
ಸಂಜೆವಾಣಿ ವಾರ್ತೆ
ಹೊಸಪೇಟೆ.ಜು.19 ನಗರದಲ್ಲಿ ಭಾನುವಾರ ಚಿತ್ರದುರ್ಗ ಗುರುಪೀಠದ ಡಾ.ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿಗಳ ಜನ್ಮದಿವನ್ನು ಆಚರಿಸಲಾಯಿತು.
ನಗರದ ಪುನೀತ್ ರಾಜ್ ಕುಮಾರ್ ವೃತ್ತದಲ್ಲಿ ಭಾನುವಾರ ಶ್ರೀಶಿವಶರಣ ಮಾದರ ಚೆನ್ನಯ್ಯ ಸೇವಾ ಸಮಿತಿ ವಿಜಯನಗರ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಮಾದರ ಚೆನ್ನಯ್ಯ ಸ್ವಾಮೀಜಿಗಳ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಕೇಂದ್ರ ಮಾಜಿ ಸಚಿವ ಎ.ನಾರಾಯಣ ಸ್ವಾಮಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮಾದರ ಚೆನ್ನಯ್ಯ ಸ್ವಾಮಿಜಿಗಳ ಹುಟ್ಟು ಹಬ್ಬವನ್ನು ಅನೇಕ ಕಾರ್ಯಕರ್ತರು ಆಚರಿಸುತ್ತಿದ್ದಾರೆ ವಿಶೇಷವಾಗಿ ವಿಜಯನಗರ ಜಿಲ್ಲೆಯಲ್ಲಿ ಅನ್ನ ಸಂತರ್ಪಣೆ ಮಾಡುವುದರ ಮೂಲಕ ಅರ್ಥಪೂರ್ಣವಾದಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸ್ವಾಮೀಜಿ ರವರಿಗೆ ದೇವರು ಆರೋಗ್ಯ ಆಯಸ್ಸು, ಸಮಾಜವನ್ನು ಮುನ್ನಡೆಸುವಂತಹ ಶಕ್ತಿಯನ್ನು ದಯಪಾಲಿಸಲಿ, ವಿಜಯನಗರ ಜಿಲ್ಲೆಯ ಮಾದರ ಚೆನ್ನಯ್ಯ ಸೇವಾ ಸಮಿತಿ ಮತ್ತಷ್ಟು ಬಲಗೊಳ್ಳಲಿ ಎಂದರು.
ಹಂಪಿ ಮಾತಂಗ ಗುರುಪೀಠದ ಪೂರ್ಣಾನಂದ ಭಾರತಿ ಸ್ವಾಮೀಜಿ ಅವರ ಸಾನಿಧ್ಯದಲ್ಲಿ, ಹಾಗೂ ಜಿಲ್ಲಾಧ್ಯಕ್ಷ ಹೆಚ್. ಶ್ರೀನಿವಾಸ ನೇತೃತ್ವದಲ್ಲಿ ಜರುಗಿದ ಮಾದರ ಚೆನ್ನಯ್ಯ ಶ್ರಿಗಳ ಜನ್ಮ ದಿನಾಚರಣೆ ಅಂಗವಾಗಿ ಅನ್ನಸಂತರ್ಹಣೆ ಎರ್ಪಡಿಸಲಾಗಿತ್ತು. ಜೊತೆಗೆ ಸಮಾಜದ ಬಂಧುಗಳು ಸಿಹಿ ಹಂಚುವ ಮೂಲಕ ಶ್ರೀಗಳ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಈ ಸಂದರ್ಭದಲ್ಲಿ ಹೊಸಪೇಟೆ ನಗರಸಭೆ ಅಧ್ಯಕ್ಷ ಎನ್. ರೂಪೇಶ್ ಕುಮಾರ್, ವಿಭಾಗೀಯ ಮುಖ್ಯಸ್ಥ ಹೆಚ್.ಪೂಜಪ್ಪ, ಮುಖಂಡರಾದ ಎಂ.ಸಿ.ವೀರ ಸ್ವಾಮಿ, ಕೆ.ಪಿ. ಉಮಾಪತಿ, ಹೆಚ್.ಶೇಷು, ಹೆಚ್.ಜಗನ್ನಾಥ ರಾಜಲು, ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್ ಸಿ.ಆರ್, ಹೆಚ್ ರವಿಕಿರಣ, ಹೆಚ್.ಎಸ್. ವೆಂಕಪ್ಪ, ವಿಜಯ್ ಕುಮಾರ್, ಸೆಲ್ವಂ, ದುರ್ಗೇಶ್, ವಿಜಯ್ ಕುಮಾರ್, ಕರಿಯಪ್ಪ, ದುರ್ಗಪ್ಪ, ಉದಯ್ ಕುಮಾರ್, ವಿಜಯನಗರ ಜಿಲ್ಲೆಯ ಶ್ರೀಶಿವಶರಣ ಮಾದಾರ ಚನ್ನಯ್ಯ ಸೇವಾ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಮಾದಿಗ ಸಮುದಾಯದ ಮುಖಂಡರು, ಯುವಕರು ಭಾಗವಹಿಸಿದ್ದರು.































