Home ಸುದ್ದಿ ಅಂತರಾಷ್ಟ್ರೀಯ ಲಾಭ ಪಡೆಯಲು ಕೆನಡಾ ಯತ್ನ: ಟ್ರಂಪ್

ಲಾಭ ಪಡೆಯಲು ಕೆನಡಾ ಯತ್ನ: ಟ್ರಂಪ್

ವಾಷಿಂಗ್ಟನ್, ಆ.24-ಕೆನಡಾ ಅಮೆರಿಕದ ರಾಜ್ಯವಾಗದೇ ಅದರ ರಾಜ್ಯವಾಗಿರುವ ಲಾಭಗಳನ್ನು'' ಪಡೆಯಲು ಬಯಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಮೆರಿಕ ಮತ್ತು ಕೆನಡಾ ನಡುವಿನ ವ್ಯಾಪಾರ ಮಾತುಕತೆಗಳು ವಿಫಲವಾದ ಬಳಿಕ ಅವರ ಈ ಹೇಳಿಕೆ ಹೊರಬಿದ್ದಿದೆ. ಮಾತುಕತೆಗಳು ಕುಸಿದ ಹಿನ್ನೆಲೆಯಲ್ಲಿ, ಕೆನಡಾದ ವಿವಿಧ ಸರಕುಗಳ ಮೇಲೆ ಅಮೆರಿಕ ಹೊಸದಾಗಿ ಶೇ.50 ಸುಂಕ ವಿಧಿಸಿದೆ. ಅಮೆರಿಕದ ರೈತರು ಹಲವು ವರ್ಷಗಳಿಂದ ಭಾರೀ ಪ್ರಮಾಣದ ಸುಂಕಗಳನ್ನು ಪಾವತಿಸುತ್ತಿದ್ದಾರೆ ಎಂದು ಟ್ರಂಪ್ ಆರೋಪಿಸಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿದ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ, ಅಮೆರಿಕದ ಹೊಸ ಸುಂಕಗಳು ಕೆನಡಾವನ್ನು ಹಾನಿಗೊಳಿಸಲು ಮತ್ತು ವಿಭಜಿಸಲು ಮಾಡಿದ ತಪ್ಪು ಲೆಕ್ಕಾಚಾರ” ಎಂದು ಹೇಳಿದ್ದಾರೆ.


ಅಮೆರಿಕ ವಿಧಿಸಿರುವ ಸುಂಕಗಳಿಗೆ ಪ್ರತಿಯಾಗಿ ಕೆನಡಾ ಕೂಡ ಡಾಲರ್‍ಗೆ ಡಾಲರ್'' ಎಂಬ ರೀತಿಯಲ್ಲಿ ಪ್ರತೀಕಾರಾತ್ಮಕ ಸುಂಕಗಳನ್ನು ವಿಧಿಸುವುದಾಗಿ ಕಾರ್ನಿ ಘೋಷಿಸಿದ್ದಾರೆ. ಸೆಪ್ಟೆಂಬರ್ 8ರಿಂದ ಉಕ್ಕು, ಹಾಲು ಉತ್ಪನ್ನಗಳು, ಗೃಹೋಪಯೋಗಿ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳ ಮೇಲೆ ಈ ಕ್ರಮ ಜಾರಿಗೆ ಬರಲಿದೆ ಎಂದು ಅವರು ತಿಳಿಸಿದ್ದಾರೆ. ಟ್ರಂಪ್ ಅಧಿಕಾರಕ್ಕೆ ಮರಳಿದ ನಂತರ ಕೆನಡಾವನ್ನು ಅಮೆರಿಕದ 51ನೇ ರಾಜ್ಯ” ವನ್ನಾಗಿ ಮಾಡುವ ಕುರಿತು ಹಲವು ಬಾರಿ ಉಲ್ಲೇಖಿಸಿದ್ದರು. ಈ ಹೇಳಿಕೆಗಳು ಕೆನಡಾದ ರಾಜಕೀಯ ನಾಯಕರು ಮತ್ತು ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿವೆ.


ಎರಡು ದೇಶಗಳ ನಡುವಿನ ವ್ಯಾಪಾರ ಮಾತುಕತೆಗಳ ಕುಸಿತವು ಪರಸ್ಪರವಾಗಿ ಆಳವಾಗಿ ಸಂಪರ್ಕ ಹೊಂದಿರುವ ವ್ಯಾಪಾರ ಸಂಬಂಧಕ್ಕೆ ದೊಡ್ಡ ಹೊಡೆತ ನೀಡಿದ್ದು, ಸಮಸ್ಯೆ ಪರಿಹಾರಕ್ಕೆ ಸದ್ಯ ಸ್ಪಷ್ಟವಾದ ಮಾರ್ಗ ಕಾಣಿಸುತ್ತಿಲ್ಲ. ಭಾನುವಾರ ಫಾಕ್ಸ್ ನ್ಯೂಸ್‍ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್, ಅಮೆರಿಕದೊಂದಿಗೆ ವ್ಯಾಪಾರ ಯುದ್ಧಕ್ಕೆ ಇಳಿದು ಅದರಲ್ಲಿ ಗೆಲ್ಲಬಹುದು ಎಂದು ಭಾವಿಸುವ ಕೆನಡಿಯನ್ನರು “ಮೂರ್ಖರು” ಎಂದು ಹೇಳಿದ್ದಾರೆ.
ವಾರದ ಆರಂಭದಲ್ಲಿ ಎರಡೂ ದೇಶಗಳು ಒಪ್ಪಂದದ ಕುರಿತು ಆಶಾವಾದಿಯಾಗಿದ್ದವು. ಆದರೆ ಕೊನೆಯ ಕ್ಷಣದಲ್ಲಿ ಪರಸ್ಪರ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಎರಡೂ ಕಡೆಯವರು ಆರೋಪಿಸಿದ ನಂತರ ಮಾತುಕತೆಗಳು ವಿಫಲವಾಗಿವೆ.