಕ್ತಿಯೊಬ್ಬರು ವಾರ್ಡ್‌ನ ಗಾಜಿನ ಕಿಟಕಿ ಹಾಗೂ ಕಟ್ಟಡದ ಹೊರಭಾಗದ ಸುರಕ್ಷತಾ ರಚನೆಯನ್ನು ಮುರಿದು ಹೊರಬಂದು, ಬಳಿಕ ಕೆಳಗೆ ಬಿದ್ದು ಗಾಯಗೊಂಡ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ಗಾಯಗೊಂಡ ರೋಗಿಯ ಆರೋಗ್ಯ ಸ್ಥಿರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಘಟನೆಯಿಂದ ಆಸ್ಪತ್ರೆಯಲ್ಲಿದ್ದ ರೋಗಿಗಳು ಹಾಗೂ ಸಂದರ್ಶಕರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿದ ಆಸ್ಪತ್ರೆಯ ಭದ್ರತಾ ಸಿಬ್ಬಂದಿ ರೋಗಿಯನ್ನು ರಕ್ಷಿಸಿ ತುರ್ತು ಚಿಕಿತ್ಸೆಗೆ ಸ್ಥಳಾಂತರಿಸಿದರು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಅವರ ಪ್ರಕಟಣೆಯಂತೆ, ರೋಗಿಯ ಸ್ಥಿತಿ ಸ್ಥಿರವಾಗಿದ್ದು, ವೈದ್ಯರ ಆರೈಕೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಘಟನೆ ಕುರಿತು ಕಾನೂನಾತ್ಮಕ ನಿಯಮಗಳಂತೆ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಮಾಹಿತಿ ನೀಡಲಾಗಿದ್ದು, ಅಗತ್ಯ ಪ್ರಕ್ರಿಯೆಗಳಿಗೆ ಆಸ್ಪತ್ರೆಯು ಸಂಪೂರ್ಣ ಸಹಕಾರ ನೀಡುತ್ತಿದೆ ಎಂದು ತಿಳಿಸಲಾಗಿದೆ.