Home ಸುದ್ದಿ ರಾಷ್ಟ್ರೀಯ ನಟ ಇಮ್ರಾನ್ ಹಶ್ಮಿಗೆ ಹಂದಿ ಜ್ವರ

ನಟ ಇಮ್ರಾನ್ ಹಶ್ಮಿಗೆ ಹಂದಿ ಜ್ವರ

ಮುಂಬೈ, ಆ.30:- ಬಾಲಿವುಡ್ ನಟ ಇಮ್ರಾನ್ ಹಶ್ಮಿ ಅವರಿಗೆ ಎಚ್ ಒನ್‍ಎನ್1 ಅಂದರೆ ಸ್ವಾನ್ ಫ್ಲೂ (ಹಂದಿ ಜ್ವರ) ಸೋಂಕು ತಗುಲಿರುವುದು ದೃಢಪಟ್ಟಿದೆ. ಇತ್ತೀಚೆಗೆ ಕೆಲಸದ ನಿಮಿತ್ತ ರಾಂಚಿಗೆ ಪ್ರಯಾಣ ಬೆಳೆಸಿದ್ದ ಇಮ್ರಾನ್ ಹಶ್ಮಿ, ಮುಂಬೈಗೆ ಮರಳಿದ ನಂತರ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ವೈದ್ಯರ ಸಲಹೆಯಂತೆ ರಕ್ತ ಪರೀಕ್ಷೆ ಮಾಡಿಸಿದಾಗ ಅವರಿಗೆ ಹಂದಿ ಜ್ವರದ ಸೋಂಕು ಇರುವುದು ಖಚಿತವಾಗಿದ್ದು, ವೈದ್ಯರು ಸಂಪೂರ್ಣ ವಿಶ್ರಾಂತಿ ಹಾಗೂ ಐಸೊಲೇಶನ್‍ನಲ್ಲಿ ಇರಲು ಸೂಚಿಸಿದ್ದಾರೆ. ಈ ಕಾರಣದಿಂದಾಗಿ ಬೆಂಗಳೂರಿನಲ್ಲಿ ಆಗಸ್ಟ್ ಅಂತ್ಯದಲ್ಲಿ ಆಯೋಜಿಸಲಾಗಿದ್ದ ಅವರ ಕಾರ್ಯಕ್ರಮವನ್ನು ಮುಂದೂಡಲಾಗಿದೆ.


ತಮ್ಮ ಆರೋಗ್ಯದ ಸ್ಥಿತಿಯ ಬಗ್ಗೆ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಮಾಹಿತಿ ಹಂಚಿಕೊಂಡ ನಟ, “ನನಗೆ ತುಂಬಾ ಅನಾರೋಗ್ಯ ಕಾಡುತ್ತಿರುವುದರಿಂದ ಬೆಂಗಳೂರಿನ ಶೋಗೆ ಬರಲು ಸಾಧ್ಯವಾಗುತ್ತಿಲ್ಲ, ಅದಕ್ಕಾಗಿ ಅಭಿಮಾನಿಗಳಲ್ಲಿ ಕ್ಷಮೆ ಕೇಳುತ್ತೇನೆ. ಆದರೆ ಪಿಕ್ಚರ್ ಇನ್ನು ಮುಗಿದಿಲ್ಲ, ಕೇವಲ ಮುಂದೂಡಲ್ಪಟ್ಟಿದೆ ಅಷ್ಟೇ. ಮುಂದಿನ ಸೆಪ್ಟೆಂಬರ್ 12ರಂದು ಬೆಂಗಳೂರಿನ ಸನ್‍ಬರ್ನ್ ಯೂನಿಯನ್‍ನಲ್ಲಿ ನಿಮ್ಮನ್ನು ಭೇಟಿಯಾಗುತ್ತೇನೆ. ನೀವು ಈಗಾಗಲೇ ಖರೀದಿಸಿರುವ ಟಿಕೆಟ್‍ಗಳು ಆ ಹೊಸ ದಿನಾಂಕಕ್ಕೂ ಮಾನ್ಯವಾಗಿರುತ್ತವೆ, ನಿಮ್ಮನ್ನು ನೋಡಲು ಕಾಯುತ್ತಿದ್ದೇನೆ” ಎಂದು ಬರೆದುಕೊಂಡುಅಭಿಮಾನಿಗಳಿಗೆ ಸಮಾಧಾನ ನೀಡಿದ್ದಾರೆ. ಪ್ರಸ್ತುತ ಅವರ ಅಭಿನಯದ ‘ಆವಾರಾಪನ್ 2’ ಸಿನಿಮಾ ಬಾಕ್ಸ್ ಆಫೀಸ್‍ನಲ್ಲಿ 200 ಕೋಟಿಗೂ ಹೆಚ್ಚು ಗಳಿಕೆ ಕಂಡು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, ಈ ಸಂಭ್ರಮದ ನಡುವೆಯೇ ನಟ ಅನಾರೋಗ್ಯಕ್ಕೆ ಒಳಗಾಗಿದ್ದಾರೆ.