Home ಜಿಲ್ಲೆ ಬೆಂಗಳೂರು ನೂತನ ಅತ್ಯಾಧುನಿಕ ನೇತ್ರ ಆರೈಕೆ ಕೇಂದ್ರ ಆರಂಭ

ನೂತನ ಅತ್ಯಾಧುನಿಕ ನೇತ್ರ ಆರೈಕೆ ಕೇಂದ್ರ ಆರಂಭ

ಬೆಂಗಳೂರು, 22 ಆಗಸ್ಟ್ 2026: ದೇಶದ ಪ್ರಮುಖ ನೇತ್ರ ಆರೈಕೆ ಜಾಲಗಳಲ್ಲಿ ಒಂದಾದ ಡಾ. ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆ, ಬೆಂಗಳೂರಿನ ಸರ್ಜಾಪುರದಲ್ಲಿ ತನ್ನ ನೂತನ ಅತ್ಯಾಧುನಿಕ ನೇತ್ರ ಆರೈಕೆ ಕೇಂದ್ರವನ್ನು ಇಂದು ಆರಂಭಿಸಿದೆ.


ಸಂಪೂರ್ಣ ನೇತ್ರ ಆರೈಕೆ ಕೇಂದ್ರವಾಗಿ ವಿನ್ಯಾಸಗೊಳಿಸಲಾಗಿರುವ ಈ ಕೇಂದ್ರದಲ್ಲಿ ಅತ್ಯಾಧುನಿಕ ಡಯಾಗ್ನೋಸ್ಟಿಕ್ ಸೌಲಭ್ಯಗಳು, ಸ್ಟೆರೈಲ್ ಮಾಡ್ಯುಲರ್ ಆಪರೇಷನ್ ಥಿಯೇಟರ್ಗಳನ್ನು ಹೊಂದಿರುವ ಪ್ರತ್ಯೇಕ ಶಸ್ತ್ರಚಿಕಿತ್ಸಾ ವಿಭಾಗ ಹಾಗೂ ಕ್ಯಾಟರಾಕ್ಟ್, ರಿಫ್ರ್ಯಾಕ್ಟಿವ್/ಗ್ಲಾಕೋಮಾ, ರೆಟಿನಾ ಮತ್ತು ಪೀಡಿಯಾಟ್ರಿಕ್ ನೇತ್ರವಿಜ್ಞಾನ ಸೇರಿದಂತೆ ವಿವಿಧ ಸೂಪರ್ ಸ್ಪೆಷಾಲಿಟಿ ಕ್ಲಿನಿಕ್ಗಳು ಒಂದೇ ಸೂರಿನಡಿ ಲಭ್ಯವಿವೆ.


ಇಲ್ಲಿ ಕ್ಯಾಟರಾಕ್ಟ್ ಮತ್ತು ರಿಫ್ರ್ಯಾಕ್ಟಿವ್ ಶಸ್ತ್ರಚಿಕಿತ್ಸೆಗಳು ರೆಟಿನಾ ಮತ್ತು ಗ್ಲಾಕೋಮಾ ಆರೈಕೆ, ಕಾರ್ನಿಯಾ ಚಿಕಿತ್ಸೆ, ಮತ್ತು ಕೆರಾಟೋಕೋನಸ್ ನಿರ್ವಹಣೆ, ಮಕ್ಕಳ ನೇತ್ರ ಆರೈಕೆ, ಒಕ್ಯುಲೋಪ್ಲಾಸ್ಟಿ, ಕಾಂಟ್ಯಾಕ್ಟ್ ಲೆನ್ಸ್ ಸೇವೆಗಳು, ಇನ್-ಹೌಸ್ ಫಾರ್ಮಸಿ ಮತ್ತು ಸಂಪೂರ್ಣ ಡಯಾಗ್ನೋಸ್ಟಿಕ್ ಬೆಂಬಲ ಸೇರಿದಂತೆ ಹಲವು ಸೇವೆಗಳು ಲಭ್ಯವಿವೆ.
ಡಾ. ಶ್ರೀನಿವಾಸನ್ ಜಿ. ರಾವ್, ರೀಜನಲ್ ಹೆಡ್ ಕ್ಲಿನಿಕಲ್ ಸರ್ವಿಸಸ್, ಕರ್ನಾಟಕ, ಡಾ. ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆ, ಸರ್ಜಾಪುರ, ಮಾತನಾಡಿ, ಸರ್ಜಾಪುರ ಕೇಂದ್ರವನ್ನು ಅತ್ಯಾಧುನಿಕ ಡಯಾಗ್ನೋಸ್ಟಿಕ್ಸ್ನಿಂದ ಹಿಡಿದು ಸಂಕೀರ್ಣ ಶಸ್ತ್ರಚಿಕಿತ್ಸಾ ವಿಧಾನಗಳವರೆಗೆ ಪ್ರತಿಯೊಂದು ಹಂತದ ನೇತ್ರ ಆರೈಕೆಯನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶದಿಂದ ನಿರ್ಮಿಸಲಾಗಿದೆ. ಇನ್ನು ಮುಂದೆ ಈ ಪ್ರದೇಶದ ರೋಗಿಗಳು ವಿಶೇಷ ಚಿಕಿತ್ಸೆಗೆ ನಗರದ ಬೇರೆ ಭಾಗಗಳಿಗೆ ತೆರಳಬೇಕಾದ ಅಗತ್ಯವಿಲ್ಲ. ಸಾಮಾನ್ಯ ಸಮಾಲೋಚನೆಯಾಗಿರಲಿ, ಕ್ಯಾಟರಾಕ್ಟ್ ಮೌಲ್ಯಮಾಪನವಾಗಿರಲಿ ಅಥವಾ ಸಂಕೀರ್ಣ ರೆಟಿನಾ ಅಥವಾ ಕಾರ್ನಿಯಾ ಸಮಸ್ಯೆಯಾಗಿರಲಿ, ನಮ್ಮ ತಂಡ ಮತ್ತು ತಂತ್ರಜ್ಞಾನಗಳು ಇಲ್ಲಿಯೇ ಅದನ್ನು ನಿರ್ವಹಿಸಲು ಸಜ್ಜಾಗಿವೆ. ನಮ್ಮ ಎಲ್ಲಾ ಪ್ರಮುಖ ಕೇಂದ್ರಗಳಲ್ಲಿ ಅನುಸರಿಸುವ ಅದೇ ಕ್ಲಿನಿಕಲ್ ಗುಣಮಟ್ಟವನ್ನು ಇಲ್ಲಿಯೂ ಒದಗಿಸುತ್ತೇವೆ ಎಂದು ತಿಳಿಸಿದ್ದಾರೆ.


ಕೇಂದ್ರದ ಉದ್ಘಾಟನೆಯ ಅಂಗವಾಗಿ, ಹೊಸ ಕೇಂದ್ರಕ್ಕೆ ಭೇಟಿ ನೀಡುವ ಎಲ್ಲಾ ರೋಗಿಗಳಿಗೆ ಉಚಿತ ಕಣ್ಣಿನ ಸಮಾಲೋಚನೆ ನೀಡಲಾಗುತ್ತಿದೆ.