
ಲಕ್ಷೆ÷್ಮÃಶ್ವರ,ಆ೩೦: ಪಟ್ಟಣದಲ್ಲಿ ಶನಿವಾರ ಲಕ್ಷೆ÷್ಮÃಶ್ವರ ಶಿರಹಟ್ಟಿ ಮತ್ತು ಮುಂಡರಗಿ ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಸಾರಲು ಒತ್ತಾಯಿಸಿ ಸಮಗ್ರ ರೈತ ಸಂಘಟನೆಗಳ ಒಕ್ಕೂಟ ಕಿಸಾನ್ ಜಾಗೃತಿ ವಿಕಾಸ ಸಂಘ ಕರ್ನಾಟಕ ರಾಜ್ಯ ರೈತ ಸಂಘ ಅಖಂಡ ಕರ್ನಾಟಕ ರೈತ ಸಂಘ ಇವರುಗಳ ಸಂಯುಕ್ತಾಕ್ಷರದಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಶಿಗ್ಲಿ ನಾಕಾದಲ್ಲಿ ಪಾಳಾಬದಾಮಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮಗ್ರ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಮಂಜುನಾಥ್ ಮಾಗಡಿ ಹೊನ್ನಪ್ಪ ವಡ್ಡರ ನಾಗರಾಜ ಚಿಂಚಲಿ ನಿಂಬಣ್ಣ ಮಡಿವಾಳ ಎಂಎಸ್ ದೊಡ್ಡ ಗೌಡ್ರ ಸೋಮಣ್ಣ ಗಾಣಗಲ್ಲ ಮತ್ತಿತರರು ಸರ್ಕಾರದ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿ ಬರಪೀಡಿತ ಪ್ರದೇಶ ಎಂದು ಸಾರಲು ಯಾವ ಮಾನದಂಡಗಳನ್ನು ಉಪಯೋಗಿಸಿದ್ದೀರಿ ಸರ್ಕಾರಕ್ಕೆ ರೈತರು ನೋವಿನ ಅರಿವೇ ಇಲ್ಲ ಬೆಳೆಗಳು ಒಣಗಿ ರೈತರು ಸಂಕಷ್ಟದಲ್ಲಿದ್ದರೂ ಬರಪೀಡಿತ ಪ್ರದೇಶ ಎಂದು ಸಾರದೆ ರೈತರಿಗೆ ಅನ್ಯಾಯ ಮಾಡಿದ್ದೀರಿ.
ಸರ್ಕಾರ ಈ ಕೂಡಲೇ ೫೦,೦೦೦ ಪರಿಹಾರ ನೀಡಬೇಕು ಮತ್ತು ಬ್ಯಾಂಕುಗಳಲ್ಲಿನ ೧ಲಕ್ಷ ರೂಪಾಯಿವರೆಗೆ ಸಾಲ ಮನ್ನಾ ಮಾಡಬೇಕು ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುತ್ತು ರಾಥೋಡ್ ಆಯ್ ಎಸ್ ಪೂಜಾರ ಚೆನ್ನಪ್ಪ ಷಣ್ಮುಖಿ ಮಹೇಶ ಹೊಗೆ ಸೊಪ್ಪಿನ ಟಾಕಪ್ಪ ಸಾತಪೂತೆ ಬರ್ಮಣ್ಣ ರೊಟ್ಟಿಗವಾಡ ಲೋಕೇಶ್ ಜಾಲವಾಡಗಿ ಬಸವರಾಜ ಹಂಜಿ ಶಿವಾನಂದ ಲಿಂಗ ಶೆಟ್ಟಿ ಬಿಟಿ ಚಂದ್ರಶೇಖರ ಸೇರಿದಂತೆ ಅನೇಕರಿದ್ದರು.






























